ಮಹಾಸಮಾಧಿ ದಿನ ಪ್ರಯುಕ್ತ ಧ್ಯಾನ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 01: ನಗರದ ಸದಾಶಿವನಗರದ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದ ವತಿಯಿಂದ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ದಿವಸದ ಪ್ರಯುಕ್ತ ಧ್ಯಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಧ್ಯಾನ ಕೇಂದ್ರ ಪದಾಧಿಕಾರಿಗಳು, “ಆಧುನಿಕ ಯುಗದಲ್ಲಿ ಕಣ್ಮರೆಯಾಗಿದ್ದ ಕ್ರಿಯಾ ವಿಜ್ಞಾನವನ್ನು ಜಗತ್ತಿಗೆ ಪುನಃ ಪರಿಚಯಿಸಿದ ಮಹಾನ್ ಗುರುಗಳು ಶ್ರೀ ಲಾಹಿರಿ ಮಹಾಶಯರು. ಲಾಹಿರಿ ಮಹಾಶಯರ ಯೋಗ ಮೂಲ ಹೆಸರು ಶ್ಯಾಮಾಚರಣ್ ಲಾಹಿರಿ.
1828ರ ಸೆ. 30ರಂದು ಬಂಗಾಳದಲ್ಲಿ ಜನಿಸಿದ ಇವರು, ಹಿಮಾಲಯದ
ರಾಣಿಖೇತ್ ಬಳಿ ಪರಮಗುರು ಮಹಾವತಾರ ಬಾಬಾಜಿ ಅವರಿಂದ ಕ್ರಿಯಾ ಯೋಗದ ದೀಕ್ಷೆ ಪಡೆದಿದ್ದರು. ಅವರು ವಿವಾಹಿತರಾಗಿದ್ದರೂ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಆಧ್ಯಾತ್ಮಿಕ ಅತ್ಯುನ್ನತ ಶಿಖರವನ್ನು ತಲುಪಬಹುದು ಎಂಬುದನ್ನು ಜಗತ್ತಿಗೆ ತೋರಿಸಿ. ಕೊಟ್ಟಿದ್ದಾರೆ,'' ಎಂದರು. ಧ್ಯಾನ ಕೇಂದ್ರದ ಪದಾಧಿಕಾರಿಗಳಾದ ಶಶಿಕಾಂತ ಚುನಮರಿ, ಮಂಜುಳಾ ಚುನಮರಿ, ಶ್ರೀನಿವಾಸ ಕೋರೆ್ಡ, ಕರ್ನಲ್ ಮಾರನಬಸರಿ, ಶೈಲಜಾ ಕೋರಿಶೆಟ್ಟಿ ಸೇರಿದಂತೆ ಯೋಗ ಸತ್ಸಂಗದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.