ಮಹಲಿಂಗಪುರ

ಪುರುಷರ ಮುಕ್ತ ಡಬಲ್ಸ್‌ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು

ಪುರುಷರ ಮುಕ್ತ ಡಬಲ್ಸ್‌ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು
ಸ್ಥಳೀಯ ಕೆ.ಎಲ್‌.ಇ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರ ಮುಕ್ತ ಡಬಲ್ಸ್‌ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಗಣ

ಮಹಾಲಿಂಗಪುರ19:  ಕ್ರೀಡೆ ಜೀವನದ ಪ್ರಮುಖ ಭಾಗ, ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾ ವಿಭಾಗ ಹಾಗೂ ಯೂಥ್ಸ್‌ ಸ್ಪೋರ್ಟ್ಸ್‌ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪುರುಷರ ಮುಕ್ತ ಡಬಲ್ಸ್‌ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ, ಇಂದಿನ ಬಿಡುವಿಲ್ಲದ ದಿನಚರಿ, ಕ್ರೀಡೆಗಳು ಆರೋಗ್ಯ ವೃದ್ಧಿಗೆ ಏಕೈಕ ಸಾಧನ ಮತ್ತು ಮನರಂಜನೆಯ ಜೊತೆಗೆ ಬದುಕಿನ ಅಭಿವೃದ್ಧಿಗೂ ಸಹಕಾರಿಯಾಗಿವೆ ಎಂದರು. 

ಈ ಪಂದ್ಯಾವಳಿಯಲ್ಲಿ ಸುಮಾರು 25 ತಂಡಗಳು ಭಾಗವಹಿಸಿದ್ದವು. 

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ಎಂ.ಪಾಟೀಲ ವಹಿಸಿದ್ದರು. ಕಾಂಗ್ರೆಸ್ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ಸಂಘಟನಾ ಕಾರ್ಯದರ್ಶಿ ವಿ.ಎಸ್‌.ಅಂಗಡಿ, ಕಾರ್ಯದರ್ಶಿ ಎ.ಎಂ.ಉಗಾರೆ, ಆರ್‌.ಎಸ್‌.ಪೂಜಾರಿ, ವಿ.ಎಂ.ಮುಧೋಳ, ಸಹಸಂಘಟಕ ಮಹಾಂತೇಶ ಬುರುಕುಲೆ, ಸಲೀಂ ಹಳಿಂಗಳಿ, ದೀಲೀಪ ಸುಣದೊಳಿ, ಮಾನಪ್ಪ ಬಗಲಿ, ವಿಜಯ ಕುರಿ ಹಲವರು ಇದ್ದರು. 


ಸುದ್ದಿ ಓದಿ