ಬೆಳಗಾವಿ

ಸಮಾಜಶಾಸ್ತ್ರವು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧನವಾಗಲಿ

ಸಮಾಜಶಾಸ್ತ್ರವು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧನವಾಗಲಿ

ಲೋಕದರ್ಶನ ವರದಿ 

 ಬೆಳಗಾವಿ 10: ಸಮಾಜಶಾಸ್ತ್ರೀಯ ಸಂಶೋಧನೆಗಳು ಸ್ಥಳೀಯ ಜ್ಞಾನಪದ್ಧತಿ ಹಾಗೂ ಸಮುದಾಯಗಳ ವಾಸ್ತವಿಕ ಸಮಸ್ಯೆಗಳಿಗೆ ಒತ್ತು ನೀಡುವ ಮೂಲಕ ಸಾಮಾಜಿಕ ಬದಲಾವಣೆಗೆ ಪೂರಕವಾಗಬೇಕು ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರವಿ ಎಸ್‌. ದಳವಾಯಿ ಹೇಳಿದರು.  ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಸೆ. 9ರಂದು   ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ದಕ್ಷಿಣ ಆಫ್ರಿಕಾದ ಎಸ್ವಾಟಿನಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಜಿಯಾ ಎ. ಪಠಾಣ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಜ್ಞಾನ ಅಸಮಾನತೆ ಇರುವುದನ್ನು ವಿವರಿಸಿದ ಅವರು, ಸಮಾಜಶಾಸ್ತ್ರವು ಕೇವಲ ಪಾಶ್ಚಿಮಾತ್ಯ ಸೈದ್ಧಾಂತಿಕ ಚೌಕಟ್ಟಿಗೆ ಸೀಮಿತವಾಗದೆ ಸಮುದಾಯ ಕೇಂದ್ರಿತ ಹಾಗೂ ಕಾರ್ಯಪ್ರಧಾನವಾಗಬೇಕು ಎಂದು ಹೇಳಿದರು.  

ಮಹಾತ್ಮ ಗಾಂಧಿಯವರ ಸ್ವರಾಜ್ಯ, ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಗ್ರಾಮಸಭೆಗಳ ಪರಿಕಲ್ಪನೆಗೂ ಆಫ್ರಿಕಾದ ‘ಉಬುಂಟು’ (ಸಾಮೂಹಿಕ ಮಾನವೀಯತೆ) ತತ್ವಕ್ಕೂ ಇರುವ ಸಾಮ್ಯತೆಗಳನ್ನು ಅವರು ವಿಶ್ಲೇಷಿಸಿದರು.  ಪ್ರೊ. ಸುಮಂತ್ ಎಸ್‌. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕಿ ಪ್ರೊ. ಚಂದ್ರಿಕಾ ಕೆ.ಬಿ., ಸಹಪ್ರಾಧ್ಯಾಪಕಿ ಡಾ. ಮಂಜುಳಾ ಜಿ.ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಅದೃಶ್ ಜಿ. ಅತಿಥಿ ಪರಿಚಯ ಹಾಗೂ ವಂದನಾರೆ​‍್ಣ ನೆರವೇರಿಸಿದರು. ವಿಭಾಗದ ಬೋಧಕ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ