ಅಧ್ಯಕ್ಷರಾಗಿ ಮಜ್ಗಿ ವೀರೇಶ್ ಉಪಾಧ್ಯಕ್ಷರಾಗಿ ಟಿ.ಗೀತಾ ಆಯ್ಕೆ
ಹಗರಿಬೊಮ್ಮನಹಳ್ಳಿ 23: ಹಳೇ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಮಜ್ಗಿ ವೀರೇಶ್ ಉಪಾಧ್ಯಕ್ಷರಾಗಿ ಟಿ.ಗೀತಾ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.
ಶಾಲಾ ಆವರಣದಲ್ಲಿ ನಿಕಟ ಪೂರ್ವ ಉಪಾಧ್ಯಕ್ಷೆ ವೈ.ಎಂ.ಲತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ, ಮುಂದಿನ 3ವರ್ಷದ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿಗಳ ಪಾಲಕರಲ್ಲಿ ಸಮಿತಿ ಸದಸ್ಯರಾಗಿ 18ಜನ ಆಯ್ಕೆಯಾಗಿ, ಬಳಿಕ ಅಧ್ಯಕ್ಷ ಸ್ಥಾನಕ್ಕೆ ಮಜ್ಗಿ ವೀರೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಗೀತಾ ನಾಗರಾಜ್ ಆಕ್ಷಾಂಕ್ಷಿಗಳಾಗಿದ್ದರು. ನೆರೆದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಇವರನ್ನು ಅವಿರೋಧ ಆಯ್ಕೆಯಾಗಿ ಘೋಷಿಸಲಾಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಮಜ್ಗಿ ವೀರೇಶ್ ಮಾತನಾಡಿ, ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸಲು ಸಮಿತಿ ಸದಸ್ಯರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಪಾಲಕರು, ಶಾಲೆಯ ಹಳೇಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಮತ್ತು ಶಾಲಾ ಶಿಕ್ಷಕರ ಬಳಗದ ಸಹಕಾರ ಅಗತ್ಯವಾಗಿದೆ. ಎಲ್ಲರ ಸಲಹೆ ಸಹಕಾರದೊಂದಿಗೆ ಸರ್ಕಾರಿ ಶಾಲೆಯನ್ನು ತಾಲೂಕಿಗೆ ಮಾದರಿಯಾಗಲು ಶ್ರಮಿಸೋಣವೆಂದು ಕರೆ ನೀಡಿ, ಶಾಲೆಯ ಸಮಗ್ರ ಅಭಿವೃಧ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಾಜಿ ಸದಸ್ಯರಾದ ಗಣಪತಿ ಹಾಗೂ ಸದಸ್ಯೆ ವಕೀಲರಾದ ವಾಸಂತಿ ಸಾಲ್ಮನಿ ಮಾತನಾಡಿ, ನಮ್ಮ ಮೂರುವರ್ಷದ ಅವಧಿಯಲ್ಲಿ ನಮ್ಮಿಂದ ಎಷ್ಟು ಸಾಧ್ಯನೋ ಅಷ್ಟು ಶಾಲಾ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮುಂದೆಯೂ ಅಭಿವೃದ್ಧಿಯತ್ತ ಸಾಗಲಿ ಎಂದು ತಿಳಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ಎಚ್.ಎಂ.ಚನ್ನಮ್ಮ ವಿಜಯಕುಮಾರ್, ದೀಪಕ್ಸಾ ಕಠಾರಿ. ನೂತನ ಸದಸ್ಯರಾದ ಎಚ್.ಸೋಮಶೇಖರ್, ಆಟೋ ಬಾಬ ಫಕೃದ್ಧೀನ್, ಬಿ.ಪಿ.ವೆಂಕಟೇಶ್, ಕೆ.ಶಿವಕುಮಾರ್, ಎ.ಸುನೀಲ್, ಬಿ.ಜಾನಿ, ಹನುಮಂತಪ್ಪ, ಟಿ.ಮೂನೀರ್, ವನಜಾಕ್ಷಿ, ಗಂಗಮ್ಮ, ರತ್ನಮ್ಮ, ಶಬೀರಾಬೀ, ಶಿಲ್ಪ ಬೇಲೇರಿ, ಗೀತಾ ಪತ್ತಾರ್, ಬಿ.ಎಂ.ಪಲ್ಲವಿ, ನಾಗವೇಣಿ ತಟ್ಟಿ, ಮುಖ್ಯ ಶಿಕ್ಷಕ ಕೊಟ್ರೇಶ ಶೆಟ್ಟರ್, ಸಿಆರ್ಪಿಯ ನರೇಂದ್ರ, ಶಿಕ್ಷಕರಾದ ಶಾಂತಮೂರ್ತಿ, ದ್ವಾರಕೇಶ್, ರಾಧ ಮತ್ತಿತರರು ಇದ್ದರು. ಶಿಕ್ಷಕ ರಂಗನಾಥ ಹವಾಲ್ದಾರ್ ನಿರ್ವಹಿಸಿದರು.