ಮಹಲಿಂಗಪುರ

17ರಂದು ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್

17ರಂದು ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್

ಮಹಾಲಿಂಗಪುರ 13: ದಿವಂಗತ ಮಹಾಂತೇಶ ಜಕ್ಕಣ್ಣವರ್, ಶಂಕರ್ ಗೊಂಬಿ, ಬಶೀರ್ ಸೌದಾಗರ್ ಇವರ ಸ್ಮರಣಾರ್ಥಕವಾಗಿ ಸ್ಥಳೀಯ ಮಹಾತ್ಮಗಾಂಧಿ ಕ್ರೀಡಾಂಗಣ ( ಸರ್ಕಾರಿ ಪದವಿ ಪೂರ್ವ ಕಾಲೇಜು)ದಲ್ಲಿ ಮಾ. 17ರಿಂದ 5ದಿವಸಗಳವರೆಗೆ ಟೆನಿಸ್ ಬಾಲ್ ಅಂತರ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಮಹಾಲಿಂಗಪುರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ  ಆಯೋಜಿಸಲಾಗಿದೆ.ನಗರದ ಖ್ಯಾತ ವೈದ್ಯ ಡಾ.ಎ.ಆರ್ ಬೆಳಗಲಿ ಪ್ರಥಮ ಬಹುಮಾನ 1ಲಕ್ಷ ರೂ, ದ್ವಿತೀಯ ಬಹುಮಾನ ಡಾ.ವಿಜಯ ಹಂಚಿನಾಳ್ 50ಸಾವಿರ ರೂ, ಸೆಮಿಫೈನಲ್ ಹಂತದವರೆಗೆ ಉತ್ತಮ ಪ್ರದರ್ಶನ ನೀಡುವ ಎರಡು ತಂಡಗಳಿಗೆ ಸಮಾಧಾನಕರ ಬಹುಮಾನಗಳಾದ ತಲಾ 10ಸಾವಿರ ರೂಗಳನ್ನು ಯುವ ಧುರೀಣ ಈಶ್ವರ್ ಚಮಕೇರಿ ಹಾಗೂ ಸಿದ್ದಪ್ಪ ಕೊಣ್ಣೂರ ನೀಡಿದ್ದಾರೆ.

ಇದೇ ಟೂರ್ನಿಯಲ್ಲಿ ವೈಯಕ್ತಿಕ ಆ ಬಹುಮಾನಗಳನ್ನು ಕೂಡ ನೀಡಲಾಗುವುದು.ಸರಣಿ ಪುರುಷೋತ್ತಮ, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ಬೌಲರ್, ಬೆಸ್ಟ್ ವಿಕೆಟ್ ಕೀಪರ್, ಬೆಸ್ಟ್ ಆಲ್ರೌಂಡರ್ ಇವರಿಗೆ ತಲಾ ಉತ್ತಮ ಕಂಪನಿಯ ಸೈಕಲ್ ನೀಡಲಾಗುವುದು.ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಮಾ. 15 ಆಗಿದೆ. ಭಾಗವಹಿಸುವ ತಂಡದ ಆಟಗಾರರಿಗೆ ಸಮಸ್ತ್ರ ಕಡ್ಡಾಯಗೊಳಿಸಲಾಗಿದೆ. ತಪ್ಪಿದಲ್ಲಿ ತಂಡಕ್ಕೆ 5ರನ್ನುಗಳ ದಂಡ ಹೇರಲಾಗುವುದು. ಆಟಗಾರರು ಒಂದೇ ಊರಿನವರಾಗಿದ್ದು, ದೃಢಪಡಿಸುವ ಒರಿಜಿನಲ್ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎಂದು ಪಂದ್ಯಾವಳಿಯ ಸಂಚಾಲಕ ಬಸವರಾಜ ರಾಯರ, ಶಿವಶಂಕರ್ ಗುಜ್ಜರ್, ಮಹಾದೇವ ಕಡಬಲ್ಲವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿಠ್ಠಲಗೌಡ ಕುಳಲಿ, ಭೀಮಸಿ ಚನ್ನದಾಸರ್ ಮುಂತಾದವರು ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗಾಗಿ 9845491516, 8123663354, 9844879713 ಸಂಪರ್ಕಿಸಿಬಹುದು.

ಸುದ್ದಿ ಓದಿ