ದರ್ಗಾದಲ್ಲಿ ಮಲ್ಲಯ್ಯನ ಕಂಬಿ ಪೂಜೆ.
ಮಹಾಲಿಂಗಪುರ: ಸ್ಥಳೀಯ ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬುದ್ನಿ ಪಿಡಿಯ ಹಾಜಿ ಮಲಂಗ್ ಬಾಬಾ ದರ್ಗಾದ ಇಸ್ಮಾಯಿಲ್ ಹಳಂಗಳಿ ಇವರ ನೇತೃತ್ವದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗೆ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆಯಲಾಯಿತು. ಮುಖ್ಯ ಅರ್ಚಕರಾದ ಸಿದ್ಧಯ್ಯ ಸ್ವಾಮಿ, ಶ್ರೀಶೈಲ ಸ್ವಾಮಿ ಮತ್ತು ಭಕ್ತರು ಇದ್ದರು.