ಮಹಲಿಂಗಪುರ

ಮಹಾಲಿಂಗಪುರ ಶೇ 70.16 ರಷ್ಟು ಮತದಾನ.

ಮಹಾಲಿಂಗಪುರ ಶೇ 70.16 ರಷ್ಟು ಮತದಾನ.

ಮಹಾಲಿಂಗಪುರ : 2023ರ ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಸ್ಥಳೀಯ 23 ವಾರ್ಡಿನ 33 ಬೂತ್ ಗಳಲ್ಲಿ ಅತ್ಯಂತ ಶಾಂತಿಯುತ ಮತದಾನ ನಡೆಯಿತು. 

ನಗರದಾದ್ಯಂತ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆದು ಮಧ್ಯಾಹ್ನ 12ರ ನಂತರ ಬಿಸಿಲಿನ ಬೇಗೆಯಿಂದ ಬಸವಳಿದ ಮತದಾರರು ಸ್ವಲ್ಪ ಹೊತ್ತು ಬಿಡುವು ಮಾಡಿಕೊಂಡು ಸಂಜೆ 4 ರ ನಂತರ ಮತ್ತೆ ಚುರುಕಿನ ಮತದಾನ ಮಾಡಿದರು. 

21ನೇ ಭೂತನಲ್ಲಿ ಮತಯಂತ್ರ ದೋಷದಿಂದಾಗಿ ಒಂದು ಗಂಟೆ ಮತದಾನ ವಿಳಂಬವಾಗಿ ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಶೇಕಡ 40ರಷ್ಟು ಮತದಾನವಾಗಿದ್ದು ಮುಕ್ತಾಯದ ಹಂತಕ್ಕೆ ಶೇ. 70.16 ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿ ನಾಮದೇವ ಲಮಾಣಿ, ಸೆಕ್ಟರ್ ಅಧಿಕಾರಿಗಳಾದ ಸಿ.ಎಸ್‌.ಮಠಪತಿ, ರಾಜಕುಮಾರ ಸರಿಕರ ಮಾಹಿತಿ ನೀಡಿದರು. 

ಮುಖ್ಯಾಧಿಕಾರಿ ಜಗದೀಶ ಈಟಿ ಇದ್ದರು. ಮಹಾಲಿಂಗಪುರ ಪಿಎಸ್‌ಐ  ವಿಜಯಕುಮಾರ್ ಬೀಳಗಿಯವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಏರಿ​‍್ಡಸಲಾಗಿತ್ತು. ಕೆಂಗೇರಿಮಡ್ಡಿಯಲ್ಲಿ ಸಖಿ ಬೂತ್ ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ಅಭ್ಯರ್ಥಿಗಳಾದ ಶಾಸಕ ಸಿದ್ದು ಸವದಿ,  ಸಿದ್ದು ಕೊಣ್ಣೂರ, ಅರ್ಜುನ ಹಲಗಿಗೌಡರ, ಸುರೇಶ ಮಡಿವಾಳರ, ಪದ್ಮಜಿತ ನಾಡಗೌಡ ಪಾಟೀಲ, ಅಂಬಾದಾಸ ಕಾಮೂರ್ತಿ ಭೇಟಿ ನೀಡಿದರು. 


ಸುದ್ದಿ ಓದಿ