ಮುದ್ದೆಬಿಹಾಲ್

ನೂತನ ಅಧ್ಯಕ್ಷರಾಗಿ ಮಾಹಾಂತೇಶ ನೇಮಕ

ನೂತನ ಅಧ್ಯಕ್ಷರಾಗಿ ಮಾಹಾಂತೇಶ ನೇಮಕ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಪಟ್ಟಣದ ಹುಡ್ಕೋ ಕಾಲೋನಿಯ ನಿವಾಸಿ ಮಾಹಾಂತೇಶ ಬೂದಿಹಾಳಮಠ ಅವರನ್ನು ರಾಜ್ಯಾಧ್ಯಕ್ಷರ ಡಾ/ ಎಸ್ ಬಾಲಾಜಿ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ, ಈ ಕೂಡಲೇ ಅವರು ಒಕ್ಕೂಟದ  ಜವಾಬ್ದಾರಿಯನ್ನು ತಗೆದುಕೊಂಡು ಗ್ರಾಮೀಣ ಭಾಗಗಳಲ್ಲಿನ ಯುವ ಸಂಘಗಳನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಅಧ್ಯಕ್ಷ ಪುಂಡಲಿಕ ಮುರಾಳ ಪತ್ರಿಕಾ ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ