ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಮಹಾಲಿಂಗಪುರ 30: ತಂದೆ ತಾಯಿ, ಪೋಷಕರ ಮೇಲೆ ಮೇಲೆ ವರ್ತಮಾನದ ಬದುಕಿನ ತರತರಹ ಒತ್ತಡಗಳಿಂದ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ರೀತಿ-ನೀತಿ ಕಲಿಸುವ ಕಾಳಜಿ ಇಲ್ಲದಂತಾಗಿ ಅವರು ಒಳ್ಳೆಯ ಸಂಸ್ಕಾರ ಮರೆಯುತ್ತಿದ್ದಾರೆ ಎಂದು ಕಂಕಣವಾಡಿಯ ಮಾರುತಿ ಶರಣರು ಹೇಳಿದರು.
ಹೋಳಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಸಂಗಪ್ಪ ಉಪ್ಪಲದಿನ್ನಿಯವರ ತೋಟದ ಮನೆಯಲ್ಲಿ ಮನೆಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ಜರುಗಿತು.
ಈಗಿರುವ ವಾತಾವರಣ ಎರಡು ಮೂರು ದಶಕಗಳ ಹಿಂದೆ ಇರಲಿಲ್ಲ. ಅಂದಿನ ಹಿರಿಯರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಅಧ್ಯಾತ್ಮದ ಒಳ್ಳೆಯ ಚಿಂತನೆಗಳನ್ನು ಹೇಳಿಕೊಡುತ್ತಿದ್ದರು ಆದ್ದರಿಂದ ಅವರು ಸಹ ಪಡೆದ ಒಳ್ಳೆಯ ಸಂಸ್ಕಾರದಿಂದ ಸಮಾಜಕ್ಕೆ ಹಾಗೂ ಗುರು ಹಿರಿಯರಿಗೆ ತಮ್ಮ ಶ್ರದ್ಧಾಭಕ್ತಿಯನ್ನು ಸಲ್ಲಿಸುತ್ತಿದ್ದರು ಎಂದರು.
ಈ ಸತ್ಸಂಗದಲ್ಲಿ ಹಲವಾರು ಉಪನ್ಯಾಸಕರು ನೀರು, ಮಣ್ಣು, ಸಾವಯವ ಕೃಷಿ ಹಾಗೂ ತರತರಹದ ಸಿರಿಧಾನ್ಯಗಳ ಬಗ್ಗೆ ಮ.ಕ್ರೃ ಮೇಗಾಡಿ, ಮಕ್ಕಳ ಸಾಹಿತಿ ಅಣ್ಣಾಜಿ ಪಡತಾರೆ, ಮಾಜಿ ಪು.ಸ ಅಧ್ಯಕ್ಷ ಜಿಎಸ್ ಗೊಂಬಿ ಉಪನ್ಯಾಸ ನೀಡಿದರು.
ಶಿಕ್ಷಕರಾದ ಬಸವರಾಜ್ ಮೇಟಿ ನಿರೂಪಿಸಿ ವಂದಿಸಿದರು. ವೇದಿಕೆ ಬೆಲೆ ಹಿರಿಯ ಶ್ರೀಶೈಲಪ್ಪ ಉಳೇಗಡ್ಡಿ, ಬಾಬುರಾವ್ ಅಂಬಲಜರಿ, ಗೋಲೇಶ ಅಮ್ಮನಗಿ, ನೇಗಿನ್ಯಾಳ ಇನ್ನು ಮುಂತಾದವರಿದ್ದರು.