ಮಹಲಿಂಗಪುರ

12ರಂದು ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ

12ರಂದು ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ

ಮಹಾಲಿಂಗಪುರ 5: ಕೋಹಿನೂರ್ ಯೂತ್ ಸ್ಪೋರ್ಟ್ಸ್ ಕ್ಲಬ್  ಆಶ್ರಯದಲ್ಲಿ ನಗರದ ಮಹಾಲಿಂಗೇಶ್ವರ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲಿ ಫೆ.12ರಂದು ದ್ವಿತೀಯ ಬಾರಿಗೆ ಅಂತರರಾಜ್ಯಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಜರುಗಲಿದೆ

ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಬಹುಮಾನ ರೂ.25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10ಸಾವಿರ, ಚತುರ್ಥ ಬಹುಮಾನ 5 ಸಾವಿರ ರೂ. ನೀಡಲಾಗುವುದು. 

ಪಂದ್ಯಾವಳಿಯಲ್ಲಿ ಉತ್ತಮ ಹಿಡಿತ, ಉತ್ತಮ ದಾಳಿ, ಎಲ್ಲ ಆಯಾಮಗಳಲ್ಲಿ ಸವಾರ್ಂಗೀಣ ಆಟವಾಡಿದ ಕ್ರೀಡಾಳುಗಳಿಗೆ ಬೆಳ್ಳಿಯ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. 

ತಂಡವನ್ನು ಪ್ರತಿನಿಧಿಸುವ ಆಟಗಾರರು ಒಂದೇ ಊರಿನವರಾಗಿರಬೇಕು. ದೃಢೀಕರಿಸುವ ಅಗತ್ಯ ದಾಖಲಾತಿ ಪಂದ್ಯಕ್ಕೆ ಮುಂಚೆ ವ್ಯವಸ್ಥಾಪಕರಿಗೆ ನೀಡಿ ಸಮಯಕ್ಕೆ ಸರಿಯಾಗಿ ಅಂಕಣದಲ್ಲಿ ಹಾಜರಿರಬೇಕು. ಕೊರೊನಾ ನಿಯಂತ್ರಣ ಸಲುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ತಂಡಗಳ ಸದಸ್ಯರಿಗೆ ಊಟ-ವಸತಿ ನೀಡಲಾಗುವುದು ಎಂದು ಸಂಚಾಲಕರಾದ ಅಬ್ದುಲ್ ಪೆಂಡಾರಿ, ರಿಯಾಜ್ ಪೆಂಡಾರಿ, ಇರ್ಷದ್ ಪಟೇಲ್, ದೈಹಿಕ ಶಿಕ್ಷಕ ಮೇತ್ರಿ ಸರ್, ಜಂಬಾಟ್ ಕರೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ದೂರವಾಣಿಸಂಖ್ಯೆ 88673 85377, 8073384313, ಸಂಪರ್ಕಿಸಲು ಕೋರಿದ್ದಾರೆ.

ಸುದ್ದಿ ಓದಿ