ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ

ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ

ಬೆಳಗಾವಿ : ಮಹಾ ಸಚಿವನ ಆಪ್ತನ ಎಡವಟ್ಟಿನಿಂದ ಎಮ್ ಇಎಸ್ ಮುಖಂಡರು ಸಿಡಿಮಿಡಿಗೊಂಡಿದ್ದು, (ಟಿಪಿ) ಪ್ರವಾಸದ ವೇಳಾಪಟ್ಟಿಯಲ್ಲಿ ಬೆಳಗಾವಿ ಎಂದು ಬರೆಲಾಗಿದ್ದು, ಇದರಿಂದ ಸಚಿವ ಉದಯ ಸಾಮಂತ ವಿರುದ್ದ ಬೆಳಗಾವಿ ಎಮ್ ಇಎಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವ ಉದಯ ಸಾಮಂತ ಎಡವಟ್ಟು ಮಾಡಿರುವ ಆಪ್ತ ಸಹಾಯಕನ ಕೆಲಸದಿಂದ ತೆಗೆದಹಾಕುವದಾಗಿ ಹೇಳಿಕೆ ನೀಡಿದ್ದಾರೆ. 

    ಬೆಳಗಾವಿಗೆ ನಿನ್ನೆ ಆಗಮಿಸಿದ್ದ ಮಹಾರಾಷ್ಟ್ರ ಕೈಗಾರಿಕಾ, ಭಾಷಾ ಸಚಿವ ಉದಯ ಸಾಮಂತ ಅವರ (ಟಿಪಿ) ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಬೆಳಗಾವಿ ಎಂದು ಬರೆದಿರುವ ಕ್ರಮವನ್ನು ಬೆಳಗಾವಿ ಎಮ್ ಇಎಸ್ ಮುಖಂಡರು ಪ್ರಶ್ನಿಸಿ, ನೀವೇ ಹೀಗೆ ಮಾಡಿದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

   ಇದಕ್ಕೆ ಸಮಜಾಯಿಸಿ ನೀಡಿದ ಮಹಾರಾಷ್ಟ್ರ ಸಚಿವ ಉದಯ ಸಾಮಂತ ಅವರು, ಈ ಬಗ್ಗೆ ತಾವು ತಮ್ಮ ಕಚೇರಿಗೆ ತೆರಳಿದ ಬಳಿಕ ತಪ್ಪು ಮಾಡಿದವರನ್ನು ತೆಗೆದು ಹಾಕುವ ಬಗ್ಗೆ ಭರವಸೆ ನೀಡಿದರು. 

   ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಏಕನಾಥ ಶಿಂಧೆ ಅವರ ಸಭೆಯನ್ನು ಕೂಡ ಮುಂಬಯಿನಲ್ಲಿ ಸಭೆ ನಡೆಸಲು ವಿನಂತಿಸುವೆ. ಆ ಸಭೆಗೆ ಬೆಳಗಾವಿ ಎಮ್ ಇಎಸ್ ಮುಖಂಡರನ್ನು ಅಹ್ವಾನಿಸುವದಾಗಿ ಹೇಳಿದರು.

   ಅಲ್ಲದೆ ಸದ್ಯದಲ್ಲಿಯೇ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜೆ ದೇಸಾಯಿ ಅವರನ್ನು ಬೆಳಗಾವಿಗೆ ಕರಕೊಂಡು ಬಂದು ಸಭೆ ಆಯೋಜನೆ ಮಾಡುವದಾಗಿ ಹೇಳಿದರು.

ಸುದ್ದಿ ಓದಿ