ಮಹಾಲಿಂಗಪುರ ಶಾಂತಿಯುತ ಮತದಾನ
ಮಹಾಲಿಂಗಪುರ : ತಮ್ಮ ತಮ್ಮ ಕ್ಷೇತ್ರದ ನಾಯಕನನ್ನು ಹಾಗೂ ತಮಗೆ ಬೇಕಾದ ಸಕರ್ಾರವನ್ನು ತಾವೇ ಅರಿಸಿಕೊಳ್ಳುವ ಪ್ರಜಾಪ್ರಭುತ್ವದ ಮಹಾಹಬ್ಬ,ರಾಜ್ಯದ 224 ಕ್ಷೇತ್ರಗಳಿಗೆ ರಾಜ್ಯದಲ್ಲಿ ನಡೆಯುತ್ತಿರುವ 16 ನೇ ವಿಧಾನ ಸಭೆ ಚುನಾವಣೆಯಲ್ಲಿ ನಗರದ ಎಲ್ಲಾ 33 ಮತದಾನ ಕೇಂದ್ರದಲ್ಲಿ ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.
ಮತದಾರ ಪ್ರಭು ಮುಂಜಾನೆ 7 ಗಂಟೆಯಿಂದಲೇ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಪ್ರಜಾಪ್ರಭುತ್ವದ ಘನತೆ ಗೌರವ ಎತ್ತಿ ಹಿಡಿದು ಪ್ರಭುತ್ವತೆ ಮೆರೆದ ಮತದಾರರು ಕಳೆದ ನಲ್ವತ್ತು ದಿನಗಳಿಂದ ನಡೆದ ಬ್ರಹತ್ ಪ್ರಕ್ರಿಯೆಗೆ ಮತದಾನದ ಮಾಡುವ ಮೂಲಕ ತೆರೆ ಎಳೆದರು.
ಗಮನ ಸೆಳೆದ ಸಖಿ ಕೇಂದ್ರ : ನಗರದ ಕೆಂಗೇರಿ ಮಡ್ಡಿಯಲ್ಲಿರುವ 191 ನೇ ಮತಗಟ್ಟೆಯಲ್ಲಿ ಸ್ಥಾಪಿಸಿರುವ ಪಿಂಕ್ ಕಲರಿನ ಸಖಿಯರ ಮತಗಟೇ ಮಹಿಳೆಯರ ಆಕರ್ಷಣೆ ಕೇಂದ್ರವಾಗಿತ್ತು. ಇಲ್ಲಿ ಬರುವ ನಗರ ಸಭೆಯ ಮೂರು ವಾರ್ಡಗಳ ಮಹಿಳೆಯರ ಒಟ್ಟು 1700 ಕ್ಕೂ ಹೆಚ್ಚು ಮತಗಳು ಬರುತ್ತವೆ, ಮಹಿಳಾ ಮತದಾರರು ತಮ್ಮ ಮತ ಚಲಾಯಿಸಿ ತಮ್ಮ ತೋರು ಬೆರಳು ತೋರಿಸುತ್ತಾ ಹೊರ ಬರುವುದು ಎಲ್ಲರ ಗಮನ ಸೆಳೆಯಿತು.
ತಡವಾಗಿ ಆರಂಭ : ನಗರದ ಗಾಂಧಿ ಸರ್ಕಲನಲ್ಲಿರುವ 201 ನೇ ಮತದಾನ ಕೇಂದ್ರದಲ್ಲಿ ಇಲೆಕ್ಟ್ರಿಕಲ್ ವೋಟಿಂಗ್ ಮಷಿನ್ (ಇ ವಿ ಎಂ ) ತಾಂತ್ರಿಕ ತೊಂದರೆಯಿಂದಾಗಿ ಮತದಾನ ಒಂದು ಗಂಟೆ ತಡವಾಗಿ 7 ರ ಬದಲು 8 ಘಂಟೆಗೆ ಆರಂಭವಾಯಿತು.ಇದನ್ನೂ ತಾಲೂಕಾ ಹೋರಾಟ ಸಮೀತಿ ಅಧ್ಯಕ್ಷ ಸಂಗಪ್ಪ ಹಲ್ಲಿಯವರು ಒಂದು ತಾಸು ತಡವಾದರು ಸಹ ನಿಂತು ಇಲ್ಲಿ ಮೊದಲ ಮತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಗಣ್ಯರ ಮತದಾನ : ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ,ಪುರದ ಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷರಾದ ಬಸವರಾಜ ಹಿಟ್ಟಿನಮಠ,ನಗರದ ಹಿರಿಯ ಜಾನಪದ ಕಲಾವಿದ ಗುರುರಾಜ ಹೊಸಕೋಟಿ, ಸಿದ್ದಾರೂಢ ಆಶ್ರಮದ ಸಹಜ ಯೋಗಿ ಸಹಜಾನಂದ ಸ್ವಾಮೀಜಿಗಳು, ಆಮ್ ಆದ್ಮಿ ಪಕ್ಷದ ಅಜರ್ುನ ಹಲಗಿಗೌಡರ ಮತದಾನ ಮಾಡಿ ಪ್ರಜಾಪ್ರಭುತ್ವದ ಘನತೆ ಹೆಚ್ಚಿಸಿದರು.
ಪಟ್ಟಣದ ಒಟ್ಟು 33 ಮತಗಟ್ಟೆಗಳಲ್ಲು ಸಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ, ಸೇನಾ ಸಿಬ್ಬಂದಿಗಳು,ಹಾಗೂ ಪುರಸಭೆಯ ಸಿಬ್ಬಂದಿ ಸೇರಿ ಬಿಗಿ ಬಂದೋಬಸ್ತ, ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲ ವ್ಯೆವಸ್ಥೆ ಮಾಡಿದ್ದರು.