ಧಾರ್ಮಿಕ ಭಾವನೆಗೆ ಧಕ್ಕೆ ತಂದ ಉದಯನಿಧಿ ವಿರುದ್ಧ ಬೃಹತ್ ಪ್ರತಿಭಟನೆ
ಮಹಾಲಿಂಗಪುರ 06: ಹಿಂದೂ ಧರ್ಮ ಸನಾತನ ಧರ್ಮ, ಜಗತ್ತಿಗೆ ಸಂಸ್ಕಾರ ಕಲಿಸಿದ ಧರ್ಮ ಅದಕ್ಕೆ ಸಾವಿಲ್ಲ ಆದರೆ ಅದನ್ನು ನಾಶಪಡಿಸಲು ಯೋಚಿಸುವವರೆ ನಾಶವಾಗುತ್ತಾರೆ ಹಾಗೆಯೇ ಸ್ಟಾಲಿನ್ ಕೂಡಾ ನಾಶ ಹೊಂದುತ್ತಾನೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಧರ್ಮ ವಿರೋಧಿ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ವಿರುದ್ದ ಸ್ಥಳೀಯ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಸಂಜೆ ಹಿಂದು ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಖಂಡ ಮನೋಹರ ಶಿರೋಳ ಮಾತನಾಡಿ, ಎಲ್ಲಾ ಧರ್ಮಗಳ ಸಂಸ್ಥಾಪಕರ ಹೆಸರು ಹೇಳಬಹುದು ಆದರೆ ಹಿಂದೂ ಧರ್ಮದ ಸಂಸ್ಥಾಪಕರ ಹೆಸರು ಹೇಳಲು ಸಾಧ್ಯವಿಲ್ಲ ಏಕೆಂದರೆ ಜಗತ್ತಿಗೆ ಹೆಸರು ಹೇಳಲೂ ಗೊತ್ತಿಲ್ಲದ ಕಾಲದಲ್ಲಿ ಹುಟ್ಟಿದ ಜಗತ್ಪ್ರಾಚೀನ ಹಿಂದೂ ಧರ್ಮದ ನಾಶದ ಬಗ್ಗೆ ಮಾತನಾಡುವವರೇ ಸರ್ವ ನಾಶವಾಗುತ್ತಾರೆ ಎಂದರು.
ಕಾರ್ಯಕರ್ತ ಅರ್ಜುನ ಪವಾರ ಮಾತನಾಡಿ, ಧರ್ಮ ವಿರೋಧಿ ಮತ್ತು ದೇಶ ವಿರೋಧಿ ಹೇಳಿಕೆ ನೀಡಿದ ಉದಯನಿಧಿಯನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಿ, ಗಡಿಪಾರು ಮಾಡಬೇಕೆಂದರು.
ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ಘೋಷಣೆಗಳನ್ನು ಕೂಗುತ್ತಾ ಉದಯನಿಧಿ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಮುಖಂಡರಾದ ಶಿವಾನಂದ ಅಂಗಡಿ, ರವಿ ಜವಳಗಿ, ಶಂಕರಗೌಡ ಪಾಟೀಲ, ಹನಮಂತ ಬುರುಡ, ಹನಮಂತ ಜಮಾದಾರ, ಬಸು ಹುಕ್ಕೇರಿ, ಮಹಾಲಿಂಗ ಕಂಕಣವಾಡಿ, ಸುವರ್ಣ ಆಸಂಗಿ, ವಿಜಯ ಸಬಕಾಳೆ, ಬೈರೇಶ ಆದ್ದೆಪ್ಪನ್ನವರ, ಮಹಾಲಿಂಗ ದೇಸಾಯಿ, ಮಹಾಲಿಂಗ ಜಮಖಂಡಿ, ಸಚಿನ್ ಕಲಮಡಿ,ಅಭಿ ಲಮಾಣಿ, ಮಹಾಲಿಂಗ ಕಲಾಲ, ಸಂತೋಷ ಹಜಾರೆ,ಶ್ರೀನಿಧಿ ಕುಲಕರ್ಣಿ, ದತ್ತಾ ಯರಗಟ್ಟಿಕರ, ಬಸು ಮೂರಾರಿ, ನಾಗೇಶ ಹುಣಶ್ಯಾಳ, ಸಂಗಮೇಶ ಅಂಬಲ್ಯಾಳ, ರಾಜೇಂದ್ರ ನಾವಿ, ಈರಣ್ಣ ಹುಣಸ್ಯಾಳ, ಅಕ್ಷಯ ಜಳ್ಳಿ, ಸಿದ್ದು ಹುದ್ದಾರ, ಚೇತನ್ ಬಂಡಿವಡ್ಡರ, ರಾಘು ಪವಾರ್, ಇನ್ನು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.