ಮಹಾಲಿಂಗಪುರ ಧಾರ್ಮಿಕ ಮತ್ತು ಆಧ್ಯಾತ್ಮದ ತವರೂರು: ಸಿದ್ದು ಸವದಿ
ಮಹಾಲಿಂಗಪುರ 02: ಮಹಾಲಿಂಗಪುರ ಧಾರ್ಮಿಕ ಮತ್ತು ಆಧ್ಯಾತ್ಮದ ತವರೂರು, ಕಲ್ಪಡ ಗಲ್ಲಿಯ ಸಾರಿ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಪತ್ತಾರ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಕಲ್ಪಡ ಗಲ್ಲಿಯಲ್ಲಿ ಭಾನುವಾರ ಬೆಳಿಗ್ಗೆ ಸಾರಿ ದುರ್ಗಾದೇವಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದರು.
ಶುಕ್ರವಾರ ಸೈದಾಪುರ ಶಾಂತಾ ದುರ್ಗಾದೇವಿ ಅರ್ಚಕರ ನೇತೃತ್ವದಲ್ಲಿ ರನ್ನಬೆಳಗಲಿ ಅಗಸಿಯಿಂದ ಭವ್ಯ ಮೆರವಣಿಗೆಯಲ್ಲಿ ದುರ್ಗಾ ಮಾತೆ ಮೂರ್ತಿಯನ್ನು ತಂದು ಭಾನುವಾರ ಬೆಳಗಿನವರೆಗೆ ಪಂಛ ಧಾನ್ಯ, ಪಂಚ ಪುಷ್ಪ, ಪಂಚ ತೀರ್ಥಗಳಿಂದ ಪ್ರತಿ ಆರು ಗಂಟೆಗೊಮ್ಮೆ ವಿಶೇಷ ಪೂಜೆ ನೆರವೇರಿಸಿ ನಂತರ ಪ್ರಾಣ ಪ್ರತಿಷ್ಠಾಪನೆ, ಹೋಮ ಹವನ, ಮಂಗಳಾರತಿ, ಮಹಾಪ್ರಸಾದ ಮುಂತಾದ ಧಾರ್ಮಿಕ ಕಾರ್ಯಗಳು ನೆರವೇರಿದವು. ರಾಜ್ಯ ಬೈಲ ಪತ್ತಾರ ಸಂಘದ ಉಪಾಧ್ಯಕ್ಷ ಶಿವಾಜಿ ಅಂಕೋಶಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ರಾಜೇಂದ್ರ ಪಂಚಮಹಲ, ಗೌರವಾಧ್ಯಕ್ಷ ಸುಭಾಸ್ ದೇವರಹಿಪ್ಪರಗಿ, ದುರ್ಗಾದೇವಿ ಮೂರ್ತಿದಾನಿ ಹನುಮಸಾಗರದ ಭೋಜರಾಜ ಅಂಕೋಶಿ, ಮುಖಂಡರಾದ ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ರಾಜು ಚಮಕೇರಿ, ಸುನಿಲಗೌಡ ಪಾಟೀಲ, ವಿಜುಗೌಡ ಪಾಟೀಲ, ಶಿವಾನಂದ ಅಂಗಡಿ, ಅಶೋಕ ಅಂಕೋಶಿ, ಶಿವಾಜಿ ಪತ್ತಾರ, ಖುಬರಾಜ ಅಂಕೋಶಿ, ರಾಜೇಶ ಪತ್ತಾರ, ವಿಶ್ವನಾಥ ಪತ್ತಾರ, ಚಂದ್ರಶೇಖರ ಅಂಕೋಶಿ, ಅನಿಲಕುಮಾರ ಮೋಕರಾಜಿ ಸೇರಿದಂತೆ ಅಪಾರ ಭಕ್ತವೃಂದ ಇತ್ತು.ಶಿಕ್ಷಕ ಆನಂದ ತಮದಡ್ಡಿ ನಿರೂಪಿಸಿದರು.