ಮಹಲಿಂಗಪುರ

ವಿಠ್ಠಲ ಮ್ಯಾಗಾಡಿ ಜೋಡೆತ್ತಿಗೆ ಮಹಾಲಿಂಗಪುರ ತೆರಬಂಡಿಯ ಕ್ವಿಡ್ ಕಾರು

ವಿಠ್ಠಲ ಮ್ಯಾಗಾಡಿ ಜೋಡೆತ್ತಿಗೆ ಮಹಾಲಿಂಗಪುರ ತೆರಬಂಡಿಯ ಕ್ವಿಡ್ ಕಾರು

ಮಹಾಲಿಂಗಪುರ : ನನ್ನ ಜೀವನದಲ್ಲಿಯೇ ಇಷ್ಟು ಅದ್ಧೂರಿ ತೆರಬಂಡಿ ವೈಭವವನ್ನು ನೋಡಿಲ್ಲ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಬಸವೇಶ್ವರ ಜಾತ್ರಾ ಕಮಿಟಿ ವತಿಯಿಂದ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಅಂತರಾಜ್ಯ ಮಟ್ಟದ  ತೆರಬಂಡಿ ವೈಭವದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮಾಜಿ ಸಚಿವ ಎಸ್. ಆರ್. ಪಾಟೀಲ ಮಾತನಾಡಿ , ತೆರಬಂಡಿ ಕಾರ್ಯಕ್ರಮಕ್ಕೆ 10 ಲಕ್ಷ ರೂ. ದಾನ ಮಾಡಿದ ಡಾ.ಎ.ಆರ್.ಬೆಳಗಲಿ ಇವರ ಕಾರ್ಯ ಅವಿಸ್ಮರಣೀಯ ಎಂದರು.

ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ಸತೀಶ ಬಂಡಿವಡ್ಡರ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಭಕ್ಷಿಸಾಬ ಯಾದವಾಡ, ಅಂಬಾದಾಸ ಕಾಮೂರ್ತಿ ಮಾತನಾಡಿದರು. 

ಸ್ಪರ್ಧೆಯಲ್ಲಿ 131 ಜೋಡಿ ಎತ್ತುಗಳು ಭಾಗವಹಿಸಿದ್ದು, ಮೂರು ದಿನಗಳ ನಡೆದ ಪಂದ್ಯಕ್ಕೆ ಶನಿವಾರ ತೆರೆ ಬಿದ್ದಿತು.ಮೊದಲ ಬಹುಮಾನ ಕ್ವಿಡ್ ಕಾರು ಸಮೀಪದ ನಂದಗಾವ ಗ್ರಾಮದ ವಿಠ್ಠಲ ಮ್ಯಾಗಾಡಿ, ದ್ವಿತೀಯ ಬಹುಮಾನ ರಾಯಲ್ ಎನ್ ಫೀಲ್ಡ್ ಬೈಕ್ ಅಕ್ಕಿಮರಡಿ ಗ್ರಾಮದ ಮಲ್ಲಪ್ಪ ಬೋರಡ್ಡಿ, 3 ನೇ ಬಹುಮಾನ ಪಲ್ಸರ್ ಬೈಕ್ ಭೀಮಸೇನ ಐನಾಪುರ ಪಡೆದರು. 

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಎ. ಆರ್. ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಡಾ. ಅಜಿತ್ ಕನಕರಡ್ಡಿ, ಡಾ. ವಿನೋದ ಮೇತ್ರಿ,ಪ್ರಸಾದ ಗುಂಡಾ,ಮಲ್ಲಣ್ಣ ಯಾದವಾಡ, ನಜೀರ್ ಕಂಗನೂಳಿ, ಹನಮಂತ ಬಡಿಗೇರ, ಪಿಂಟು ಓಸ್ವಾಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಮಹಾಲಿಂಗಪ್ಪ ಕೋಳಿಗುಡ್ಡ, ಸಿದ್ದು ಕೊಣ್ಣೂರ, ಸುರೇಶ ಪಾಟೀಲ,ಮಹಾಂತೇಶ ಮಾಚಕನೂರ,ಮಲ್ಲಪ್ಪ ಯರಡ್ಡಿ, ಎಸ್. ಎಂ. ಉಳ್ಳಾಗಡ್ಡಿ,ನಿಂಗಪ್ಪ ಬಾಳಿಕಾಯಿ, ಮುಸ್ತಾಕ್ ಚಿಕ್ಕೋಡಿ ಇದ್ದರು, ಪತ್ರಕರ್ತ ನಾರನಗೌಡ ಉತ್ತಂಗಿ, ಶೈಲಜಾ ಕೊಕ್ಕರೆ ನಿರೂಪಿಸಿದರು.

ಸುದ್ದಿ ಓದಿ