ಮಹಲಿಂಗಪುರ

ಸತ್ಸಂಗದಿಂದ ಮಾನಸಿಕ ನೆಮ್ಮದಿ ಸಾಧ್ಯ : ಶ್ರೀಮಂತ ಮಹಾರಾಜ

ಸತ್ಸಂಗದಿಂದ ಮಾನಸಿಕ ನೆಮ್ಮದಿ ಸಾಧ್ಯ : ಶ್ರೀಮಂತ ಮಹಾರಾಜ

ಸಿದ್ದಾರೂಢ ಮಠದಲ್ಲಿ ಸಿದ್ಧಾರೂಢರ 158 ನೇ ಸತ್ಸಂಗ ಕಾರ್ಯಕ್ರಮ 

 ಮಹಾಲಿಂಗಪುರ 18: ಮನುಷ್ಯ ಯಾವುದೇ ವಿಷಯದಲ್ಲಿ ಅನುಭವವಿಲ್ಲ  ಅಂದರೆ ಆ ವ್ಯಕ್ತಿಗೆ ಗೌರವ ಕಡಿಮೆ ಸಿಗುತ್ತದೆ, ಜಗತ್ತಿನಲ್ಲಿ ಅನುಭವಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೆ ಇಲ್ಲ ಯಾವುದೇ ನೌಕರಿಗೆ ಅರ್ಜಿ ಕರೆದರು ಇಷ್ಟು ವರ್ಷಗಳ ಅನುಭವ ಇರುವವರಿಗೆ ಆದತ್ತೆ ಕೊಡಲಾಗುವದು ಎಂದು ನಮೂದಿಸಿರುತ್ತಾರೆ, ಅದಕ್ಕೆ ಮಹಾತ್ಮರು ಅನುಭವಿಗಳು ಹೇಳುವುದು ಒಂದೇ ಮಾತು ಅನುಭವ ಇರುವಲ್ಲಿ ಅಮೃತ ಇರುತ್ತದೆ,ಸತ್ಸಂಗಗಳಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯ ಎಂದು ಮಾರಾಪುರದ ಶರಣರಾದ ಶ್ರೀಮಂತ ಮಹಾರಾಜರು ಹೇಳಿದರು. 

ನಗರದ ಸಿದ್ದಾರೂಢ ಮಠದಲ್ಲಿ ನಡೆದ ಸಿದ್ದಾರೂಡರ 158 ನೇ ಸತ್ಸಂಗ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಮನುಷ್ಯ ಮಾನಸಿಕ  ನೇಮದಿ  ಕಂಡುಕೊಳಲು  ಅನುಭವ ಗಳಿಸಿಕೊಳಲು ಹಲವು ವಿಧ  ಹಲವು ದಾರಿ ಹುಡುಕುತ್ತಲೇ ಇರುತ್ತಾನೆ, ಮನುಷನಿಗೆ ತಾನು ಮಾಡುವ ಯಾವದೇ ಕೆಲಸ ಮಾಡಬೇಕಾದರೆ ಅದಕ್ಕೆ ತರಬೇತಿ ಹಾಗೂ ಅನುಭವ ಬಹಳ ಮುಖ್ಯ, ಅನುಭವ ಪಡೆಯಲು ಅನುಭಾವಿಗಳ ಮಾತುಗಳನ್ನು ಕೇಳುವದು ಮಹಾತ್ಮರ ಸತ್ಸಂಗದಲ್ಲಿ ಭಾಗವಹಿಸುವದು ಇದರಿಂದ ಅನುಭವ ಪಡೆಯಬಹುದು ಸತ್ಸಂಗಗಳು ಮನುಷ್ಯನಿಗೆ ಅನುಭವ ನೆಮ್ಮದಿ ಸುಖ ಶಾಂತಿ ಸಾಧ್ಯ.ಗಾಂಧೀಜಿ, ಬುದ್ಧ, ಮಹಾವೀರ, ಇನ್ನೂ ಅನೇಕ ಮಹಾಪುರುಸರು ಅನುಭವಿಗಳ ಸಂದೇಶಗಳು ಮನುಕುಲಕ್ಕೆ ಎಂದೆಂದಿಗೂ ಮಾದರಿಯಾಗಿವೆ, ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರಿದ ತಕ್ಷಣ ಯುದ್ಧದಲ್ಲಿ ಭಾಗವಸಲು ಸಾಧ್ಯವಿಲ್ಲ ಆತನಿಗೆ ಅನುಭವ ತರಬೇತಿ ಬೇಕು ಆಗಲೇ ಯುದ್ದ ಮಾಡಲು ಸಾಧ್ಯ,ಸಮಾಧಾನ ಶಾಂತಿಯನ್ನು ಹುಡುಕಿಕೊಂಡು ಎಲ್ಲೆಲೋ ಹೋಗುವ ಮನುಷ್ಯ ಮಾನಸಿಕ ನೆಮ್ಮದಿ ಇಲ್ಲ ಅಂದರೆ ಬದುಕು ಕಷ್ಟ ಅನಿಸುತ್ತದೆ, ಆಗ ಅವನಿಗೆ ಅನುಭವ ತರಬೇತಿ ಬೇಕು ಬದುಕಿಗೆ ನೆಮ್ಮದಿ ಸಮಾಧಾನ ಬೇಕೆಂದರೆ ಮಾನಸಿಕ ಸುಖ ,ಶಾಂತಿ,ತೃಪ್ತಿ, ಸಮಾಧಾನ ಮುಖ್ಯ ಆದರೆ ಇವು ಎಲ್ಲವೂಕ್ಕೂ ಅನುಭವ ಮುಖ್ಯವಾಗಿ ಬೇಕು ಅದು ಸಿಗುವ ಏಕೈಕ ಸ್ಥಳ ಅಂದರೆ ಅದು ಮಹಾತ್ಮರ ಸತ್ಸಂಗದಿಂದ ಮತ್ತು ತರಬೇತಿಗಳಿಂದ ಮಾತ್ರ ಸಾಧ್ಯ, ಆದ್ದರಿಂದ ಪ್ರತಿಯೊಬ್ಬರೂ ಒಂದಿಲ್ಲಾ ಒಂದು ಸತ್ಸಂಗದಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಅನುಭವ,ಸಮಾಧಾನ ಕಂಡುಕೊಳಬಹುದು ಅನುಭವ ಅಮೃತಕ್ಕೆ ಸಮಾನ ಎಂದರು. 

ನಂತರ ಮಾತನಾಡಿದ ಶರಣರಾದ ಮಹೇಶ ಇಟಕ್ಕನವರ   ಸಿದ್ದಾರೂಢರು ಸಕಲ ಮತೋಧಾರಕರಾಗಿದ್ದರು .ಅವರು ಎಲ್ಲ ಭಕ್ತರನ್ನು ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದರು. ಅಂತವರ  ಸತ್ಸಂಗದಲ್ಲಿ ನಾವು ಭಾಗಿಯಾಗಿರುವುದು ನಮ್ಮ ಪುರ್ವ ಜನ್ಮದ ಪುಣ್ಯದ ಫಲ ಕಳೆದ ಮೂರು ವರ್ಷದಿಂದ ನಡೆದುಕೊಂಡು ಬಂದಿರುವುದು ಸಂತಸ ತಂದಿದೆ ಈ ಸತ್ಸಂಗ ನಿರಂತರ ನಡೆಯಲಿ ಬಹಳಷ್ಟು ಜನರಿಗೆ ನೆಮ್ಮದಿ ತರಲಿ ಎಂದು ಆಶೀಸಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಸವರಾಜ ಮೇಟಿ, ಶಿವಶಂಕರ ಟಿರ್ಕಿ ಮಾತನಾಡಿದರು ಈ ಸಂಧರ್ಭದಲ್ಲಿ ಮುಖಂಡರಾದ ಶಿವನಗೌಡ ಪಾಟೀಲ ಎಸ್ ಕೆ ಗಿಂಡೆ,ಡಾ ಮಹದೇವ್ ಕದ್ದಿಮನಿ  ಕಲ್ಲಪ್ಪ ಚಿಂಚಲಿ,ಮಹಾಲಿಂಗ ಬಿಂಜಲಭಾವಿ ಮಹಾದೇವ ಮರೆಗುದ್ದಿ ಶಿವಾನಂದ ಮರೆಗುದ್ದಿ,   ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯಲ್ಲನಗೌಡ ಪಾಟೀಲ ಮಹೇಶ್ ಇಟಕ್ಕನವರ ಮಹಾಪ್ರಸಾದದ ವ್ಯವಸ್ಥೆ ಮಾಡಿದರು ಶಿಕ್ಷಕರಾದ ಹುಮಾಯಿನ್ ಸುತಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ