ಕಾಗವಾಡ

ಮಾಲೀಕರು, ತಮ್ಮ ಕಾರ್ಮಿಕರಿಗೆ ಇನ್ಸೂರನ್ಸ್‌ ಮಾಡಿಸಬೇಕು: ಚಿದಾನಂದ ಮಾಳಿ..!!

ಮಾಲೀಕರು, ತಮ್ಮ ಕಾರ್ಮಿಕರಿಗೆ ಇನ್ಸೂರನ್ಸ್‌ ಮಾಡಿಸಬೇಕು: ಚಿದಾನಂದ ಮಾಳಿ..!!

ಕಾಗವಾಡದಲ್ಲಿ ಮಂಟಪ ಲೆಬರ್ ಅಸೋಶಿಯೇಶನ್ ಸಭೆ;  

ಕಾಗವಾಡ 21: ಮಂಟಪದ ಕಾರ್ಮಿಕರು, ಅತ್ಯಂತ ಕಠಿಣ ಮತ್ತು ಅಪಾಯಕಾರಿ ಕೆಲಸಗಳನ್ನು ನಿರ್ವಹಿಸಿದ್ದು, ಮಂಟಪ  ಮಾಲೀಕರು ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ ಅವರ ಇನ್ಸೂರನ್ಸ್‌ ಮಾಡಿಸಿ, ಮುಂದಾಗುವ ಅನಾಹುತಗಳಿಂದ ಜೀವ ಹಾನಿ ಅಥವಾ ಅಂಗವಿಕಲತೆ ಉಂಟಾದಲ್ಲಿ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುವಂತೆ ನೋಡಿಕೊಳ್ಳಬೇಕೆಂದು ಜೀವ ವಿಮಾ ನಿಗಮದ ಚಿದಾನಂದ ಮಾಳಿ ಹೇಳಿದ್ದಾರೆ. 

ಅವರು, ಪಟ್ಟಣದ ಪ್ರವಾಸಿ ಮಂದರಿದಲ್ಲಿ ರವಿವಾರ ದಿ. 20 ರಂದು ಕರ್ನಾಟಕ-ಮಹಾರಾಷ್ಟ್ರ ಮಂಟಪ ಮಾಲೀಕರ ಅಸೋಶಿಯೇಶನ್ 3ನೇ ವಾರ್ಷಿಕ ಸಭೆಯಲ್ಲಿ ಇನ್ಸೂರನ್ಸ್‌ ಕುರಿತು ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೆೆ ಎಲ್‌ಐಸಿಯ ವತಿಯಿಂದ ವಿವಿಧ ವಿಮಾ ಯೋಜನೆಗಳು ಇದ್ದು, ಕೇವಲ 200 ರೂ. ಮತ್ತು 234 ರೂ. ಗಳಲ್ಲಿ ಅಪಘಾತ ಮತ್ತು ಇತರೇ ಜೀವ ವಿಮೆಗಳು ಲಭ್ಯವಿವೆ. ಮಾಲೀಕರು ತಮ್ಮ ಕಾರ್ಮಿಕರಿಗೆ ಅರಿವು ಮೂಡಿಸಿ, ಅವರನ್ನು ಜೀವವಿಮೆಗೆ ಒಳಪಡಿಸಬೇಕು ಎಂದರು. 

ನ್ಯಾಯಾವಾದಿ ವೀಣಾ ಮಾಳಿ ಮಾತನಾಡಿ, ಕರ್ನಾಟಕ- ಮಹಾರಾಷ್ಟ್ರದ ಮಂಟಪ ಮಾಲೀಕರು ಮತ್ತು ಕಾರ್ಮಿಕರು ಒಂದಾಗಿ ಒಂದೇ ಸಂಘಟನೆ ಮಾಡಿಕೊಂಡು, ನೊಂದಣಿ ಮಾಡಿಕೊಳ್ಳಲು ಕಾನೂನಿನ ಮಾಹಿತಿ ನೀಡಿದರು.  

ಅಸೋಶಿಯೇಶನ್ ನ ಉಪಾಧ್ಯಕ್ಷ ರಾಜು ಪವಾರ ಮಾತನಾಡಿ, ಸಂಘಟನೆಯನ್ನು ಬಲಪಡಿಸಿದರೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನಕೂಲವಾಗುತ್ತದೆ. ಮಂಟಪ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಕೊಲ್ಲಾಪೂರ, ಸಾಂಗಲಿ, ಸಾತಾರಾ, ಪೂನಾ, ರತ್ನಾಗಿರಿ, ಸಿಂಧದುರ್ಗ ಮತ್ತು ಬೆಳಗಾವಿ, ವಿಜಯಪೂರ ಮತ್ತು ಗೋವಾ ರಾಜ್ಯದ ಮಾಲೀಕರು, ಸಂಚಾಲಕರು ನಮ್ಮ ಅಶೋಶಿಯೇಸನ್ ಸದಸ್ಯರಿಗೆ ಸಹಕಾರ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. 

ಈ ವೇಳೆ ಮಂಟಪ ಲೆಬರ್ ಅಸೋಶಿಯೇಶನ್ ಅಧ್ಯಕ್ಷ ಬಜರಂಗ ಕಾಂಬಳೆ, ಉಪಾಧ್ಯಕ್ಷ ರಾಜು ಪವಾರ, ಕಾರ್ಯದರ್ಶಿ ವಿನಾಯಕ ಜೋಗದಾಂಡೆ, ಖಜಾಂಚಿ ಅನೀಲ ಲೋಖಂಡೆ, ಸದಸ್ಯರಾದ ಸಾಂವತ ಅನ್ನೆನ್ನವರ, ಮಲ್ಲೇಶ ವರಾ​‍್ಹಳೆ, ಗೋವಿಂದ ಭಂಡಾರೆ, ಮಲ್ಹಾರಿ ವಾಘೆ, ದತ್ತಾತ್ರೇಯ ಜೋಗದಾಂಡೆ, ರವೀಂದ್ರ ಕಾಂಬಳೆ, ಸದಾನಂದ ಕಾಂಬಳೆ, ವಿಷ್ಣು ಅದೋಕೆ, ಕಪಿಲ ವಡ್ಡರ, ವಿಜಯ ಕಟ್ಟೆ, ರೋಹಣ ಕಾಂಬಳೆ, ಸಂತೋಶ ಕಾಂಬಳೆ, ತಾನಾಜಿ ಗಾಯಕವಾಡ ಸೇರಿದಂತೆ ಅನೇಕ ಮಂಟಪ ಕಾರ್ಮಿಕರು ಮತ್ತು ಮಾಲೀಕರು ಉಪಸ್ಥಿತರಿದ್ದರು. 


ಸುದ್ದಿ ಓದಿ