ಮಹಲಿಂಗಪುರ

ಬೆಳಗಲಿ ಪಟ್ಟಣದಲ್ಲಿ ಸೈನಿಕ ಟ್ರೋಫಿ ಅಂತರರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಬೆಳಗಲಿ ಪಟ್ಟಣದಲ್ಲಿ ಸೈನಿಕ ಟ್ರೋಫಿ ಅಂತರರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ


ಮಹಾಲಿಂಗಪುರ 22: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸಮೀಪದ ರನ್ನ ಬೆಳಗಲಿ ಪಟ್ಟಣದಲ್ಲಿ 8ನೇ ಬಾರಿಗೆ ಹುತಾತ್ಮ ವೀರ ಯೋಧ ಸಿದ್ದು ಕುಂಬಾರ ಸ್ಮರಣಾರ್ಥವಾಗಿ ಅಂತರಾಜ್ಯಮಟ್ಟದ ' ಸೈನಿಕ ಟ್ರೋಫಿ ' ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2022 ಜರುಗಲಿದೆ. 

ಸ್ಥಳ ಜನತಾ ಪ್ಲಾಟ್ ಹತ್ತಿರ ಸರ್ಕಾರಿ ಆಸ್ಪತ್ರೆ ಮೈದಾನದಲ್ಲಿ ಮಾ. 27 ರಿಂದ 31 ರವರೆಗೆ ಎಂಸಿಸಿ ಕ್ರಿಕೆಟರ್ಸ್‌ ಮತ್ತು ಫ್ರೆಂಡ್ಸ್‌ ಗ್ರೂಪ್ ಸಹಯೋಗದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ವಿಜೇತ ತಂಡಗಳಿಗೆ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಲಾಗುತ್ತದೆ.  

ಪ್ರಥಮ ಸ್ಥಾನ ವಿಜೇತ ತಂಡಕ್ಕೆ ನಗದು 1ಲಕ್ಷ, ದ್ವಿತೀಯ ಸ್ಥಾನಕ್ಕೆ 50ಸಾವಿರ, ಸೆಮಿಫೈನಲ್ ಪ್ರವೇಶಿಸಿ ಅಂತಿಮ ಹಂತಕ್ಕೆ ತಲುಪಲು ವಿಫಲಗೊಂಡ ಎರಡು ತಂಡಗಳಿಗೆ ತಲಾ 10ಸಾವಿರ ರೂಗಳು ಮತ್ತು ಇನ್ನಿತರೆ ವೈಯಕ್ತಿಕ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಸೈನಿಕ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು.  

 ಪ್ರವೇಶ ಫೀ- 5501/- ರೂಗಳಿದ್ದು, ತಂಡಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕ ಮಾರ್ಚ್‌ 25 ಆಗಿದೆ. ತಂಡದಲ್ಲಿ ಒಂದೇ ತಾಲೂಕಿನ ಆಟಗಾರರಿದ್ದು ಅವರಿಗೆ ಸಮವಸ್ತ್ರ, ಶ್ಯೂಜ್ ಕಡ್ಡಾಯ ಮತ್ತು ಅಗತ್ಯ ದಾಖಲೆಗಳಾದ ಓಟರ್ ಆಯ್‌.ಡಿ, ಆಧಾರ ಕಾರ್ಡ್‌, ಡಿ.ಎಲ್ ಇದರಲ್ಲಿ ಯಾವುದಾದರೊಂದನ್ನು ಕಮೀಟಿಗೆ ದೃಢೀಕರಿಸಬೇಕು. ಎಂದು ಈ ಮೂಲಕ ಪಂದ್ಯಾವಳಿಯ ಸಂಯೋಜಕರು ತಿಳಿಸಿದ್ದಾರೆ.  

ಸಂಯೋಜಕರಾದ ಮಾಜಿ ಯೋಧ ಸಂಗಪ್ಪ ಹಿಪ್ಪಲ್ಕರ್ 7483071710, ಕುಮಾರ್ ಹಲಕಿ 9538244072, ಎಂ.ಕ್ವಾರೆಪ್ಪಗೋಳ 6361310341, ಯಮನಪ್ಪ ಮೇತ್ರಿ 9108774103, ಕಲ್ಮೇಶ್ ಮಳಲಿ 9343421912 ಇವರನ್ನು ಸಂಪರ್ಕಿಸಲು ಕೋರಲಾಗಿದೆ. 


ಸುದ್ದಿ ಓದಿ