ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ: ಲಿಂಗಯ್ಯ ಹಿರೇಮಠ
ಶಿಗ್ಗಾವಿ 19: ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜನೆವರಿ 6,7,8ರರಂದು ನಡೆಯುತ್ತದೆ ತಾವೇಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ವಿನಂತಿಸಿದರು.
ಕಸಾಪ ಶಿಗ್ಗಾವಿ ಹಾಗೂ ದುಂಡಸಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ದುಂಡಿ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಮಾತೋಶ್ರೀ ಗಂಗಮ್ಮ ಕೋಂ ಸೋಮಶೇಖರಯ್ಯ ಕಂಬಾಳಿಮಠರವರ ಸ್ಮರಣಾರ್ಥದತ್ತಿದಾನಿ ವಿಶ್ವನಾಥ ಸೋ, ಕಂಬಾಳಿಮಠ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಕನ್ನಡ ನಾಡು ನುಡಿಗೆ ಎಲ್ಲರೂ ಬದ್ದರಾಗಬೇಕು, ಪಾಲಕರ ಇಂಗ್ಲೀಷ್ ವ್ಯಾಮೋಹ ಹೋಗಬೇಕು ಎಲ್ಲ ಮಕ್ಕಳು 10ನೇ ತರಗತಿಯವರೆಗೆ ಕನ್ನಡ ಶಾಲೆಗಳಲ್ಲಿ ಓದಬೇಕು ಆವಾಗ ಕನ್ನಡ ಬೆಳವಣಿಗೆ ಸಾಧ್ಯ ಎಂದರು,
ಡಾ ಸಂಗಮನಾಥ ಲೋಕಾಪೂರ ಮಾತನಾಡಿ ಕನ್ನಡ ನಾಡಿನ ಪ್ರಸಿದ್ಧ ಕವಿಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು, ದತ್ತಿ ದಾನಿಗಳಾದ ವಿಶ್ವನಾಥ ಕಂಬಾಳಿಮಠ ರವರು ಮಾತೋಶ್ರೀ ಗಂಗಮ್ಮ ಕೋಂ ಸೋಮಶೇಖರಯ್ಯ ಕಂಬಾಳಿಮಠ ರವರ ಆದರ್ಶಗಳು ನಿಸ್ವಾರ್ಥ ಸಮಾಜ ಸೇವೆಯನ್ನು ಸ್ಮರಿಸಿದರು.
ಜಿಲ್ಲಾ ತಾಲೂಕ, ಹೋಬಳಿ ಘಟಕಗಳ ಅಧ್ಯಕ್ಷರಿಗೆ ಕಾರ್ಯದರ್ಶಿಗಳಿಗೆ ಕರವೇ ಹೋಬಳಿ ಅಧ್ಯಕ್ಷರಾದ ಶಂಕರ ಬಡಿಗೇರರವರಿಗೆ ಉಪನ್ಯಾಸಕರಿಗೆ ಹೋಬಳಿ ಘಟಕದಿಂದ ಸನ್ಮಾನಿಸಲಾಗಿತು, ದುಂಡಸಿ ಹೋಬಳಿ ಘಟಕದ ಅಧ್ಯಕ್ಷರು ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದರು.
ಅಧ್ಯಕ್ಷಎಸ್.ಎನ್. ಮುಗಳಿ ಮಾತನಾಡಿ ಪ್ರೌಢ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು ನಿಮ್ಮ ಕನಸುಗಳು ಮಗುವಾಗಬೇಕು ನೀವು ತಾಯಿಯಾಗಬೇಕು, ನಿರಂತರ ಶ್ರಮ ಜೋಗುಳವಾಗಬೇಕು, ಆವಾಗ ಸಾಧನೆ ಸಾಧ್ಯ, ಸಮಾಜಮುಖಿಯಾಗಿ ಉತ್ತಮ ಜೀವನ ಸಾಗಿಸಲು ಸಾಧ್ಯ, ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿ ಎಂದು ವಿನಂತಿ ಮಾಡಿಕೊಂಡರು
ಎ.ಕೆ.ಅದ್ವಾನಿಮಠ, ವಿನಾಯಕ.ಎಂ.ರೇವಣಕರ, ರಾಜಕುಮಾರ ವೇರ್ಣೆಕರ, ಬಿ.ವಾಯ್.ಉಪ್ಪಾರ, ಭರಮಪ್ಪ ಹಾವೇರಿ, ಬಸವರಾಜ ಬುಳ್ಳಕ್ಕನವರ, ಸಿ.ಎಮ್.ಶಿರಗುಪ್ಪಿ,ಶಿವಶಂಕರ ಮಹಾಜನಶೆಟ್ಟರ, ಕೃಷ್ಣಾ ಚವಡಾಳ,ವೀರಭದ್ರಯ್ಯ ಯಡವಯ್ಯನಮಠ, ಬಿ.ಎಮ್.ಶಿರಗುಪ್ಪಿ, ಸೋಮಶೇಖರ ಮಹಾಜನಶೆಟ್ಟರ, ಶಂಕರ ಬಡಿಗೇರ, ಸುಭಾಸ್ ನವಲೂರ, ಎಸ್.ಎಸ್.ಮುನವಳ್ಳಿ, ರಾಯಪ್ಪಕರಗುದರಿ, ಚಂದ್ರಕಾಂತ ಬೇಂಡಿಗೇರಿ, ಶಿವನಾಗು ಶೆಟ್ಟರ, ಮಂಜು ಬಡಿಗೇರಉಪಸ್ಥಿತರಿದ್ದರು. ಎಸ್.ಕೆ.ಹೂಗಾರ ಸ್ವಾಗತಿಸಿದರು, ಬಿ.ಪಿ.ಪಾಟೀಲ ನಿರೂಪಿಸಿದರು, ಉಮೇಶ ಮಣ್ಣೂರ ವಂದಿಸಿದರು.