ಚಿಕ್ಕೋಡಿ

50ನೇ ಬಾರಿ ರಕ್ತದಾನ ಮಾಡಿದ ಮಹೇಶ ಬಾಕಳೆಗೆ ಸಾರ್ವಜನಿಕರಿಂದ ಮೆಚ್ಚುಗೆ

50ನೇ ಬಾರಿ ರಕ್ತದಾನ ಮಾಡಿದ ಮಹೇಶ ಬಾಕಳೆಗೆ ಸಾರ್ವಜನಿಕರಿಂದ ಮೆಚ್ಚುಗೆ


ಮಾಂಜರಿ, 19 : ಸಮೀಪದ ಯಕ್ಷಂಬಾ ಪಟ್ಟಣದ 45 ವರ್ಷದ ಯುವಕ ಮಹೇಶ ಬಾಕಳೆ ಪಟ್ಟಣದ ಮರಾಠಾ ಮಂಡಳ ಸಾಂಸ್ಕೃತಿಕ ಭವನದಲ್ಲಿ 50ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. 

ಮಹೇಶ ಅವರು ಕಳೆದ 2000 ಇಸ್ವಿಯಿಂದ ಪ್ರತಿ ವರ್ಷ ರಕ್ತದಾನ ಮಾಡುತ್ತಾ ಬಂದಿದ್ದಾರೆ ಇತ್ತೀಚಿಗೆ ತಮ್ಮ ಪರಿಚಿತನ ಅತ್ತಿಗೆಗೆ ತುರ್ತು ರಕ್ತದ ಅವಶ್ಯಕತೆ ಉಂಟಾದಾಗ, ಕ್ಷಣವೂ ತಡ ಮಾಡದೆ ಬೆಳಗಾವಿಯ ಕೆ.ಎಲ್‌.ಇ. ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಅವರಿಗಿದು ಹೊಸದು ಅಲ್ಲ. ಕಳೆದ ಹಲವಾರು ವರ್ಷಗಳಿಂದ, ಅವರು ಯಾರೇ ಕರೆದರೂ ಸ್ವಂತ ಖರ್ಚಿನಿಂದ, ಯಾವುದೇ ಫಲಾಪೇಕ್ಷೆಯಿಲ್ಲದೆ, ದೂರದ ಆಸ್ಪತ್ರೆಗೂ ತೆರಳಿರಕ್ತದಾನ ಮಾಡುವ ಕಾಯಕ ಬೆಳೆಸಿಕೊಂಡಿದ್ದಾರೆ. 

ವೆಬ್‌ಸೈಟ್ ಉದ್ಘಾಟಣೆ: ಪಟ್ಟಣದ ಸ್ವಾಮಿ ವಿವೇಕಾನಂದ ಯುವ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಹಾಗೂ ಆದರ್ಶ ಬ್ಲಡ್ ಬ್ಯಾಂಕ್ ಚಿಕ್ಕೋಡಿ ಇವರ ಸಹಯೋಗದಲ್ಲಿ ಪಟ್ಟಣದ ಮರಾಠಾ ಭವನದಲ್ಲಿ ಇಂದು ಏರಿ​‍್ಡಸಿದ್ದ ರಕ್ತದಾನ ಶಿಬಿರ ಹಾಗೂ ಸಂಸ್ಥೆಯ ವೆಬ್‌ಸೈಟ್ ಉದ್ಘಾಟಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಚಿಂಚಣಿ ಮಠದ ಶಿವಪ್ರಸಾದ ದೇವರು ಮಾತನಾಡಿದರು. 

ರಕ್ತದಾನ ಸರ್ವಶ್ರೇಷ್ಠ ದಾನವಾಗಿದ್ದು ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು. ಸ್ವಾಮಿ ವಿವೇಕಾನಂದರ ಪುತ್ಥಳಿ ನಿರ್ಮಾಣಕ್ಕೆ ಚಿಂಚಣಿ ಮಠದಿಂದ 11,000 ರೂ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು. 

ಪಪಂ ಅಧ್ಯಕ್ಷ ಸುನೀಲ ಸಪ್ತಸಾಗರೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರವೀಂದ್ರ ಮಾನೆ ಮತ್ತು ಉಮೇಶ ಸಾತ್ವರ, ಆದರ್ಶ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಆಗಮಿಸಿದ್ದರು. ಗುರುದತ್ತಜಿ ಕಾಮತ ಅಧ್ಯಕ್ಷತೆ ವಹಿಸಿದ್ದರು. 200ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಸತೀಶ ಅಥಣಿ ಡಾ.ಕುಮಾರ ಕುಂಬಾರ ನಿರೂಪಿಸಿದರು. ಜಗದೀಶ ಮಠದ ಸ್ವಾಗತಿಸಿದರು. ರಾಮಚಂದ್ರ ಬಾಕಳೆ ವಂದಿಸಿದರು. 


ಸುದ್ದಿ ಓದಿ