ರಾಣೆಬೆನ್ನೂರ

ಹಬ್ಬದ ಸಂಭ್ರಮದೊಂದಿಗೆ ಶಾಂತಿ ಕಾಪಾಡಿ: ಎಸ್ಪಿ ಯಶೋಧಾ

ಹಬ್ಬದ ಸಂಭ್ರಮದೊಂದಿಗೆ ಶಾಂತಿ ಕಾಪಾಡಿ: ಎಸ್ಪಿ ಯಶೋಧಾ


   ರಾಣೆಬೆನ್ನೂರು, ಆ.18: ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ ಕರೆ ನೀಡಿದರು.  

ನಗರ ಠಾಣೆ ಪೊಲೀಸ್ ಭವನದಲ್ಲಿ ನಡೆದ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ಜಗಳಗಳಿಗೆ ಕೋಮು ಬಣ್ಣ ನೀಡಬಾರದು. ಯುವಕರು ಹಿರಿಯರ ಸಲಹೆ ಪಾಲಿಸಿ ನಗರದಲ್ಲಿ ಶಾಂತಿ ಕಾಪಾಡಬೇಕು ಎಂದರು.  

ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆ ನಿಗದಿತ ಮಾರ್ಗದಲ್ಲೇ ಸಾಗಬೇಕು. ಬ್ಯಾನರ್, ಬಂಟಿಂಗ್ ಅಳವಡಿಸಲು ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು. ಕಾನೂನು ಉಲ್ಲಂಘಿಸಿ ಶಾಂತಿಭಂಗಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.  

ಡಿವೈಎಸ್ಪಿ ಲೋಕೇಶ್, ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎಚ್‌.ಕೆ. ಬಿದರಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ನೂರಾರು ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ