ಭಗವಂತನ್ನು ಧ್ಯಾನಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ
ಸಿಂದಗಿ 03: ಜಗತ್ತಿಗೆ ಭಗವಂತ ಒಬ್ಬನೆ ಆಗಿದ್ದು ಅತನನ್ನು ಧ್ಯಾನಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇವರು ಹಮ್ಮಿಕೊಂಡ 86ನೇ ಶಿವ ಜಯಂತಿ ಪ್ರಯುಕ್ತ ದ್ವಾದಶ ಜ್ಯೋತಿಲಿಂರ್ಗ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವನನ್ನು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಪವಿತ್ರಾಜಿ, ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ, ನಾಗರತ್ನ ಮನಗೂಳಿ, ಸೀಮಾ ಉಡಚಣ, ವಿಜಯಕುಮಾರ, ತಾನಾಜಿ, ಪಿಎಸ್ಐ ನಿಂಗಣ್ಣ ಪೂಜಾರಿ ಅಗ್ನಿಶಾಮಕ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ , ಡಾ.ಎಸ್.ಬಿ. ಚಿಕ್ಕಲಗಿ, ವಿಶ್ರಾಂತ ಪ್ರಾಚಾರ್ಯ ಬಿ.ಪಿ. ಕರ್ಜಗಿ, ಬಿ.ಜಿ. ಪಾಟೀಲ, ಎಸ್.ಎಸ್. ಪಾಟೀಲ, ಪ್ರಮೀಳಾ ಪಾಟೀಲ, ಎಸ್.ಎಸ್. ಬುಳ್ಳ, ಎಸ್.ವೈ. ಬಿರಾದಾರ, ಎಸ್.ಬಿ. ಚೌಧರಿ, ಶಾಂತಪ್ಪ ರಾಣಾಗೊಳ, ಕೆ.ಎಸ್. ಪತ್ತಾರ, ಎಂ.ಎಂ. ದೊಡಮನಿ, ಬಸವರಾಜ ಕಕ್ಕಳಮೆಲಿ, ಸುನಂದಾ ಕಕ್ಕಳಮೆಲಿ, ಮಂಜುಳಾ ಹೂಗಾರ, ಮಹಾದೇವಿ ಕರಲಗಿ, ನಾಗಮ್ಮ, ಐಶ್ವರ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.