ಮಾರ್ಕೆಟ ಪೊಲೀಸರ‌ ಕಾರ್ಯಾಚರಣೆ : ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ ; 2.40 ಲಕ್ಷದ 6 ಬೈಕಗಳ ವಶಕ್ಕೆ

ಮಾರ್ಕೆಟ ಪೊಲೀಸರ‌ ಕಾರ್ಯಾಚರಣೆ : ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ ; 2.40 ಲಕ್ಷದ 6 ಬೈಕಗಳ ವಶಕ್ಕೆ

ಬೆಳಗಾವಿ : ನಗರದ ಪ್ರಮುಖ ಮಾರುಕಟ್ಟೆ ಯಾಗಿರುವ ಖಡೇಬಜಾರ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಮಾರ್ಕೆಟ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ವಿವಿಧ ಬಗೆಯ 6 ದ್ವಿಚಕ್ರ ವಾಹನಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ.

   ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪ ಬೇವಿನಕೊಪ್ಪ (29) ಹಾಗೂ ಬೆಳಗಾವಿಯ ಶ್ರೀನಗರ ಗಾರ್ಡನ್ ಬಡವಾಣೆಯ ನಿವಾಸಿ ಅಬುಬಕರ್ ಸಿಕಂದರ್ ಸವದಿ (21) ಇವರಿಬ್ಬರು ಬಂಧಿತರಾಗಿದ್ದಾರೆ.

    ಇತ್ತೀಚೆಗೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಖಡೇಬಜಾರ ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಬಗ್ಗೆ ಮಾರ್ಕೆಟ ವಿಭಾಗದ ಎಸಿಪಿ ನಾರಾಯಣ ಬರಮನಿ ಅವರು ನೇತೃತ್ವದಲ್ಲಿ ತನಿಖೆ ಆರಂಭಿಸಿದ‌ ಮಾರ್ಕೆಟ ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದ ತಂಡ ಗುರುವಾರ ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ಬಂಧಿತರಿಂದ 2.40 ಲಕ್ಷ ರೂ. ಮೌಲ್ಯದ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

   ಈ ಇಬ್ಬರು ಆರೋಪಿತರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೆಟ್ ಠಾಣೆಯ ಪಿಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಉಪ-ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

ಸುದ್ದಿ ಓದಿ