ಸೌಂದತ್ತಿ

ನೀರಿನ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ವಿಶ್ವಾಸ

ನೀರಿನ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ವಿಶ್ವಾಸ

ಸವದತ್ತಿ:  ತಾಲೂಕಿನಲ್ಲಿ ಸಾಕಷ್ಟು ಬರಗಾಲದ ಛಾಯೆ ಇದ್ದು ಆದ್ದರಿಂದ ನೀರನ್ನು ವಿನಾಕಾರಣ ಪೂಲುಮಾಡದೆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮನೆಯಲ್ಲಿ ಹೆಚ್ಚು ಹೆಣ್ಣುಮಕ್ಕಳೆ ನೀರು ಉಪಯೋಗಿಸುತ್ತಾರೆ ಆದ್ದರಿಂದ ಹೆಣ್ಣುಮಕ್ಕಳು ನೀರನ್ನು ಮಿತವಾಗಿ ಹಿತವಾಗಿ ಬಳಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸ್ಥಳೀಯ ಪುರಸಭೆಯ ಜಲಶುದ್ದೀಕರಣ ಘಟಕದ ಆವರಣದಲ್ಲಿ ಸವದತ್ತಿ ಯಲ್ಲಮ್ಮಾ ಪುರಸಭೆಯವರು ಬುಧವಾರದಂದು ಹಮ್ಮಿಕೊಂಡ ಅಮೃತ 2.0 ಕಾರ್ಯಕ್ರಮದಡಿಯಲ್ಲಿ ಡೇ- ನಲ್ಮ ಯೋಜನೆಯ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ನೀರಿನ ಮಹತ್ವ ಅರಿವು ಕಾರ್ಯಕ್ರಮದಲ್ಲಿ.  ಜಲ ದೀಪಾವಳಿ  ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು ಎಂಬ ಕಾರ್ಯಕ್ರಮದಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದರು.

 ಪಟ್ಟಣದಲ್ಲಿ 50 ವರ್ಷಗಳ ಹಿಂದೆ ಮಾಡಿದ ಪೈಪಲೈನ ಮುಖಾಂತರವೆ ನೀರನ್ನು ಬಿಡಲಾಗುತ್ತಿತ್ತು ಇದರಿಂದ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿತ್ತು ಆದ್ದರಿಂದ 24/7 ಕುಡಿಯುವ ನೀರಿನ ಯೋಜನೆ ಆರು ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳಲಿದೆ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ ಎಮ್ ಚನ್ನಪ್ಪನವರ ಪ್ರಾಸ್ಥಾವಿಕವಾಗಿ ಮಾತನಾಡಿದರು. ತಹಶೀಲ್ದಾರ ಎಮ್ ಎನ್ ಹೆಗ್ಗಣ್ಣವರ ಮಾತನಾಡಿದರು.

ನಂತರ ಸ್ವಸಹಾಯ ಸಂಘದ ಸದಸ್ಯರಿಗೆ ಕಿಟ್ ಗಳನ್ನು ಶಾಸಕ ವಿಶ್ವಾಸ ವೈದ್ಯರವರು ವಿತರಿಸಿದರು. ಬಿ ಎನ್ ಪ್ರಭುನವರ. ಸಮುದಾಯ ಸಂಘಟನಾಧಿಕಾರಿ ಎಸ್ ವಾಯ್ ಹಾದಿಮನಿ, ಅಭಿಯಂತರ ಶಂಕರ ದಂಡಿನ ಉಪಸ್ಥಿತರಿದ್ದರು. 

ಶಿವಾನಂದ ತಾರಿಹಾಳ ನಿರೂಪಿಸಿದರು. ಸಮುದಾಯ ಸಂಘಟನಾಧಿಕಾರಿ ಜಗದೀಶ ಗಾಣಿಗೇರ ವಂದಿಸಿದರು.


ಸುದ್ದಿ ಓದಿ