ಶಿಗ್ಗಾವ್

ತಮ್ಮ ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ: ಸತೀಶ

ತಮ್ಮ ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ: ಸತೀಶ

ಶಿಗ್ಗಾವಿ 25: ಮಳೆಯಿಂದಾಗಿ ಸೊಳ್ಳೆಗಳು ಹೆಚ್ಚುತ್ತಿದ್ದು ಇದರಿಂದಾಗಿ ಡೆಂಗ್ಯೂ ಹರಡುತ್ತಿದೆ ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದು  ತಾಲೂಕ ವೈದ್ಯಾಧಿಕಾರಿ ಸತೀಶ.ಎ.ಆರ್ ಹೇಳಿದರು. 

ಪಟ್ಟಣದ ಅಂಬೇಡ್ಕರ ಆಡಳಿತ ಭವನದ ಸಭಾಂಗಣದಲ್ಲಿ ವಿಜ್ಞಾನ ಶಿಕ್ಷಕರಿಗೆ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ಮನೆಯ ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಡ್ರಮಗಳಲ್ಲಿ, ಬಕೆಟಗಳಲ್ಲಿ ನೀರು ಇದ್ದಲ್ಲಿ ಅದನ್ನು ಮುಚ್ಚಿಡಬೇಕು ಅಲ್ಲದೇ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಬೇಕು ಎಂದರು.  

 ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ ಶಾಲೆಯ ಸುತ್ತಮುತ್ತ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಸುತ್ತಮುತ್ತ ಸಾರ್ವಜನಿಕರಿಗೆ ಪಾಲಕರಿಗೆ ಮತ್ತು ಪೋಷಕರಿಗೆ ಮಳೆ ನೀರು ಸಂಗ್ರಹವಾಗದಂತೆ ಮುಂಜಾಗ್ರತೆವಹಿಸಲು ಜಾಗೃತಿ ಮೂಡಿಸಬೇಕು ಎಂದರು. 

ಡಾ. ಸುರೇಶ ಪೂಜಾರ, ಆರೋಗ್ಯ ಮೇಲ್ವಿಚಾರಕ ಕುಂದಗೋಳ, ಗುರುನಾಥ ಹಾಗಲೂರ, ರಾಮನಗೌಡ ಪಾಟೀಲ, ಮಹಾಲಕ್ಷ್ಮಿ ಸೇರಿದಂತೆ ಶಿಗ್ಗಾವಿ ತಾಲೂಕ ಎಲ್ಲಾ ಸರಕಾರಿ ್ಘ ಖಾಸಗಿ ಪ್ರೌಢ ಶಾಲೆ  ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ