ಮಹಲಿಂಗಪುರ

ಮೇದಾರ ಕೇತಯ್ಯ ಪ್ರವಚನ

ಮೇದಾರ ಕೇತಯ್ಯ ಪ್ರವಚನ

ಮಹಾಲಿಂಗಪುರ 20: ಮೇದಾರ ಕೇತಯ್ಯ ತನ್ನ ತನು-ಮನ-ಧನಗಳನ್ನು ಜಂಗಮಕ್ಕೆ ಅರ​‍್ಿಸಿ ಶಿವಾನುಭವ ತತ್ವಗಳನ್ನು ನಿರೂಪಿಸಿದ ಶ್ರೇಷ್ಠ ಶಿವಾನುಭಾವಿ ಎಂದು ತೋಳನೂರಿನ  ಸಿದ್ದಯ್ಯ ಸ್ವಾಮಿಗಳು ಹೇಳಿದರು. 

ಶಂಭುಲಿಂಗ ಮಹಾಸ್ವಾಮಿಗಳ 16 ನೆಯ ಪುಣ್ಯಾರಾಧನೆ ನಿಮಿತ್ತವಾಗಿ ರನ್ನ ಬೆಳಗಲಿಯ ಶ್ರೀಲಕ್ಷ್ಮಿಗದ್ದಿಗೆ ಗುಡಿಯಲ್ಲಿ ಆಯೋಜಿಸಿರುವ 15 ದಿನಗಳವರೆಗೆ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಶರಣ ಚರಿತಾಮೃತ ಗ್ರಂಥದ ವಿಷಯದ ಮೇಲೆ ಮೇದಾರ ಕೇತಯ್ಯನ ಕುರಿತು ಪ್ರವಚನ ನೀಡಿದ ಅವರು ಕೇತಯ್ಯ ಬಸವಣ್ಣನವರ ಸಮಕಾಲೀನ ಶರಣ. ಅನುಭಾವಿ, ಶುದ್ಧ ಕಾಉಕ ಜೀವಿ, ನಿತ್ಯ ದಾಸೋಹಿ, ಸದ್ಭಕ್ತ, ನಿಷ್ಠೆಯಿಂದ ಕೂಡಿದ ಆಚಾರವಂತ ಎಂದು ಹೇಳಿದರು. 

ಶರಣೆ  ಇಂದುಮತಿ ತಾಳಿಕೋಟಿ ಇವರು ಕಾಯಕ ತತ್ವ ಮತ್ತು ಶರಣ ಮೇದಾರ ಕೇತಯ್ಯನ ಕುರಿತು ಪ್ರವಚನ  ನೀಡಿ ಕೇತಯ್ಯನವರು ಬಸವಣ್ಣನವರ ಜೊತೆ ಸೇರಿ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದರು ಎಂದು ಹೇಳಿದರು. ಮಹಾದೇವ ಕಂಬಾರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ