ಇಂಡಿ

ಗುಡಿಸಲು ಕಳೆದುಕೊಂಡು ನಿರಾಶ್ರಿತರಾದ ಮಲಿಗೆಪ್ಪ ಮುಖಂಡ ಮಂಜುನಾಥ ಸಾಂತ್ವನ

ಗುಡಿಸಲು ಕಳೆದುಕೊಂಡು ನಿರಾಶ್ರಿತರಾದ ಮಲಿಗೆಪ್ಪ ಮುಖಂಡ ಮಂಜುನಾಥ ಸಾಂತ್ವನ
ಗುಡಿಸಲು ಕಳೆದುಕೊಂಡು ನಿರಾಶ್ರಿತರಾದ ಸಂಗೋಗಿ ಗ್ರಾಮದ ಮಲಿಗೆಪ್ಪ ಡೋಂಬಳಿ ಅವರಿಗೆ ಜೆಡಿಎಸ್ ಮುಖಂಡ ಮಂಜುನಾಥ ಕಾಮಗೊಂಡ ಕ

ಇಂಡಿ 21: ಇತ್ತೀಚೆಗೆ ತಾಲೂಕಿನ ಸಂಗೋಗಿ ಗ್ರಾಮದ ಮಲಿಗೆಪ್ಪ ಡೋಂಬಳಿ ಅವರ ಜಮೀನಿನಲ್ಲಿನ ಗುಡಿಸಲಿಗೆ ಬೆಂಕಿ ಬಿದ್ದಿದ್ದು ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮವಾಗಿತ್ತು. ಗುಡಿಸಲಿನಿಲ್ಲಿನ ಜೋಳ-ಗೋಧಿ ಹಾಗೂ ಅಡುಗೆ ಸಾಮಗ್ರಿಗಳು ಮತ್ತು ಇನ್ನೀತರ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದ್ದವು.

ಮಂಗಳವಾರ ಘಟನಾ ಸ್ಥಳಕ್ಕೆ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಭೇಟಿ ನೀಡಿ ಕಿರಾಣಿ, ಹಾಸಿಗೆ, ಹೊದಿಕೆ ಸೇರಿದಂತೆ ಇನ್ನೀತರ ಉಪಕರಣಗಳನ್ನು ನೀಡಿ ಸಾಂತ್ವನ ಹೇಳಿದರು.

ಮಂಜುನಾಥ ಕಾಮಗೊಂಡ ಮಾತನಾಡುತ್ತಾ ನಾಗೇಶ ತಳಕೇರಿ ಸಂಗೋಗಿ ಗ್ರಾಮದ ಮಲಿಗೆಪ್ಪ ಡೋಂಬಳಿ ಅವರು ಕಡು-ಬಡವರಿದ್ದು ಅವರ ಗುಡಿಸಿಲಿಗೆ ಬೆಂಕಿ ತಗುಲಿ ಗುಡಿಸಲಿನಲ್ಲಿದ್ದ ದವಸ ಧಾನ್ಯಗಳು, ಬಟ್ಟೆಗಳೆಲ್ಲವೂ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂತು. ಹೀಗಾಗಿ ಅವರಿಗೆ ಒಂದಷ್ಟು ನೆರವಾಗಲು ನಾವು ನಮ್ಮ ಕೈಲಾದಷ್ಟು ಸಾಮಗ್ರಿ ನೀಡಿದ್ದೇವೆ ಎಂದ ಅವರು ತಾಲೂಕಾಡಳಿತ ಗುಡಿಸಲು ಕಳೆದುಕೊಂಡ ಈ ಕುಟುಂಬಕ್ಕೆ ಪರಿಹಾರದ ಜೊತೆಗೆ ಮನೆ ನಿರ್ಮಿಸಿ ಕೊಡಬೇಕೆಂದರು.

ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ನಾಗೇಶ ತಳಕೇರಿ, ಅಲ್ಲಾವುದ್ದಿನ್ ಮುಲ್ಲಾ, ಅಪ್ಪುಗೌಡ ಡೋಂಬಳಿ, ಶಫೀಕ್ ವಾಲಿಕಾರ, ಶ್ರೀಶೈಲ ತೊನಶ್ಯಾಳ, ಅಶೋಕ ತೆಗ್ಗೆಳ್ಳಿ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿ ಓದಿ