ಯಳ್ಳೂರಲ್ಲಿ ಮತ್ತೆ ಮರಾಠಿ ನಾಮಫಲಕ ವಿವಾದದ ಕಿಡಿ : ಗ್ರಾಮ ಪಂಚಾಯತಿ ಎಡವಟ್ಟಿಗೆ ಕನ್ನಡಿಗರು ಕೆಂಡಾಮಂಡಲ

ಯಳ್ಳೂರಲ್ಲಿ ಮತ್ತೆ ಮರಾಠಿ ನಾಮಫಲಕ ವಿವಾದದ ಕಿಡಿ : ಗ್ರಾಮ ಪಂಚಾಯತಿ ಎಡವಟ್ಟಿಗೆ ಕನ್ನಡಿಗರು ಕೆಂಡಾಮಂಡಲ
Marathi nameplate controversy flares up again in Yellur: Kannadigas infuriated over Gram Panchayat's

ಪಾರೇಶ ಭೋಸಲೆ

ಬೆಳಗಾವಿ : ದಶಕದ ಹಿಂದೆ ಬೆಳಗಾವಿ ತಾಲೂಕಿನ ಯಳ್ಳೂರ ಮಹಾರಾಷ್ಟöç ರಾಜ್ಯ ಎಂಬ ನಾಮಫಲಕವು ದೊಡ್ಡ ರಾದ್ದಾಂತ ಮೂಲಕ ತೆರವು ಮಾಡಿದ ಬಳಿಕ ಈಗ ಮತ್ತೆ ಯಳ್ಳೂರ ಗ್ರಾಮದಲ್ಲಿ ಗ್ರಾಮ ಪಂಚಾಯತಿಯವರ ಎಡವಟ್ಟಿನಿಂದ ಮರಾಠಿ ನಾಮಫಲಕದ ವಿವಾದವು ಮತ್ತೊಮ್ಮೆ ಮುನ್ನೆಲೆಗೆ ಬಂದಿರುವದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಅಲ್ಲದೆ ಕರ್ನಾಟಕದ ಅನುದಾನ ಪಡೆದು, ರಾಜ್ಯದ ನೆಲವಾದ ಯಳ್ಳೂರು ಗ್ರಾಮದಲ್ಲಿ ಕೇವಲ ಮರಾಠಿ ನಾಮಫಲಕ ಹಾಕುತ್ತಿರುವ ಗ್ರಾಪಂದತ್ತ ಕನ್ನಡಿಗರ ವಕ್ರದೃಷ್ಠಿ ನೆಟ್ಟಿದೆ.

     ಹೌದು ಓದುಗರೇ... ಬೆಳಗಾವಿ ತಾಲೂಕಿನ ವ್ಯಾಪ್ತಿಗೆ ಬರುವ ಯಳ್ಳೂರ ಗ್ರಾಮವು ರಾಜ್ಯದ ಅಂಗವಾಗಿದ್ದರೂ ಕೆಲವು ಝಾಪಾಗಳು ಇಲ್ಲಿ “ಯಳ್ಳೂರು ಮಹಾರಾಷ್ಟç” ರಾಜ್ಯ ಎಂಬ ನಾಮಫಲಕವನ್ನು ಹಾಕುವ ಮೂಲಕ ಕನ್ನಡದ ನೆಲಕ್ಕೆ ಮಹಾರಾಷ್ಟçದ ಬಣ್ಣ ಬಳೆಯುವ ಪ್ರಯತ್ನ ಮಾಡಿದ್ದರು. ಈ ಮರಾಠಿ ನಾಮಫಲಕದ ವಿರುದ್ದ ದಶಕದ ಹಿಂದೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಕಾನೂನು ಹೋರಾಟದ ನಡೆಸುವ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು.

   ಬಳಿಕ ರಾಜ್ಯದ ನೆಲದಲ್ಲಿ ಮಹಾರಾಷ್ಟç ರಾಜ್ಯ ಎಂಬ ನಾಮಫಲಕವನ್ನು ತೆರವು ಮಾಡುವಂತೆ ರಾಜ್ಯ ಸರಕಾರಕ್ಕೆ ಮಾನ್ಯ ನ್ಯಾಯಾಲಯವು ಗಡವು ನೀಡಿತ್ತು. ಬಳಿಕ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಎನ್. ಜಯರಾಮ ಅವರು ಪೊಲೀಸ ಬಂದೋಬಸ್ತನೊAದಿಗೆ ನಾಮಫಲಕವನ್ನು ತೆರವು ಮಾಡಿಸಿದ್ದರು. ಇದರಿಂದ ಕರ್ನಾಟಕದ ನೆಲವನ್ನು ಮಹಾರಾಷ್ಟç ರಾಜ್ಯ ಎಂದು ಬರೆದುಕೊಳ್ಳುವ ಮೂಲಕ ದರ್ಪ ಮೆರೆಯುತ್ತಿದ್ದ ಝಪಾಗಳ ಹುಟ್ಟಡಗಿಸುವಲ್ಲಿ ಅಂದು ಸಮರ ಸಾರಿದ್ದ ಭೀಮಪ್ಪ ಗಡಾದ ಅವರು ಕಾನೂನು ಹೋರಾಟದಲ್ಲಿ ಜಯ ಸಾಧಿಸಿ, ಮರಾಠಿ ಫಲಕವನ್ನು ತೆರವು ಮಾಡಿಸುವಲ್ಲಿ ಯಶ ಕಂಡಿದ್ದರು.

   ಅಂದಿನಿಂದ ಮೆತ್ತಗಾಗಿದ್ದ ಯಳ್ಳೂರಿನ ಝಾಪಾಗಳು ಈಗ ಮತ್ತೆ ಬಾಲಬಿಚ್ಚಿದ್ದಾರೆ. ಕರ್ನಾಟಕ ಸರಕಾರದ ಅನುದಾನ ಪಡೆದು ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿರುವ ಯಳ್ಳೂರ ಗ್ರಾಮ ಪಂಚಾಯತಿಯು ರಸ್ತೆ ಬದಿಗಳಲ್ಲಿ ಊರುಗಳ ಸೂಚಿಸುವ ಮರಾಠಿ ನಾಮಫಲಕವನ್ನು ಅಳವಡಿಸುವ ಮೂಲಕ ನಾಡದ್ರೋಹಿ ಕೆಲಸಕ್ಕೆ ಕೈಹಾಕಿದ್ದಾರೆ. ಅಲ್ಲದೆ ಮತ್ತೆ ಕನ್ನಡಿಗರನ್ನು ಕೆಣಕುವ ಕೆಲಸಕ್ಕೆ ಕೈಹಾಕಿದ್ದಾರೆ. ಈ ಕುರಿತು ಕಳೆದ ಎರಡು ದಿನಗಳಿಂದ ಯಳ್ಳೂರಿನ ಮರಾಠಿ ನಾಮಫಲಕದ ವಿರುದ್ದ ಕನ್ನಡಿಗರು ಬರವಣಿಗೆಗಳು ಇರುವ ಪೊಸ್ಟ್ಗಳು ಹರಿದಾಡುತ್ತಿವೆ.

    ಈ ಬಗ್ಗೆ ಬೇಗ ಬೆಳಗಾವಿ ಜಿಲ್ಲಾಡಳಿತವು ಕ್ರಮಕೈಗೊಳ್ಳದಿದ್ದಲ್ಲಿ ಕನ್ನಡಿಗರು ಈ ಮರಾಠಿ ನಾಮಫಲಕವನ್ನು ತೆರವು ಮಾಡುವದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.

ಮರಾಠಿ ಫಲಕ ಹಾಕಿಸಿದ ಅಧಿಕಾರಿ ಅಮಾನತು ಮಾಡಬೇಕು : ಗುಡಗನಟ್ಟಿ

    ಯಳ್ಳೂರು ಗ್ರಾಮವು ರಾಜ್ಯದ ನೆಲವಾಗಿದ್ದು ಅಲ್ಲಿ ಮರಾಠಿ ನಾಮಫಲಕ ಹಾಕಲು ಪ್ರೇರಿಪಿಸಿದ ಅಧಿಕಾರಿಯನ್ನು ಮೊದಲು ಅಮಾನತ್ತು ಮಾಡಬೇಕು. ಅಲ್ಲದೆ ಈ ಅಧಿಕಾರಿಯ ವಿರುದ್ದ ಸರಕಾರ ಮತ್ತು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಕರ್ನಾಟಕದ ರಕ್ಷಣಾ ವೇದಿಕೆಯ ಕರ‍್ಯಕರ್ತರು ಸೇರಿ ಯಳ್ಳೂರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕುವ ಕರ‍್ಯ ಮಾಡಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ ಗುಡುಗನಟ್ಟಿ ಒತ್ತಾಯಿಸಿದ್ದಾರೆ.

ಸುದ್ದಿ ಓದಿ