ಮಳೆಯಿಂದ ಗೋಡೆ ಕುಸಿದು ವ್ಯಕ್ತಿ ಬಲಿ...
ಚಿಕ್ಕೋಡಿ, ಆಗಸ್ಟ್ 19: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟ ಧಾರುಣ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ಕಲ್ಲಪ್ಪ ಪರಗೌಡರ 70 ಮೃತ ವ್ಯಕ್ತಿ ಎಂದು ಗುರ್ತಿಸಲಾಗಿದೆ.
ಮಳೆಯಲ್ಲಿ ಶಿಥೀಲಗೊಂಡಿದ್ದ ಗೋಡೆಗಳು. ಸ್ಥಳಕ್ಕೆ ತಹಶಿಲ್ದಾರ ಸುಭಾಷ ಸಂಪಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾ ಮಳೆ ಅಬ್ಬರ ತಗ್ಗಿದೆ.ಹೀಗಾಗಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಡದಲ್ಲಿ ಒಂದು ಅಡಿಯಷ್ಟು ಹೆಚ್ಚಳವಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಎಂಟು ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ ತಾಲೂಕಿನ ಇಂಗಳಿ.ಯಡೂರವಾಡಿ ತೋಟಪಟ್ಡಿ ಪ್ರದೇಶದ 100 ಕ್ಕೂ ಅಧಿಕ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.