ವಿವಿಧ ಗ್ರಾಮಗಳಿಗೆ ನೂತನ ಬಸ್ ಸಂಚಾರಕ್ಕೆ ಮನಗೂಳಿ ಚಾಲನೆ
ಸಿಂದಗಿ 20: ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂರು ಹೊಸ ಮಾರ್ಗಗಳಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.
ಸಾರ್ವಜನಿಕರು ಗ್ರಾಮಸ್ಥರ ಬೇಡಿಕೆಯ ಮೇರೆಗೆ ಸಿಂದಗಿಯಿಂದ ಮೋರಟಗಿ - ಕುಳೆಕುಮಟಗಿ - ಶಿರಸಗಿ - ಬಮ್ಮನಳ್ಳಿ - ಗುಂದಗಿ ಮಾರ್ಗವಾಗಿ ಆಲಮೇಲ ಪಟ್ಟಣಕ್ಕೆ ಹಾಗೂ ಸಿಂದಗಿಯಿಂದ ಮಲಘಾಣ - ದೇವರನಾವದಗಿ - ಕುಮಸಗಿ - ದೇವಣಗಾಂವ ಮಾರ್ಗವಾಗಿ ಅಫಜಲಪುರ್ ತಲುಪುವ ಹಾಗೂ ಆಲಮೆಲದಿಂದ ಬ್ಯಾಡಗಿಹಾಳ ಗ್ರಾಮಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಇದೇ ಸಂದರ್ಭದಲ್ಲಿ ಡಿಪೋ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ ಸೇರಿದಂತೆ ಕೆ. ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಹಾಗೂ ಮಂಡಲ ಅದ್ಯಕ್ಷ ಸುರೇಶ ಪೂಜಾರಿ, ಪಕ್ಷದ ಮುಖಂಡರಾದ ಪ್ರವೀಣ ಕಂಠಿಗೊಂಡ, ಸಾಯಬಣ್ಣಾ ಪುರದಾಳ, ವಿಜಯಕುಮಾರ ಯಾಳವಾರ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.