ಜ್ಞಾನೇಶ ಕುಮಾರ್ ರಾಜೀನಾಮೇಗೆ ಮತ್ತು ಎಸ್.ಐ.ಆರ್. ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ಮನವಿ
ಹೊಸಪೇಟೆ 12: ಭಾರತದ ಚುನಾವಣಾ ಆಯೋಗವು ಸ್ವತಂತ್ರ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾದ ಅತ್ಯುನ್ನತ ಸಂವಿಧಾನಿಕ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ ವಿದ್ಯಾಮಾನಗಳು ಹಾಗೂ ಚುನವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರ ನಿಧಾರಗಳು ಚುನಾವಣೆ ವ್ಯವಸ್ಥೆ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಸಿಯುವಂತೆ ಮಾಡಿದೆ. ಬಿ.ಜೆ.ಪಿ. ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಉದ್ದೇಶ ಪೂರ್ವಕವಾಗಿ ಸರಿ ಸುಮಾರು 13-ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣೆಗಳನ್ನು ಗೆಲ್ಲಲ್ಲು ಸಂಚು ರೂಪಿಸಿ ಕೇಂದ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿದೆ.
ಚುನವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕಾರಣಕ್ಕೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯಲು ಜ್ಞಾನೇಶ್ ಕುಮಾರ್ ತಕ್ಷಣವೇ ನಮ್ಮ ಚುನಾವಣಾ ಆಯುಕ್ತರ ಹುದ್ದೆಗೆ ರಾಜಿನಾಮೆ ನೀಡಬೇಕು. ಯಾಕೆಂದರೆ ಕರ್ನಾಟಕದಲ್ಲಿ ಅಕ್ಟೋಬರ್ 6ನೇ ತಾರೀಖು ಜಯನಗರದಲ್ಲಿ ನಮೂನೆ-7 ದುರ್ಬಳಕೆ ಆರೋಪ 5-ಜನ ವಿರುದ್ದ ಎಫ್.ಐ.ಆರ್. ಹಾಕಲಾಗಿದೆ. ಇದರಲ್ಲಿ ಬಿ.ಜೆ.ಪಿ .ಮುಖಂಡರು ಭಾಗಿಯಾಗಿದ್ದಾರೆ. ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7561 ಮತದಾರರ ಹೆಸರು ಅಳಿಸಲು ಸಂಚುರೂಪಿತವಾಗಿರುವ ಬಿ.ಜೆ.ಪಿ. ಏಜೆಂಟ್ ವಿರುದ್ದ ಎಫ್.ಐ.ಆರ್.ಆಗಿದೆ.
ಅಕ್ಟೋಬರ್ 9 ಮತಗಳ್ಳತನಕ್ಕೆ ಚಿಕ್ಕಮಗಳೂರು ಕೊಪ್ಪ ತಾಲೂಕಿನಲ್ಲಿ 243 ಅರ್ಹ ಮತದಾರರ ಹೆಸರುಗಳನ್ನು ರದ್ದು ಮಾಡಿಸಲು ಹೋಗಿ ಕೊಪ್ಪ ತಾಲೂಕು ಬಿ.ಜೆ.ಪಿ. ಅಧ್ಯಕ್ಷರು, ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವ ವಿಚಾರ ಸಲ್ಲಿಸಿದ ಫಾರಂ-7 ಅರ್ಜಿಯನ್ನು ಹಿಂಪಡೆದಿದ್ದಾರೆ.
ಬಸವನಗೌಡ ಯತ್ನಾಳ್ ವಿರುದ್ದ ಎಫ್.ಐ.ಆರ್. ಬದುಕಿರುವ ವ್ಯಕ್ತಿಗಳನ್ನು ಸತ್ತಿರುವುದು ಎಂದು ಸಾಬೀತು ಪಡಿಸಲು ಹೋಗಿ ಈ ವಿಷಯವು ಚರ್ಚೆಗೆ ಕಾರಣವಾಗಿದೆ ಹೀಗೆ ಅನೇಕ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ, ಹಿಂದುಳಿದವರ ದಲಿತರ ಮತಗಳನ್ನೆ ಗುರಿಯಾಗಿಸಿದ್ದಾರೆ. ಆದ್ದರಿಂದ ಪ್ರಸ್ತುತ ಜಾರಿಯಲ್ಲಿರುವ ಜಾರಿಗೊಳಿಸಲು ಉದ್ದೇಶಿಸಿರುವ ಎಸ್.ಐ.ಆರ್. ಪ್ರಕ್ರಿಯೆಯು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತು ನಾಗರಿಕರ ಹಕ್ಕುಗಳಿಗೆ ಧಕ್ಕೆ ತಂದಿದೆ. ಸಾರ್ವಜನಿಕ ಹಾಗೂ ಪಾರದರ್ಶಕ ಚುನಾವಣೆಗಾಗಿ ಅಡಚಣೆ ಉಂಟಾಗುತ್ತಿರುವುದರಿಂದ ಇದನ್ನು ತಕ್ಷಣದಿಂದಲೇ ಜಾರಿಗೆ ಬರದಂತೆ ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದರು.
ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತ ಚುನಾವಣೆಗಳೂ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಆದ್ದರಿಂದ ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿ ನೀವು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.ದಿ. 12ರಂದು ಹೊಸಪೇಟೆ ನಗರದ ಡಾಽಽ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆ ಮುಖಾಂತರ ತಹಶೀಲ್ದಾರರ ಕಛೇರಿಗೆ ತೆರಳಿ ತಹಶೀಲ್ದಾರರ ಮೂಲಕ ಮಾನ್ಯ ರಾಷ್ಟ್ರಪತಿಯವರಿಗೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ರವಿಕುಮಾರ್‌ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಮಲಾಪುರ ಬ್ಲಾಕ್ ಅಧ್ಯಕ್ಷ ಅಲ್ಲಾಭಕ್ಷಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಡಿ.ವೆಂಕಟರಮಣ, ಪ.ಜಾ. ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ, ಕೆ.ಮಹೇಶ್ ನಗರಸಭೆ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಯೋಗಲಕ್ಷ್ಮಿ, ಕೆ.ಮಹೇಶ್ ವಕೀಲರು, ಮಾಜಿ ನಗರಸಭೆ ಸದಸ್ಯರಾದ ಬಡಾವಲಿ, ಪಲ್ಲೆದ ಸಿದ್ದೇಶ್ ಮಾಜಿ ನಗರಸಭೆ ಸದಸ್ಯರು, ಕಾರಿಗನೂರು ಎರಿ್ರಸ್ವಾಮಿ, ಸಣ್ಣಮಾರೆಪ್ಪ, ಅನಿತಾ.ಎಸ್. ಗಿಂಜಿಮಂಜುನಾಥ ಮಾಜಿ ನಗರಸಭೆ ಸದಸ್ಯರು, ಗುಜ್ಜಲ್ ನಿಂಗಪ್ಪ ಮಾಜಿ ನಗರಸಭೆ ಸದಸ್ಯರು, ಯುವ ಕಾಂಗ್ರೆಸ್ ಸಮಿತಿಯ ಬ್ಲಾಕ್ ಅಧ್ಯಕ್ಷ ಪ್ರದೀಪ್‌ನಾಯ್ಕ್, ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಶಿವಕುಮಾರ್, ರಾಜಸಾಬ್, ರಾಘವೇಂದ್ರ, ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.