ಜ. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಸಹೋದರಿ ಲಿಂಗೈಕ್ಯ
ಮಹಾಲಿಂಗಪುರ 12: ಪಟ್ಟಣದ ಆರಾಧ್ಯ ದೈವ ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಗಳ ಸಹೋದರಿ ಅನಸುಯ್ಯಾ (ಬೋರವ್ವ) ವಿ.ಮಠ (80) ಶುಕ್ರವಾರ ಲಿಂಗೈಕ್ಯರಾದರು.
ಮೃತರು ಸುಮಾರು 25 ವರ್ಷಗಳಿಂದ ದೇವಸ್ಥಾನದ ಶ್ರೀಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಊಟೋಪಚಾರದ ಸಿದ್ಧತೆ ಮಾಡಿಕೊಡುವುದು ಅವರ ಮೊದಲ ಆದ್ಯತೆಯಾಗಿತ್ತಲ್ಲದೆ ಶ್ರೀಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡುತ್ತಿದ್ದರು.
ಇವರು 24 ಗಂಟೆಗಳ ಕಾಲ ದೇವಸ್ಥಾನದಲ್ಲಿಯೆ ವಾಸ್ತವ್ಯವಿದ್ದು ಗುರು ಮಹಾಲಿಂಗೇಶ್ವರರ ಸೇವೆಯಲ್ಲಿಯೂ ನಿರತರಾಗಿದ್ದರು. ಹೀಗಾಗಿ ಸ್ವಾಮಿಜಿಯವರ ಅಚ್ಚು ಮೆಚ್ಚಿನ ಸಹೋದರಿ ಅನ್ನುವುದಕ್ಕಿಂತ ಸೇವಕಿಯಾಗಿ ಮಹಾಲಿಂಗೇಶ್ವರರ ಶ್ರೇಷ್ಠ ಭಕ್ತೆಯೂ ಆಗಿದ್ದರು.
ಶ್ರೀಗಳು ಪೂರ್ವಾಶ್ರಮದಲ್ಲಿ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಹೊಂದಿರುವರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಸಂಸದ ಪಿ ಸಿ ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಯುಕ್ತಾ ಪಾಟೀಲ್, ಬಸನಗೌಡ ಪಾಟೀಲ್, ಯಲ್ಲನ್ನಗೌಡ ಪಾಟೀಲ್, ಸಿದ್ದು ಕೊಣ್ಣೂರ, ಸಜನಸಾಬ ಪೆಂಡಾರಿ, ಪಂಡಿತ ಪೂಜಾರ ಇನ್ನೂ ಮುಂತಾದವರು ಸಂತಾಪ ಸೂಚಿಸಿದ್ದಾರೆ.