ಬಳ್ಳಾರಿ

ಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ

ಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ

ಬಳ್ಳಾರಿ 02:  68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಾಗೂ 50ನೇ ವರ್ಷದ ಕರ್ನಾಟಕ ನಾಮಕರಣದ ಅಂಗವಾಗಿ ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಬೈಕ್ ಗಳ ರ್ಯಾಲಿ ಹೊರಟು ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣಕ್ಕೆ ತೆರಳಿ ಕನ್ನಡ ಬಾವುಟವನ್ನು ಹಾರಿಸಿ ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣ ಕರ್ನಾಟಕ  ರಾಜ್ಯೋತ್ಸವದ  ಆಚರಣೆ ಮಾಡಲಾಯಿತು.  

ಕಾರ್ಯಕ್ರಮವನ್ನು ಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಶ್ಯಾಮ್ ಸುಂದರ್, ಜಿಲ್ಲಾಧ್ಯಕ್ಷರಾದ ಕೆ.ಪಿ. ಹಸೇನ್, ಮಾರ್ಗದರ್ಶನದಲ್ಲಿ  ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದಂತಹ ಹೆಚ್‌.ಎಸ್‌. ಸುಧಾಕರ್  ಹೆಗಡೆಯವರ ಪರಿವೇಕ್ಷಣೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳ್ಳಾರಿ ಕಾರ್ಯದರ್ಶಿಗಳಾದ ನಂಜುಂಡಸ್ವಾಮಿ, ಮಾಜಿ ಬಳ್ಳಾರಿ ಬುಡಾ ಅಧ್ಯಕ್ಷರಾದ ಪಾಲಣ್ಣ, ಸೂರ್ಯ ಕಲಾ ಮತ್ತು ಸೇವಾ ಬಳಗ ಸಂಸ್ಥಾಪಕರಾದ ಅಲಿವೇಲು ಸುರೇಶ್, ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಕೆ ಶಾಮ್ ಸುಂದರ್ ರವರು ಜಯ ಕರ್ನಾಟಕ ರಕ್ಷಣಾ ವೇದಿಕೆಯು ಜನರಿಂದ ಜನರಿಗೋಸ್ಕರವಾಗಿದ್ದು ಜನಪರ ಕಾರ್ಯಕ್ರಮಗಳನ್ನು 24*7 ಮಾಡಿಕೊಂಡು ಬಂದಿದ್ದು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲೆಂದು ಅನ್ನದಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಗುಗ್ಗರಹಟ್ಟಿ, ಸೂರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರಾಜಣ್ಣ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಮತ್ತೊಬ್ಬ ಉಪಾಧ್ಯಕ್ಷೆ ಪದ್ಮಾವತಿ, ರಾಜ್ಯ ಕಾರ್ಯದರ್ಶಿಗಳಾದ ಹೇಮಾವತಿ, ಮಹಿಳಾ ಘಟಕದ ನಗರಾಧ್ಯಕ್ಷೆ ಡಿ.ಸುನಿತಾ ಸೇರಿದಂತೆ ಇನ್ನು ಅನೇಕ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು  ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತರಾದ ಚಿದಾನಂದ ಮಲಿಗೇಲಿ ಅವರು ನಿರುಪಣೆ ಮಾಡಿದರು. 


ಸುದ್ದಿ ಓದಿ