ಮಹಲಿಂಗಪುರ

ಹಿಂದೂ ರುದ್ರಭೂಮಿಯಲ್ಲಿ ಮಹಾಶಿವರಾತ್ರಿ ಆಚರಣೆ

ಹಿಂದೂ ರುದ್ರಭೂಮಿಯಲ್ಲಿ ಮಹಾಶಿವರಾತ್ರಿ ಆಚರಣೆ


ಮಹಾಲಿಂಗಪುರ 03: ಪ್ರತಿವರ್ಷ ಆಚರಿಸುವಂತೆ 15ನೇ ವರ್ಷದ ಮಹಾಶಿವರಾತ್ರಿಯನ್ನು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಶಿವ ಭಕ್ತರಿಂದ ಪೂಜೆ, ಪ್ರವಚನ ಹಾಗೂ ಶಿವನ ಭಜನೆ ಮಾಡುವ ಮೂಲಕ ಆಚರಿಸಲಾಯಿತು.  

ಹಿಂದೂ ರುದ್ರಭೂಮಿಯಲ್ಲಿ ಪ್ರತಿಯೊಬ್ಬರೂ ಉತ್ತರಾಣಿ ಕಡ್ಡಿ ಜ್ಯೋತಿ ಹಾಗೂ ಕರ​‍್ೂರಗಳಿಂದ ಶಿವನ ಭವ್ಯ ಭಾವಚಿತ್ರವನ್ನು ಬೆಳಗಿ ಪೂಜೆ ಸಲ್ಲಿಸಿ ಶಿವರಾತ್ರಿ ಆಚರಣೆಗೆ ಚಾಲನೆ ನೀಡಿದರು.  

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸಿ ಶಾಲೆಯ ಪ್ರಮುಖರಾದ ಎಸ್‌. ಡಿ. ತಿಪ್ಪಾ ಮಾತನಾಡಿ ಶಿವರಾತ್ರಿ ಆಚರಣೆ ಕೇವಲ ಕಾಟಾಚಾರಕ್ಕೆ ಆಗದೆ ಪ್ರತಿ ದಿವಸವೂ ಶಿವನ ನಾಮಸ್ಮರಣೆ ಮಾಡುತ್ತಾ ಬದುಕು ಸಾಗಿಸಬೇಕು ಆಗ ಮಾತ್ರ ಶಿವರಾತ್ರಿ ಆಚರಣೆಗೆ ಮಹತ್ವ ಬರುತ್ತದೆ ಎಂದು ಶಿವರಾತ್ರಿ ಹಾಗೂ ಶಿವ ಭಜನೆಯ ಮಹತ್ವವನ್ನು ತಿಳಿಸಿದರು.  

ಹಿರಿಯರಾದ ಭಗವಂತ ಸೋನಾರ್ ಮಾತನಾಡಿ ಶಿವರಾತ್ರಿ ಎಂದರೆ ಕತ್ತಲೆಯಿಂದ ಬೆಳಕಿನಡೆಗೆ ಸಾಗಿಸುವ ಆಹೋರಾತ್ರಿ ನಡೆಸುವ ಜಾಗರಣೆಯು ನಿರಾಕಾರ, ನಿರ್ಗುಣ ಆ ಪರಮಾತ್ಮನ ನಾಮಸ್ಮರಣೆಯೇ ಆಗಿದೆ ಎಂದರು. 

ಮಾಜಿ ಪುರಸಭಾಧ್ಯಕ್ಷ ಶೇಖರ್ ಅಂಗಡಿ, ಜಿ.ಎಸ್‌.ಗೊಂಬಿ ಹಾಗೂ ಮಾಜಿ ಪುರಸಭಾ ಸದಸ್ಯ ಸಂಗಪ್ಪ ಹಲ್ಲಿ ಮಾತನಾಡಿ ಹಿಂದೂ ರುದ್ರಭೂಮಿ ಸಮಿತಿ 14-15 ವರ್ಷಗಳಿಂದ ಶಿವರಾತ್ರಿಯನ್ನು ರುದ್ರಭೂಮಿಯಲ್ಲಿ ಆಚರಿಸುತ್ತ ಜನರಲ್ಲಿ ಭಕ್ತಿ-ಭಾವ, ಶಿವನಾಮ ಸ್ಮರಣೆಯನ್ನು ಜಾಗೃತಿಗೊಳಿಸುತ್ತಾ ರುದ್ರಭೂಮಿಯ ಅಭಿವೃದ್ಧಿಯನ್ನೂ ಮಾಡುತ್ತಾ ಬಂದಿರುವ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ. ಹಿಂದೂ ರುದ್ರಭೂಮಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪಟ್ಟಣದ ಎಲ್ಲ ಹಿರಿಯರು ಸೇರಿ ಎಲ್ಲ ಸಮುದಾಯಗಳಿಗೆ ನೀಡುವ ಒಂದು ವರ್ಷದ ಅನುದಾನವನ್ನು ಬಳಸಿಕೊಂಡು ಏಕಕಾಲದಲ್ಲಿ ಸ್ಮಶಾನವನ್ನು ಆಧುನಿಕರಣಗೊಳಿಸಬಹುದು ಎಂದು ತಮ್ಮ ತಮ್ಮ ಅಭಿಪ್ರಾಯವನ್ನು ವೇದಿಕೆ ಮೇಲೆ ಮಂಡಿಸಿದರು. 

ಹಿಂದೂ ರುದ್ರಭೂಮಿ ಸಮಿತಿಯ ಸಿದ್ದಪ್ಪ ಶಿರೋಳ ಪ್ರಾಸ್ತಾವಿಕ ನುಡಿಗಳನ್ನಾಡಿ ಸತತ ಹದಿನೈದು ವರ್ಷಗಳಿಂದ ರುದ್ರಭೂಮಿಯ ಸವಾಂರ್ಗೀಣ ಅಭಿವೃದ್ಧಿಗಾಗಿ ಪುರಸಭೆಗೆ ಮನವಿಯನ್ನು ನೀಡುತ್ತಲೇ ಬಂದಿದ್ದೆವು, ಪುರಸಭೆ ಈ ಮುಂಚೆಯೂ ಹಲವಾರು ಕೆಲಸಗಳನ್ನು ಮಾಡಿದ್ದು ಈ ವರ್ಷವೂ ಕೂಡ ರುದ್ರಭೂಮಿ ಅಭಿವೃದ್ಧಿಗಾಗಿ 1ಕೋಟಿ 6 ಲಕ್ಷ ರೂ.ಗಳ ಅನುದಾನವನ್ನು ನೀಡಿದೆ. ಸಮಿತಿ ಹಾಗೂ ಮಹಾಲಿಂಗಪುರ ಸಮಸ್ತ ಜನತೆಯ ಪರವಾಗಿ ಪುರಸಭೆಗೆ ಧನ್ಯವಾದಗಳು ಎಂದರು.  

ಈ ಕಾರ್ಯಕ್ರಮದ ಮುಂಚೆ ಹಾಗೂ ಮಂಗಲವನ್ನು ಟೊನಪಿನಾಥೇಶ್ವರ ಭಜನಾ ಮಂಡಳಿಯ ಮಲ್ಲಪ್ಪ ನುಚ್ಚಿ, ಸುಭಾಸ ಸೋರಗಾವಿ, ರಾಜು ಹಾಗೂ ಪ್ರಕಾಶ್ ಬೆಳಗಲಿ, ರವೀಂದ್ರ ಮುಗಳಿಹಾಳ, ಸದಾಶಿವ ಕೋಳಿ, ಕದ್ದಿಮನಿ ಇನ್ನಿತರರು ಶಿವ ಭಜನೆ ಮಾಡಿದರು. 

ಗೋಲೇಶ ಅಮ್ಮನಗಿ, ಶ್ರೀಶೈಲಪ್ಪ ವಜ್ಜರಮಟ್ಟಿ, ಶಿವಾನಂದ ಟಿರಿಕಿ, ಪಂಡಿತ ಬಡಿಗೇರ, ನಿಂಗಪ್ಪ ಬಾಳಿಕಾಯಿ, ಶಂಭು ಬಡಿಗೇರ್, ಹನುಮಂತ ಜಮಾದಾರ, ಗುರುಪಾದ ದಲಾಲ, ಪ್ರಕಾಶ ಸಗರಿ, ಈಶ್ವರ ವಂದಾಲ, ಡಿ.ಬಿ ನಾಗನೂರ, ಯಮನಪ್ಪ ಹರಿಜನ ಉಪಸ್ಥಿತರಿದ್ದು ಲಕ್ಷ್ಮಣ್ ಕಿಶೋರಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ