ಜಾನಪದ ದೊಡ್ಡಾಟ ಕಲೆಗೆ ಮಾಸ್ತರ್ ಶಿವಶಂಕರಪ್ಪ ಅವರ ಕೊಡುಗೆ ಅಪಾರ: ಡಾ.ಕೆ.ಬಸಪ್ಪ
ಬಳ್ಳಾರಿ ಆ.26, ದೇವಲಾಪುರದ ಬಯಲಾಟದ ಮಾಸ್ತರ್ ಟಿ.ಕೆ.ಶಿವಶಂರ್ಪ ಅವರು ದೊಡ್ಡಾಟದ ಮಾಸ್ತರ್ ಆಗಿ ಅನಕ್ಷರಸ್ಥರಿಗೆ ಸಂಗೀತ, ಸಾಹಿತ್ಯದ ಕಲೆಯನ್ನು ಕಲಿಸುವ ಮೂಲಕ ಕನ್ನಡ ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಅದ್ವಿತೀಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಬಳ್ಳಾರಿಯ ಗಾಯತ್ರಿ ಪ್ರಕಾಶನದ ಪ್ರಕಾಶಕರು ಹಾಗೂ ಸರಳಾದೇವಿ ಕಾಲೇಜಿನ ಉಪನ್ಯಾಸಕರಾದ ಡಾ.ಕೆ.ಬಸಪ್ಪ ಅವರು ತಿಳಿಸಿದರು.
ಅವರು ಸ್ಥಳೀಯ ಬಂಡಿಹಟ್ಟಿಯ ನಿತ್ಯಾನಂದ ಆಶ್ರಮದ ಸಭಾಂಗಣದಲ್ಲಿ ಗಾಯತ್ರಿ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಂಡಿಹಟ್ಟಿ ಘಟಕದ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ದೇವಲಾಪುರದ ಬಯಲಾಟದ ಮಾಸ್ತರ್ ದಿಽಽ ಟಿ.ಕೆ.ಶಿವಶಂಕರ್ಪ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿವಶಂಕರ್ಪನವರು ಬಾಲ್ಯದಿಂದಲೇ ಬಯಲಾಟದ ಕಲೆಯ ಗೀಳಿಗೆ ತಮ್ಮನ್ನು ತೊಡಗಿಸಿಕೊಂಡು 10ನೇ ತರಗತಿಯ ನಂತರದಲ್ಲಿ ಬಯಲಾಟ ಕಲಿಸುವ ವೃತ್ತಿಯನ್ನು ಆರಂಭಿಸಿದರು. ಇವರ ತಂದೆಯವರೂ ಸಹ ಮಾಸ್ತರರಾಗಿದ್ದರು. ಅವರು ಗ್ರಾಮೀಣ ಪ್ರದೇಶದಲ್ಲಿ ಅನಕ್ಷರಸ್ಥರಿಗೆ ಬಯಲಾಟದ ಮಾತುಗಳನ್ನು, ಸಂಭಾಷಣೆ, ಕುಣಿತ, ಹಾಡುಗಾರಿಕೆ, ದಕ್ಷಿಣಾದಿ, ಉತ್ತರಾದಿ ಹಿಂದುಸ್ಥಾನಿ ಸಂಗೀತದ ಮಟ್ಟುಗಳನ್ನು ಕಲಿಸುವ ಮೂಲಕ ದೊಡ್ಡಾಟದ ಜನಪದ ಕಲೆಯನ್ನು ಬಳ್ಳಾರಿ ಭಾಗದಲ್ಲಿ ಉಳಿಸುವ ಕಾರ್ಯವನ್ನು ಮಾಡಿದ್ದಾರೆ. ಅಂತಹ ಕಾರ್ಯವನ್ನು ಮಾಡಿದ ಶಿವಶಂಕರ್ಪ ಅವರು ನಿಧನರಾಗಿರುವುದರಿಂದ ದೊಡ್ಡಾಟ ಕಲೆಯ ಕ್ಷೇತ್ರವು ಬಡವಾಗಿದೆ. ಒಬ್ಬ ಧೀಮಂತ ಬಯಲಾಟದ ಭಾಗವತನನ್ನು ಕಳೆದುಕೊಂಡಂತಾಗಿದೆ. ಅವರನ್ನು ಸ್ಮರಿಸುವುದು ಉತ್ತಮ ಬೆಳವಣಿಗೆಯಾಗಿದೆ. ಒಬ್ಬ ಕಲಾವಿದರಿಗೆ ಗೌರವ ನೀಡಿದಂತಾಗಿದೆ ಎಂದು ತಿಳಿಸಿದರು.
ಸತ್ಯಂ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕರಾದ ಆಲಂ ಬಾಷ ಅವರು ಮಾತನಾಡಿ, ಶಿವಶಂಕರ್ಪ ಮಾಸ್ತರ್ ಅವರನ್ನು ಹತ್ತಿರದಿಂದ ಕಂಡಿದ್ದೇವೆ. ಅವರು ಎಂದೂ ಹಣಕ್ಕಾಗಿ ಹಿಂದೆ ಬಿದ್ದವರಲ್ಲ. ಕಲೆಯನ್ನೇ ತಮ್ಮ ದೇವರೆಂದು ನಂಬಿದವರು. ಸದಾ ಹೊಸ ಹೊಸ ರಾಗಗಳನ್ನು ಸಂಯೋಜನೆ ಮಾಡುತ್ತಿದ್ದರು. ಕಲಾವಿದರು ಅಪಭ್ರಂಶ ನುಡಿಯುವುದನ್ನು ಸಹಿಸುತ್ತಿರಲಿಲ್ಲ. ಅಲ್ಪಪ್ರಾಣ, ಮಹಾಪ್ರಾಣ ಅಕ್ಷರಗಳ ಬಗ್ಗೆ ಸಂಪೂರ್ಣ ಜ್ಞಾನವಿತ್ತು. ಆ ಮೂಲಕ ಕನ್ನಡ ವ್ಯಾಕರಣವನ್ನು ತಿದ್ದುವ ಮಾಸ್ತರರು ಆಗಿದ್ದರು ಎಂದು ತಿಳಿಸಿದರು.
ಶಿವಶಂಕರ್ಪ ಮಾಸ್ತರ್ ಅವರು ಹಳೆಯ ಬಯಲಾಟದ ಪುಸ್ತಕಗಳನ್ನು ಪ್ರತಿ ಮಾಡಿ ಬರೆಯಲು ತಿಳಿಸಿದ್ದರು. ಅವುಗಳನ್ನು ನಾನು ಹೊಸ ಪ್ರತಿ ಮಾಡಿ ಬರೆದುಕೊಟ್ಟ ವಿನಮ್ರತಾಭಾವ ನನಗಿದೆ. ರಾಮಾಯಣ, ಮಹಾಭಾರತದ ಹಲವಾರು ಪಾತ್ರಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾ ಪಾತ್ರಗಳ ವಿಶ್ಲೇಷಣೆ ಮಾಡುತ್ತಿದ್ದರು ಎಂದು ಆಲಂ ಬಾಷ ಅವರು ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾಸ್ತರ್ ಶಿವಶಂಕರಪ್ಪ ಅವರ ಪುತ್ರ ತೇಜುಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಿವಶರಣ, ಹಿರಿಯರಾದ ಗುಲ್ದಡ್ಡಿ ದೊಡ್ಡವೀರ್ಪ, ಕೆ.ಟಿ.ಚಿದಾನಂದ, ವಿಮ್ಸ್ನ ನಿವೃತ್ತ ನೌಕರ ದೊಡ್ಡಈಶ್ವರ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನೌಕರ ಹನುಮಂತಪ್ಪ, ಜೆಸ್ಕಾಂ ಕಿರಿಯ ಅಬಿಯಂತರರಾದ ಕೆ.ಚನ್ನಬಸವ, ದುರುಗಪ್ಪ, ಸದಾಶಿವ, ಕಾಳಿಂಗ, ಅನೇಕ ಯುವಕರು, ದೊಡ್ಡಾಟ ಕಲಾವಿದರು ಭಾಗವಹಿಸಿದ್ದರು. ಶಿವಶಂಕರ್ಪ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಿಸಲಾಯಿತು.