ಅಟೋರೀಕ್ಷಾ ಹಾಗೂ ಟ್ರ್ಯಾಕ್ಸ್ ಗೂಡ್ಸ್ ವಾಹಗಳ ಮಾಲಿಕರ ಮತ್ತು ಚಾಲಕರ ಸಭೆ : ಸಂಜಯ ತಿಪ್ಪಾರೆಡ್ಡಿ
ಮುದ್ದೇಬಿಹಾಳ 07: ಇತ್ತಿಚಿಗೆ ಪಟ್ಟಣದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೇಲೆಯಲ್ಲಿ ಪಿ ಎಸ್ ಐ ಸಂಜಯ ತಿಪ್ಪಾರೆಡ್ಡಿ ನೇತೃತ್ವದ ಪೋಲಿಸ್ ಇಲಾಖೆ ನಗರದ ಅಟೋಗಳ ರೀಕ್ಷಾ ಹಾಗೂ ಟ್ರ್ಯಾಕ್ಸ್ ಗೂಡ್ಸ್ ವಾಹಗಳ ಮಾಲಿಕರ ಹಾಗೂ ಚಾಲಕರ ಸಭೆ ನಡೆಸಿ ಪ್ರತಿ ವಾಹನಗಳ ದಾಖಲೆ ಚಾಲನಾ ಪರವಾನಿಗೆ ಪರೀಶೀಲನೆ ನಡೆಸುವ ಮೂಲಕ ಪೋಲಿಸ್ ಇಲಾಖೆಯಿಂದ ಪ್ರತಿ ವಾಹನಕ್ಕೂ ಕ್ರಮ ಸಂಖ್ಯೆ ಮುದ್ರೆ ಅಂಟಿಸಲಾಯಿತು.
ಈ ವೇಳೆ ಪಿಎಸೈ ಸಂಜಯ ತಿಪ್ಪಾರಡ್ಡಿಯವರು ಮಾತನಾಡಿ ಸರಕಾರದ ನಿಮಾನುಸಾರು ಪ್ರತಿಯೊಬ್ಬ ವಾಹನ ಚಾಲಕರು ಹಾಗೂ ಮಾಲಿಕರು ವಾಹನದ ಇನ್ಸೂರೇನ್ಸ್, ಡೈವ್ಹಿಂಗ್ ಲೈಸನ್ಸ್, ರೋಡ್ ಟ್ಯಾಕ್ಸ್ ಸೇರಿದಂತೆ ಇತರೇ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು, ಅಟೋ ಚಾಲಕರು ಶಾಲಾಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಳ್ಳಬಾರದು, ಜೊತೆಗೆ ಗೂಡ್ಸ್ ವಾಹನ ಚಾಲಕರು ತಮಗೆ ನೀಡಿರುವ ಪರವಾನಿಗೆ ಸಂಚಾರಿ ನಿಯಮವನ್ನು ಮೀರಿ ನಡೆದುಕೊಳ್ಳಬಾರದು. ಇದರಿಂದ ಯಾರೇ ಆಗಲಿ ಆಕಸ್ಮೀಕ ಅಪಘಾತಗಳು ಸಂಭವಿಸಿದರೇ ನೇರ ಹೊಣೆ ಆಯಾ ವಾಹನದ ಮಾಲಿಕ ಹಾಗೂ ಚಾಲಕರೇ ಹೋನೆಯಾಗಲಿದ್ದಿರಿ ಎಂಬುದನ್ನು ಅರ್ಥೈಸಿಕೊಂಡು ಕಾನೂನು ಉಲ್ಲಂಘಸಿ ನಿಯಮಬಾಹಿರ ನಡೆಯದಂತೆ ನೋಡಿಕೊಳ್ಳಬೇಕು.
ಇನ್ನು ದ್ವೀಚಕ್ರ ವಾಹನ ಸವಾರರು ಅತಿಯಾದ ವೇಗದ ವಾಹನ ಓಡಿಸುವುದು ಕರ್ಕಷ ಶಬ್ಧದ ಹಾರ್ನ ಹಾಕುವುದು ಸೈಲೇನ್ಸ್ ರ್ ಇರುವುದರಿಂದ ಜನಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡುವುದು ಸರಿಯಲ್ಲ ಹಾಗೊಂದು ಕಂಡುಬಂದರೆ ತಕ್ಷಣವೇ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಅರಿವೂ ಮೂಡಿಸಿದರು.
ಈ ವೇಳೆ ಪೋಲಿಸ್ ಸಿಬ್ಬಂದಿಗಳಾದ ಶಾಂತಗೌಡ ಬನ್ನೇಟ್ಟಿ, ಸಂಗಮೆಶ ಚಲವಾದಿ, ಸಿ ಎಸ್ ಅಸ್ಕಿ, ಎ ವಾಯ್ ಸಾಲಿ, ಎ. ಬಿ ಟಕ್ಕಳಕಿ, ಭರತ ಕಾಸರ,ಎ. ವಾಯ್ ಮೋಕಶಿ, ಆರ್. ಎಸ್ ಇಂಗಳಗಿ, ಶಿವಾನಂದ ಮ್ಯಾಗೇರಿ, ರಮೇಶ ಮಾದರ ಸೇರಿದಂತೆ ಹಲವರು ಇದ್ದರು.