ಮಹಾಲಿಂಗಪುರ ಪಟ್ಟಣದಲ್ಲಿ ಮಿಲಾದ್ ಉನ್ ನಬಿ ಆಚರಣೆ
ಮಹಾಲಿಂಗಪುರ : ಪಟ್ಟಣದ ಅಂಬೇಡ್ಕರ್ ವೃತ್ತ ಹತ್ತಿರ ಮುಲ್ಲಾ ಜಮಾತ್ ಬಾಂಧವರು ಮುಹಮ್ಮದ್ (ಸ) ಅವರ ಜನ್ಮದಿನ ಪ್ರಯುಕ್ತ ಮಿಲಾದುನ್ನಬಿ ಆಚರಿಸಿದರು.
ಪವಿತ್ರ ಕುರಾನ್ ಓದಿ ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸಿ ದುವಾ ಬೇಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಾದಿಯಾಗಿ ತಲೆ ಪೇಠ ಸಹಿತ ಹೊಸ ಬಟ್ಟೆ ತೊಟ್ಟು, ಸುಗಂಧ ದ್ರವ್ಯ ಲೇಪಿಸಿಕೊಂಡು ಅರ್ಥಪೂರ್ಣವಾಗಿ ಈದ್ ಮಿಲಾದ್ ಆಚರಿಸಿದರು.