ಮಹಾಲಿಂಗಪುರ ನನ್ನ ಕರ್ಮ ಭೂಮಿ : ಶಿವಕುಮಾರ್ ಸ್ವಾಮೀಜಿ
ಮಹಾಲಿಂಗಪುರ 03: ದೇಶದಲ್ಲಿ ಅನೇಕ ಸಾಧು ಸಂತರು, ಸತ್ಪುರುಷರ, ಸಿದ್ದಪುರುಷರ, ತತ್ವಜ್ಞಾನಿಗಳು, ಅಧ್ಯಾತ್ಮ ಜೀವಿಗಳು ನೆಲೆಸಿರುವ ತಪೋ ಭೂಮಿ ಈ ಭರತ ಖಂಡ ನಾವು ಈ ದೇಶದಲ್ಲಿರುವುದೇ ನಮ್ಮ ಭಾಗ್ಯ. ಅದರಲ್ಲೂ ಮಹಾಲಿಂಗಪುರದ ಮಹಾಭಕ್ತರೊಂದಿಗೆ ನಾನು ಕಳೆದ 50 ವರ್ಷಗಳಿಂದ ಒಡನಾಟವನ್ನು ಹೊಂದಿದ್ದು ಇಂತಹ ಭಕ್ತರು ಸಿಕ್ಕಿರುವುದೇ ನನ್ನ ಪುಣ್ಯ. ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಆಯುಷ್ಯವನ್ನು ಈ ನಗರದೊಂದಿಗೆ ಕಳೆದಿದ್ದೇನೆ. ಇದು ನನ್ನ ಕರ್ಮ ಭೂಮಿಯಾಗಿದೆ ಎಂದು ಬಿದರಿನ ಸಿದ್ದಾರೂಢ ಮಠದ ಚಿದಂಬರಾಶ್ರಮದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ನಗರದ ಬಸವಾನಂದ ಶಾಲೆಯಲ್ಲಿ ನಿರ್ಮಿಸಿದ ಸದ್ಗುರು ಸದನವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಮಹಾಲಿಂಗಪುರದ ಜನರ ಋಣ ನನ್ನ ಮೇಲೆ ಬಹಳಷ್ಟು ಇದೆ. ನಾನು 50 ವರ್ಷಗಳಿಂದ ಬಸವಾನಂದರ ಪುಣ್ಯರಾಧನೆಗೆ ಪ್ರವಚನ ಹೇಳಲು ಬರುತ್ತಿದ್ದೇನೆ. ನಾನು ನಿಮ್ಮನ್ನು ನೋಡುವ ಕಾತುರ ನನಗೆ ನಿಮಗೆ ಗುರುವಿನ ವಾಣಿ ಕೇಳುವ ಬಯಕೆ ನಮ್ಮಿಬ್ಬರನ್ನು ಪದೇ ಪದೇ ಒಂದುಗೂಡಿಸುತ್ತದೆ. ಇದೇ ಗುರು ಶಿಷ್ಯರಲ್ಲಿ ಇರುವ ಭಾವನಾತ್ಮಕ ಸಂಬಂಧ. ಈ ಸದ್ಗುರು ಸದನವನ್ನು ಕಟ್ಟಿಸಿ ನನ್ನನ್ನು ಭಾವನಾತ್ಮಕವಾಗಿ ನಿಮ್ಮೊಂದಿಗೆ ಬೆಸೆದುಕೊಂಡು ಬಿಟ್ಟಿರಿ ಎಂದರು.
ಚಳಕಾಪುರದ ಶಂಕರಗೌಡ ಸ್ವಾಮೀಜಿ ಅವರು ಸದ್ಗುರುಗಳು ಸೇವೆ ಮಾಡಿ ಪುಣ್ಯ ಪ್ರಾಪ್ತಿಯಾಗುತ್ತದೆ. ಸದ್ಗುರು ಸಿದ್ದಾರೂಢರು, ಅಖಂಡ ಭಾರತವನ್ನು ಬರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿ ಅರೂಢ ಸಂಪ್ರದಾಯವನ್ನು ದೇಶದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ್ರದೇಶ, ಗುಜರಾತ, ಗೋವಾ, ತೆಲಂಗಾಣ ಮಧ್ಯಪ್ರದೇಶಗಳಲ್ಲಿ ಸಿದ್ದಾರೂಢ ಸ್ವಾಮಿಗಳ ಮಠ ಸ್ಥಾಪಿಸಿ ಅರೂಢ ಪರಂಪರೆಯ ಪ್ರಚಾರ ಪ್ರಸಾರ ಜೊತೆಗೆ ಅನೇಕ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದರು ಎಂದು ಹೇಳಿದರು.
ಸ್ಥಳಿಯ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಸಹಜಾನಂದ ಸ್ವಾಮಿಗಳು ಮಾತನಾಡಿ ಅಂದು ನರನ ರೂಪದಲ್ಲಿ ಹರನ ಆಗಮನವಾಗಿ ಜಗತ್ತನ್ನು ಉದ್ಧರಿಸಿದ ಸಿದ್ದಾರೂಢರು ಇಂದು ಸಿದ್ದಾರೂಢರ ಅಪರಾವತಾರ ಆಗಿರುವ ಶಿವಕುಮಾರ ಸ್ವಾಮೀಜಿ ನಮ್ಮೊಂದಿಗೆ ಇದ್ದಾರೆ. ನಾವು ಪುಣ್ಯವಂತರು, ಮುಂಬರುವ ಬಸವಾನಂದರ 50ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನದಿಂದ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಬೆಳಗಲಿಯ ಯೋಗಿರಾಜ ಸದಾಶಿವ ಗುರುಗಳು ಹುಬ್ಬಳ್ಳಿಯ ಹಿರಿಯ ನಾಯವಾದಿಗಳಾದ ಶಾಮಾನಂದ ಪೂಜಾರಿ, ಹೊಸೂರಿನ ಪರಮಾನಂದ ಸ್ವಾಮೀಜಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ಕೋರಿದರು. ನಗರದ ಎಲ್ಲ ಸಮುದಾಯಗಳ ಗುರುಹಿರಿಯರು ಸ್ವಾಮೀಜಿಗಳನ್ನು ಸನ್ಮಾನಿಸಿ ಗೌರವಿಸಿದರು.
ಚಂದ್ರು ಗೊಂದಿ, ಕಲ್ಲಪ್ಪ ಚಿಂಚಲಿ, ಮಲ್ಲಪ್ಪಾ ಭಾವಿಕಟ್ಟಿ, ಮಹಾಲಿಂಗಪ್ಪ ಲಾತುರ್, ಶಿವನಗೌಡ ಪಾಟೀಲ, ಬಸವರಾಜ ಧಪಾಳಾಪುರ, ಸಿ ಎಂ ಕಟಗಿ, ಎಸ್ ಎಂ ಕಟಗಿ ಶಾಮಾನಂದ ಪೂಜಾರಿ, ಮಹಾಲಿಂಗಪ್ಪ ಅವರಾಧಿ ಮಹಾಲಿಂಗ ಕರೆಹೊನ್ನ, ಈರಣ್ಣ ಹಲಗತ್ತಿ,ಮಹಾಲಿಂಗ ಅನಂತಪುರ, ಮಹಾದೇವ ಬರಗಿ, ಪ್ರಭು ಬೆಳಗಲಿ, ಜಮೀರ ಎಕ್ಸಠ,ಸಜ್ಜನಸಾಬ ಪೆಂಡಾರಿ, ಸಲೀಮ್ ಕರೋಶಿ ಲಕ್ಕಪ್ಪ ಚಮಕೇರಿ, ಮೆಹಬೂಬ್ ಜೀರಗಾಳ ಪಾಪಾ ನಾಲಬಾಂದ ನಜೀರ್ ಅತ್ತಾರ, ನಜೀರ್ ಜಾರೆ ಹಾಜಿ ರಾಜೇಸಾಬ ಐನಾಪುರ, ಸಯದ ಯಾದವಾಡ,ಕಲ್ಲಪ್ಪ ಚಿಂಚಲಿ ರಾಜೇಸಾಬ್ ಐನಾಪುರ, ನಿಯಾಜ್ ಪಟೇಲ, ಭೀಮನಗೌಡ ಪಾಟೀಲ, ಡಾ ಬಿ ಡಿ ಸೊರಾಗಾಂವಿ,ಅಲ್ಲಪ್ಪಾ ಗುಂಜಿಗಾಂವಿ , ಎಸ್ ಕೆ ಗಿಂಡೆ, ಲಕ್ಷ್ಮಣ್ ಮುಗಳಖೊಡ, ಮೆಹೆಬೂಬ್ ಸನದಿ, ಹೊಳೆಪ್ಪಾ ಬಾಡಗಿ, ಮಲಿಕ್ ಸಿಂದಗಿ, ಗೋಲೇಶ ಅಮ್ಮಣಗಿ,ಸಿದ್ದಾರೂಢ ಮುಗಳಖೊಡ, ಚಿದಾನಂದ ಫಡತಾರೆ, ಎಲ್ಲ ಸಮಾಜಗಳ ಗುರುಹಿರಿಯರು ಶಾಲಾ ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹುಮಾಯಿನ ಸುತಾರ ನಿರೂಪಿಸಿ ವಂದಿಸಿದರು.