ಭೀಮಪ್ಪನ 9 ವರ್ಷದ ಪಾರಾಯಣ ಮತ್ತು ನಿರ್ಮಲ ಭಕ್ತಿಗೆ ಒಲಿದ ದೇವಿ
ಹನಮಂತ ನಾವಿ
ಮಹಾಲಿಂಗಪುರ : ಜಗತ್ತಿನಲ್ಲಿ ಅನೇಕ ತರಹ ಭಕ್ತಿ ಮಾರ್ಗಗಳಿವೆ ಅದರಲ್ಲಿ ದೇವಿ ಪಾರಾಯಣವು ಒಂದು ಸಮೀಪದ ಕೆಸರಗೊಪ್ಪ ಗ್ರಾಮದ ಭೀಮಪ್ಪಾ ಬಾಳಪ್ಪ ಕಲ್ಲಟ್ಟಿ ಅವರು ಮೂಲ ಉದ್ಯೋಗ ಕೃಷಿ ಆದರೂ ಪ್ರವೃತ್ತಿಯಲ್ಲಿ ಗೌಳಿ (ಹಾಲು )ಮಾರುವುದು ಮತ್ತು ಹಾಲು ತುಂಬಿಸಿಕೊಳ್ಳುವುದು ಪ್ರತಿ ದಿನ ಸೈಕಲ್ ಮೇಲೆ ಹತ್ತಾರು ಕಿಲೋಮೀಟರ್ ಸುತ್ತಾಡಿ ಹಾಲಿನ ಉದ್ಯೋಗ ಮಾಡುತ್ತಾ ಪ್ರತಿ ವರ್ಷ ಮಹಾಲಿಂಗಪುರದ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ಒಂಬತ್ತು ದಿನಗಳ ದಸರಾ ಉತ್ಸವ ದೇವಿ ಪುರಾಣ ಕೇಳಿ ಪ್ರೇರಿತನಾಗಿ ದೇವಿ ಪಾರಾಯಣ ಮಾಡಲು ಮನಸ್ಸು ಮಾಡಿದ.
ದೇವಿ ಪಾರಾಯಣ ಮಾಡಲು ದೇವಿ ಪಾರಾಯಣ ಪುಸ್ತಕ ಮತ್ತು ಬಿಳಿ ಕಂಬಳಿ ತರಲು ನಿರ್ಧರಿಸಿ ಪೇಟೆಗೆ ಹೋದ ಅಲ್ಲಿ ಕಂಬಳಿ ರೇಟ್ ಕೇಳಿ ದರ್ ಹೆಚ್ಚು ಇದ್ದರಿಂದ ಖರೀದಿ ಮಾಡದೇ ಪುಸ್ತಕ ಮಾತ್ರ ತೆಗೆದುಕೊಂಡು ವಾಪಾಸ್ ಮನೆಗೆ ಬಂದು ಹಣ ಹೊಂದಿಸಲು ಮುಂದಾದ.
ಬಿದ್ದ ಕನಸು : ಒಂದು ದಿನ ರಾತ್ರಿ ಊಟ ಮಾಡಿ ಮಲಗಿದ ಬೆಳಗಿನ ಜಾವಾ ಬಿತ್ತು ಒಂದು ಕನಸು ಕನಸ್ಸಿನಲ್ಲಿ ಪಾರ್ವತಿ ಪರಮೇಶ್ವರರು ಮತ್ತು ದುಗರ್ಾ ಮಾತೇ ಬಂದು ನಿನಗೆ ಬಿಳಿ ಕಂಬಳಿ ನಿನ್ನ ಮನೆಯಲ್ಲೇ ಇದೇ ಎಂದು ಹೇಳಿ ಮಾಯವಾದರು ಬೆಳ್ಳಿಗೆ ಎದ್ದು ನೋಡಿದರೆ ಮಹಾದ್ದಾಶ್ಚರ್ಯ ಮನೆಯಲ್ಲಿ ಹೊಸ ಬಿಳಿ ಕಂಬಳಿ ಇತ್ತು. ಇದು ದೇವಿ ಕೊಟ್ಟ ವರಪ್ರಸಾದ ಎಂದು ನಂಬಿದ ಭಕ್ತ.
ಅದೇ ದೇವರ ಕೊಟ್ಟ ಬಿಳಿ ಕಂಬಳಿ ಮೇಲೆ ಕುಳಿತು ಸತತವಾಗಿ ಎರಡು ವರ್ಷ ದೇವಿ ಪಾರಾಯಣ ಮಾಡಿ ದೇವಿಯನ್ನು ಒಲಿಸಿಕೊಂಡ, ಕೆಲ ದಿನಗಳ ನಂತರ ದೇವರ ಕಂಬಳಿಯನ್ನು ಇಲಿ ಕಡಿದು ಹಾಕಿತು ಆಗ ಗಾಬರಿಗೊಂಡ ದೇವಿ ಭಕ್ತ ಭೀಮಪ್ಪ ತನಗೆ ತಿಳಿದ ಹಿರಿಯರನ್ನು ಕೇಳಿದಾಗ ಅದು ಕೆಟ್ಟಿಲ್ಲ ದೇವಿ ಅದನ್ನು ಒಂಬತ್ತು ಭಾಗ ಮಾಡಲು ಆದೇಶ ಮಾಡಿದ್ದಾಳೆ ಎಂದು ಹೇಳಿದರು, ಅದನ್ನು ಅವರು ಆ ಕಂಬಳಿಯನ್ನು ಒಂಬತ್ತು ತುಂಡು ಮಾಡಿ ಅದಕ್ಕೆ ಕರಿಕಟ್ಟಿ ಇಟ್ಟುಕೊಂಡಿದ್ದಾರೆ. ಈಗಲೂ ಅವು ನೋಡಲು ಸಿಗುತ್ತವೆ. ಆನಂದ ಗುರೂಜಿಯವರ ಪ್ರೇರನೆಯಿಂದ ತನ್ನ ಹೊಲದಲ್ಲಿ ಮನೆಯ ಪಕದಲ್ಲಿ ಒಂದು ದೇವ ಮರ ಅರಳಿಗಿಡ ಮತ್ತು ಬೇವಿನಗಿಡ ಹಚ್ಚಿದ ಈಗ ಆ ಎರಡು ದೇವ ಮರಗಳಿಗೆ ಒಂಬತ್ತು ವರ್ಷ.
ಊರಿನ ಹಿರಿಯರು ಎಲ್ಲರೂ ಸೇರಿ ಈ ಎರಡು ಮರಗಳಿಗೆ ಒಂಬತ್ತು ವರ್ಷ ಆಗಿದ್ದರಿಂದ ಅವುಗಳಿಗೆ ಹನ್ನೊಂದು ವರ್ಷದೊಳಗೆ ಮದುವೆ ಮಾಡಿ ಕಾರ್ಯ ಮಾಡಬೇಕು ಇಲ್ಲದಿದ್ದರೆ, ದೇವರ ವಾಸ (ಇರುವಿಕೆ )ಆಗುವುದಿಲ್ಲ ರಾಕ್ಷಸರ ವಾಸ ಆಗುತ್ತದೆ ಎಂದು ಹೇಳಿದರು. ಅದರಂತೆ ತಮ್ಮ್ ಮನೆಯಲ್ಲಿ ಹೆಣ್ಣು ಮಕ್ಕಳ ಉಡದಟಿ ಕಾರ್ಯಕ್ರಮ ಮಾಡಿ ಎರಡು ದೇವರ ಮರಗಳಿಗೆ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾದರು.
ನಿರ್ಮಲ ಭಕ್ತಿಗೆ ಒಲಿದ ದೇವಿ : ಭೀಮಪ್ಪನ ನಿರ್ಮಲ ಭಕ್ತಿಗೆ ಮೊದಲು ಒಳಿದಿದ್ದು ಗಜಲಕ್ಷ್ಮಿ, ಭಕ್ತನ ಕನಸ್ಸಿನಲ್ಲಿ ನಿತ್ಯವು ಗಜಲಕ್ಷ್ಮಿ ಬಂದು ನನ್ನನ್ನು ಆರಾಧಿಸಿ ಎಂದು ಪ್ರೆರೆಫೀಸುತ್ತಿದ್ದಳು ಗಟ್ಟಿ ಮನಸು ಮಾಡಿದ ಭಕ್ತ ಗಜಲಕ್ಷ್ಮಿಯನ್ನು ಆರಾಧಿಸಿ ಒಲಿಸಿಕೊಂಡ, ಇದಾದ ನಂತರ ಕೆಲವೇ ದಿನಗಳಲ್ಲಿ ಮತ್ತೆ ಭಕ್ತನ ಕನಸ್ಸಿನಲ್ಲಿ ನಿತ್ಯವು ದುಗರ್ಾ ಮಾತೇ ಬಂದು ನನ್ನನ್ನು ಆರಾಧಿಸು ಎಂದು ಭಕ್ತನನ್ನು ಪೀಡಿಸುತ್ತಿದ್ದಳು, ಆಗ ಗಟ್ಟಿ ಮನಸು ಮಾಡಿದ ಭಕ್ತ ದೇವಿ ಹೇಳಿದಂತೆ ಕೇಳಿ, ಪಾರಾಯಣ ಮಾಡಿ ದೇವಿ ಒಲುಮೆಗೆ ಪಾತ್ರನಾದ, ಭೀಮಪ್ಪ.
ಮೂತರ್ಿಗೆ ಪ್ರೇರಣೆ : ಹೋದ ವರ್ಷ ದಸಾರದಲ್ಲಿ ದೇವಿ ಕನಸಲ್ಲಿ ಬಂದು ಪಂಚ ಲೋಹದ ಐದು ಅಡಿ ಎತ್ತರದ ಮೂತರ್ಿ ಮಾಡಿಸು ಎಂದು ಆಜ್ಞೆ ಮಾಡಿದಳು ಅದರಂತೆ ಕಳೆದ ಎಂಟು ತಿಂಗಳ ಹಿಂದೆ ರಾಜಸ್ತಾನದ ಜೈಪುರಕ್ಕೆ ಹೋಗಿ ಮೂತರ್ಿ ತಯಾರಿಸಲು ಕೊಟ್ಟು ಬಂದರು ಈಗ ಸುಂದರ ಮೂತರ್ಿ ತಯಾರಾಗಿ ಬಂದಿದ್ದು.
ಸ್ವಂತ ಖಚರ್ಿನಲ್ಲೇ ಮೂತರ್ಿ : ಭೀಮಪ್ಪಾ ಬಾಳಪ್ಪ ಕಲ್ಲಟ್ಟಿ ಆತನೇನು ಆಗರ್ಭ ಶ್ರೀಮಂತನಲ್ಲ ತಂದೆ ತಾಯಿಯಿಂದ ಬಂದ 30 ಗುಂಟೆ ಭೂಮಿ ಮತ್ತು ತಾನು ದುಡಿದು ಗಳಿಸಿದ ಒಂದೂವರೆ ಎಕರೆ ಒಟ್ಟು ಎರಡು ಎಕರೆ ಭೂಮಿ ಹೊಂದಿದು. ಈಗ ಮೂತರ್ಿಗೆ 3,50 ಲಕ್ಷ ಖಚರ್ು ಆಗಿದ್ದು ಮತ್ತು ಪ್ರತಿಷ್ಠಾಪನೆ, ಮೆರವಣಿಗೆ ವಾದ್ಯ ಮೇಳ ಅಣ್ಣಸಂತರ್ಪಣೆ ಇತರೆ ಎಲ್ಲವೂ ಸೇರಿ ಸುಮಾರು 10 ಲಕ್ಷ ಖಚರ್ು ಮಾಡುತ್ತಿದ್ದು ಯಾವುದೇ ಭಕ್ತರಿಂದ ದೇಣಿಗೆ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.
ಭವ್ಯ ಮೆರವಣಿಗೆ : ನಾಳೆ ದಿನಾಂಕ 15 ರಂದು ಮಹಾಲಿಂಗಪುರದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಕಲ ಮಂಗಲ ವಾದ್ಯಗಳೊಂದಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕೆಸರಗೋಪ್ಪದ ಆರಾಧ್ಯ ದೇವಿ ಸಿಮೀ ಲಕ್ಕವ್ವನ ಗುಡಿಗೆ ಹೋಗಿ ಪೂಜೆ ಸಲ್ಲಿಸಿ ಅಲ್ಲಿಂದ ಕೆಸರಗೋಪ್ಪ ಗ್ರಾಮದ ಮುತೈದೆಯರಿಂದ ಕುಂಭಮೇಳ ಹಾಗೂ ಹನ್ನೊಂದು ದೇವರ ಪಾಲಿಕೆಗಳೊಂದಿಗೆ ಮೂತರ್ಿ ಪ್ರತಿಷ್ಠಾಪನೆ ಮಾಡುವ ಕಲ್ಲಟ್ಟಿ ಆವರ ತೋಟಕ್ಕೆ ತಲುಪುವುದು, ಹೋಮ ಹವನ ಪೂಜಾ ವಿಧಾನಗಳು ಪೂತರ್ಿಗೊಳಿಸಿದ ನಂತರ ಮೂತರ್ಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಮೂತರ್ಿ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಆರಾಧಿಸುವುದು.
ಗುಡಿ ಕಟ್ಟುವುದು : ದೇವಿಯ ಆಜ್ಞೆಯಂತೆ ಇದೇ ದಿನಾಂಕ 24 ರಂದು ಅಡಿಗಲ್ಲು ನೆರವೇರಿಸುವುದು ಮುಂದಿನ ಬರುವ ದಸರಾ ವೇಳೆಗೆ ದೇವಿ ಮಂದಿರ ಉದ್ಘಾಟನೆ ಮಾಡುವುದು ಮತ್ತು ದೇವಿಯನ್ನು ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುವುದು.ಈ ಮಂದಿರದಲ್ಲಿ ಗಣಪತಿ, ಈರಣ್ಣ, ಕುಬೇರ, ಹನುಮಂತ, ಲಕ್ಷ್ಮಿ ನಾರಾಯಣ, ಪಾರ್ವತಿ ಪರಮೇಶ್ವರ ಸರಸ್ವತಿ, ಗಜಲಕ್ಷ್ಮಿ ನವದುಗರ್ಾ, ಅರಳಿಕಟ್ಟೆಯಲ್ಲಿ ಲಿಂಗಪ್ಪ ಮತ್ತು ಬಸವಣ್ಣನ ಹೀಗೆ ಒಟ್ಟು ಹನ್ನೊಂದು ದೇವರ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಪ್ರಧಾನ ಆರಾಧಕ ಭೀಮಪ್ಪಾ ತಿಳಿಸಿದರು.
ದೇವಿ ಪವಾಡಗಳು : ಕಳೆದ ಒಂಬತ್ತು ವರ್ಷಗಳಲ್ಲಿ ಭಕ್ತನ ನಿರ್ಮಲ ಭಕ್ತಿಗೆ ಒಲಿದ ಬಂದ ದೇವಿ ಅನೇಕ ಪವಾಡಗಳನ್ನು ಮಾಡಿದ್ದಾಳೆ, ಕಡುಬಡವ ಶಿವಾನಂದ ಕುರಿಗೆ ಹೃದಯಘಾತವಾಗಿತ್ತು ಕೆ ಎಲ್ ಇ ಆಸ್ಪತ್ರೆಯಲ್ಲಿ ಒಂದು ತಿಂಗಳು ಇದ್ದರು ಆರೋಗ್ಯ್ ಸುಧಾರಿಸದೆ ಇದ್ದುದ್ದರಿಂದ, ಬದುಕುವುದು ಕಷ್ಟ ಎಂದು ಹೇಳಿದ ವೈದ್ಯರು ಆಗ ಬೇರೆ ದಾರಿ ಕಾಣದೆ ದೇವಿಯನ್ನು ಮನದಲ್ಲಿ ನೆನೆದು ಈ ನಿನ್ನ ಮಗನನ್ನು ನಿನ್ನ ಉಡಿಯಲ್ಲಿ ಹಾಕಿದ್ದೇವೆ ಬದುಕಿಸುವುದು ಬಿಡುವುದು ನಿನಗೆ ಬಿಟ್ಟಿದು ಎಂದು ಕರೆ ತಂದರು ಆ ಭಕ್ತ ಇಂದು ಕೃಷಿ ಚಟುವಟಿಕೆ ಮಾಡಿಕೊಂಡು ಆರೋಗ್ಯವಾಗಿದ್ದಾನೇ, ಮಕ್ಕಳಾಗದ ಹತ್ತಾರು ತಾಯಂದಿರು ದೇವಿ ಸನ್ನಿದಿಗೆ ಬಂದು ಆ ಎರಡು ಮರಗಳಿಗೆ ಭಕ್ತಿಯಿಂದ ಬೇಡಿ ಅರಿಶಿನ ಕೊಂಬು ಕಟ್ಟಿ ಹೋಗಿ ಒಂದು ವರ್ಷದೊಳಗೆ ತಮ್ಮ ಮಕ್ಕಳೊಂದಿಗೆ ಬಂದು ದೇವಿಯ ಹರಕೆ ತೀರಿಸುತ್ತಾದ್ದರೆ. ದೇವಿ ಆರಾಧಕ ಭೀಮಪ್ಪನಿಗೆ ನಾಗರ ಹಾವು ಕಡಿದರೂ ಯಾವುದೇ ಔಷಧಿ ತೆಗೆದುಕೊಳ್ಳದೆ ಬದುಕಿ ಉಳಿದ ಇನ್ನು ಅನೇಕ ಪವಾಡ ಸೃಷ್ಟಿಸಿ ತೋರಿದ್ದಾಳೆ ತಾಯಿ.
ಇಂದಿನ ದೇವಿ ಆರಾಧನಾ ಗೋಷ್ಠಿಯಲ್ಲಿ ಭಾಗವಹಿಸಿದ ಮುಖಂಡರಾದ ಪರಪ್ಪ ಬ್ಯಾಕೊಡ, ಭಿಮ್ಮಪ್ಪ ಸಸಾಲಟ್ಟಿ, ದುಂಡಪ್ಪ ಜಾದವ, ವಿಠ್ಠಲ ಕಲ್ಲಟ್ಟಿ, ಮಾರುತಿ ಕರೋಶಿ, ಭೀಮಶಿ ಬ್ಯಾಕೊಡ, ಮಾರುತಿ ತೇಜಪ್ಪಗೊಳ,ಭಿಮ್ಮಪ್ಪಾ ಸಂಶಿ, ಚೆನ್ನು ದೇಸಾಯಿ, ಮಹಾದೇವ ಕಲ್ಲಟ್ಟಿ, ಮಲ್ಲು ಬಾಡಗಿ, ವಿಠ್ಠಲ ಢವಳೇಶ್ವರ,ಮಹಾಲಿಂಗ ಬ್ಯಾಕೊಡ, ಸೀಮಂತ್ ಕಲ್ಲಟ್ಟಿ, ವಸಂತ ಜಗದಾಳ, ಮಂಜು ಸಸಾಲಟ್ಟಿ, ಕೆಂಚಪ್ಪ ಕಲಟ್ಟಿ, ಶಿವಾನಂದ ಬ್ಯಾಕೊಡ, ವಿಠ್ಠಲ ಬನಾಜ, ಸಿದ್ದು ಸತ್ತಿಗೆರಿ, ಮಲ್ಲಿಕಾಜರ್ುನ ಕಾನಟ್ಟಿ, ಶ್ರೀಶೈಲ ಕಲ್ಲಟ್ಟಿ, ಶಿವಾನಂದ ಕಲ್ಲಟ್ಟಿ, ಮಹೇಶ ಬಾಗಲಿ, ರುದ್ರಪ್ಪ ಚಿನಗುಂಡಿ,ಅಲ್ಲಪ್ಪ ದಡ್ಡಿಮನಿ ಶಿವಲಿಂಗಪ್ಪ ಕಾರಜೋಳ, ಬಸಪ್ಪ ಜಾಲಿಕಟ್ಟಿ, ಸಿದ್ದಿಗಿರಪ್ಪ ಉಳ್ಳಾಗಡ್ಡಿ, ಶೇಖರ ತೇಜೆಪ್ಪಗೊಳ, ಎಂ ಬಿ ಪೂಜಾರಿ , ಪಾಪು ಓಸ್ವಾಲ, ಜ್ಯೋತೆಪ್ಪ ಕಪ್ಪರಟ್ಟಿ, ರವಿ ಹಣಗಂಡಿ, ಧರೇಪ್ಪ ಬ್ಯಾಕೊಡ, ಮಹಾಲಿಂಗ ಶಿರೋಳ,ಹನಮಂತ ಮೋಪಗಾರ, ರಮೇಶ ದೊಡಮನಿ, ಪ್ರಕಾಶ ಚನ್ನಾಳ, ಸಂಗಪ್ಪ ಪೂಜಾರಿ, ಭೀಮಪ್ಪ ತೇಜಪ್ಪಗೊಳ ಸೇರಿ ಹಲವಾರು ಗುರುಹಿರಿಯರು ಉಪಸ್ಥಿತರಿದ್ದರು