ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿ
ಬಳ್ಳಾರಿ 21: ನಗರದ ಮುಖ್ಯ ಅಂಚೆ ಕಛೇರಿ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಬಾಲಕಿಯರ ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಹಾಗೂ ವಿಶೇಷ ಚೇತನ ಮಕ್ಕಳ ವೈದ್ಯಕೀಯ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿಯ ಪೂರ್ವ ಮತ್ತು ಪಶ್ಚಿಮ ವಲಯ ಹಾಗೂ ಕಂಪ್ಲಿ ತಾಲೂಕಿನ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಶಾಲಾ ಮಕ್ಕಳಿಗೆ 1 ರಿಂದ 12 ತರಗತಿ ಓದುವ ಮಕ್ಕಳಿಗೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ವೈದ್ಯಕೀಯ ಶಿಬಿರ ನೊಂದಣಿ ಹಾಗೂ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೂರ್ವ ಮತ್ತು ಪಶ್ಚಿಮ ವಲಯಗಳ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಸುಮಾರು 400ರಿಂದ 500 ಸಂಖ್ಯೆಯಲ್ಲಿ ವಿಕಲಚೇತನರು ಹಾಗೂ ಅವರ ಪೋಷಕರು ಆಗಮಿಸಿದರು. ಬಂದಿರುವಂತಹ ವಿಕಲಚೇತನರು ಪೋಷಕರು ಹಾಗೂ ಇತರರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಅಚ್ಚುಕಟ್ಟಾಗಿ ಕಾರ್ಯ ವೈಖರಿಯನ್ನು ನಿಭಾಯಿಸಿದರು. ಸೂರ್ಯನಾ ರಾಯಣ ಮಾತನಾಡಿ, 20 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಾವು ವರ್ಷಕ್ಕೆ ಒಂದು ಬಾರಿ ಮಾಡುತ್ತಾ ಬಂದಿದ್ದೇವೆ. ಈ ವರ್ಷ ಪ್ರಮುಖವಾಗಿ ಇದರಲ್ಲಿ ಬುದ್ಧಿ ಮಂದ, ಶ್ರವಣದೋಷ, ಪೂರ್ಣ ದೃಷ್ಟಿ ದೋಷ,ದಹಿಕ ನ್ಯೂನ್ಯತೆ ಇವೆಲ್ಲವನ್ನು ಮಕ್ಕಳಿಗೆ ತಜ್ಞರು ತಪಾಸಣೆ ಮಾಡಿ ಅರ್ಹ ಮಕ್ಕಳಿಗೆ ಸಾಧನೆ ಸಲಕರಣೆಗಳನ್ನು ನೀಡುವಂತೆ ವರದಿಯನ್ನು ಮೇಲೆ ಅಧಿಕಾರಿಗಳಿಗೆ ಸಲ್ಲಿಸಿದರು.
ತರುವಾಯ ವಿಕಲಚೇತನ ಹೊಂದಿರುವ ಮಕ್ಕಳಿಗೆ ಗಆಋ ಗುರುತಿನ ಚೀಟಿಯಲ್ಲಿ 40ಅ ಸಮಗ್ರ ಶಿಕ್ಷಣ ಕರ್ನಾಟಕ ಸರ್ಕಾರ ಅನುಧಾನದಲ್ಲಿ ಹಾಗೂ 60ಅ ಸಾಮಾಜಿಕ ನ್ಯಾಯ ಸಬಲೀಕರಣ ಮಂತ್ರಾಲಯ ಭಾರತ ಸರ್ಕಾರ ಅನುದಾನಗಳ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಪೂರ್ವ ವಲಯ ಶಿಕ್ಷಣ ಅಧಿಕಾರಿಗಳು ಮೆಹಮೂದ್ ರೆಹಮಾನ್, ಕ್ಷೇತ್ರದ ಶಿಕ್ಷಣ ಸಮನ್ವಯ ಅಧಿಕಾರಿ ಅಡ್ಡೇರು ಮಲ್ಲಪ್ಪ, ಪಶ್ಚಿಮ ವಲಯದ ಕ್ಷೇತ್ರದ ಶಿಕ್ಷಣ ಅಧಿಕಾರಿಗಳು ಎಂ.ಸಿದ್ದಲಿಂಗ ಮೂರ್ತಿ ಹಾಗೂ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಮನೋಹರ್,ಃಋಖಖಿ ಗಳಾದ ವೀರಬಸಪ್ಪ, ಸೂರ್ಯನಾರಾಯಣ, ಹಾಗೂ ಕೆ.ನಾಗವೇಣಿ,ಜೆ ಕೆ ಶಾರದ,ವಿಜಯ ಲಕ್ಷ್ಮಿ, ವಿಕಲಚೇತನ ಕಚೇರಿ ವತಿಯಿಂದ ರಾಣಿ,ಇನ್ನೂ ಅನೇಕ ಆಯಾ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೋಷಕರು ಇತರರು ಭಾಗವಹಿಸಿದ್ದರು.