ಮಹಲಿಂಗಪುರ

ಧ್ಯಾನ ಪರಮಾತ್ಮನ ಅರಿಯುವ ಸಾಧನ : ಚಂದ್ರಶೇಖರ ಶ್ರೀ

ಧ್ಯಾನ ಪರಮಾತ್ಮನ ಅರಿಯುವ ಸಾಧನ : ಚಂದ್ರಶೇಖರ ಶ್ರೀ

ಮಹಾಲಿಂಗಪುರ: ಕಣ್ಣಿಗೆ ಕಾಣದ, ಕೈಗೆ ಸಿಗದ  ಗಾಳಿಯನ್ನು ಹಗ್ಗದಿಂದ ಕಟ್ಟಬಹುದು. ಆದರೆ ಚಂಚಲ ಮನಸ್ಸನ್ನು ಒತ್ತಟ್ಟಿಗೆ ನಿಲ್ಲಿಸುವುದು ಅಸಾಧ್ಯ ಎಂದು ಯಡಹಳ್ಳಿಯ ಅಡವಿ ಸಿದ್ದೇಶ್ವರ ಮಠದ ಚಂದ್ರಶೇಖರ ಶ್ರೀ ಹೇಳಿದರು.

ಮಹಾಲಿಂಗಪುರದಲ್ಲಿ ಶರಣ ರುದ್ರಪ್ಪ ಮೋದಿ ಮನೆಯಂಗಳದಲ್ಲಿ ಅಧಿಕ ಮಾಸದ ನಿಮಿತ್ತ ಅವರ ಹಮ್ಮಿಕೊಂಡ ಭಕ್ತಜನ-ಭಾಗ್ಯಸತ್ಸಂಗ ಧಾಮರ್ಿಕ ಕಾರ್ಯಕ್ರಮದ  ಸಾನಿಧ್ಯ ವಹಿಸಿ ಮಾತನಾಡಿದರು.

ಧ್ಯಾನ ಪರಮಾತ್ಮನ ಅರಿಯುವ ಸಾಧನ. ಮನುಷ್ಯ ಜನ್ಮ ಪಾವನವಾಗಿಸಲು ಅಧಿಕ ಮಾಸ ಶ್ರೇಷ್ಠ. ಈ ಪರ್ವಕಾಲದಲ್ಲಿ ದಾನ, ಧ್ಯಾನ, ಪರೋಪಕಾರ ಮಾಡಿ ಗುರು ಕೃಪೆಗೆ ಪಾತ್ರರಾಗಲು ತಿಳಿಸಿದರು.

ಮುಗಳಖೋಡದ ಸಿದ್ಧಾರೂಢ ಭಾರತಿ ಆಶ್ರಮದ ಶರಣ ಬಸವ ಶಾಸ್ತ್ರೀಜಿ ಮಾತನಾಡಿ, ಮನದ ಹಿಡಿತದಲ್ಲಿದ್ದವರು ಅಜ್ಞಾನಿಗಳು, ಮನವ ಹಿಡಿತದಲ್ಲಿಟ್ಟವರು ಸುಜ್ಞಾನಿಗಳು. ಹುಸಿ, ಕಳವು, ಅನಾಚಾರ, ಕಾಮ, ಲೋಭಗಳಿಂದ ಕೂಡಿದ ಮನಸ್ಸು ಅಶುದ್ಧ. ಮನಶುದ್ದಿಯೇ ಮೋಕ್ಷಕ್ಕೆ ದಾರಿ ಎಂದರು. ಇಂದಿರಾ ಮೋದಿ ಅವರು ಶ್ರೀಗಳ ಪಾದಪೂಜೆಗೈದರು. ಬಸಪ್ಪ ಗಣಪ್ಪಗೋಳ ವಂದಿಸಿದರು.


ಸುದ್ದಿ ಓದಿ