ಮಹಲಿಂಗಪುರ

ಮಹಾಲಿಂಗಪೂರ ಪೊಲೀಸರ ಕಾರ್ಯಾಚರಣೆ, ಅಂತರ ರಾಜ್ಯ ಕಳ್ಳನ ಬಂಧನ: ಬಂಗಾರ ವಾಹನ ವಶ.

ಮಹಾಲಿಂಗಪೂರ ಪೊಲೀಸರ ಕಾರ್ಯಾಚರಣೆ,  ಅಂತರ ರಾಜ್ಯ ಕಳ್ಳನ ಬಂಧನ: ಬಂಗಾರ ವಾಹನ ವಶ.

ಮಹಾಲಿಂಗಪುರ 27: ಮಹಾರಾಷ್ಟ್ರ ಮೂಲದ ಶೇರ್ ಅಲಿ (37) ಎಂಬ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ,ಕದ್ದ ಬಂಗಾರ ಮತ್ತು ಬೆಲೆಬಾಳುವ ಬೈಕ್ ವಶಪಡಿಸಿಕೊಂಡು ಜೈಲಿಗಟ್ಟುವಲ್ಲಿ ಸ್ಥಳೀಯ ಪಿ. ಎಸ್‌. ಐ ಪ್ರವೀಣ ಬೀಳಗಿ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದು, ಪ್ರಶಂಸೆ ಮತ್ತು ಬಹುಮಾನಕ್ಕೆ ಭಾಜನರಾಗಿದ್ದಾರೆ. ಇದೇ ಆರೋಪಿ ಆ. 8 ರಂದು ಮಹಾಲಿಂಗಪ್ಪ ಮಹಾದೇವಪ್ಪ ಲೋಹಾರ ಅವರ ಸ್ಥಳೀಯ ಬಂಗಾರದ ಅಂಗಡಿಗೆ ಬಂದು ಲಕ್ಷ್ಯವನ್ನು ಬೇರೆಡೆ ಸೆಳೆದು 84 ಸಾವಿರ ರೂ. ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋದ ಬಗ್ಗೆ ಫಿರ್ಯಾದಿ ದಾಖಲಾಗಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿತ್ತು.ಪುನಃ ದುಷ್ಕೃತ್ಯ ಎಸಗಲು ಸಜ್ಜಾಗಿದ್ದ ಆರೋಪಿಯನ್ನು ಆ.23 ರ ಬುಧವಾರ ಜಮಖಂಡಿ ಡಿವೈಎಸ್ಪಿ ಶಾಂತವೀರ ಈ, ಬನಹಟ್ಟಿ ಸಿಪಿಐ ಸಂಜು ಬಳಗಾರ, ಮಾರ್ಗದರ್ಶನದಲ್ಲಿ ಪಿಎಸ್‌ಐ   ಪ್ರವೀಣ ಬೀಳಗಿ ಮತ್ತು ಎಎಸ್‌ಐ  ಎಲ್‌.ಬಿ.ದುದ್ದನಗಿ, ಸಿಂಬ್ಬದಿ ,ಭೀಮಶಿ.ಪಿ.ಹಡಪದ, ಇಮ್ರಾನ್ ಆರ್‌.ಫಣಿಬಂಧ, ಬಿ.ಜಿ.ದೇಸಾಯಿ, ಎಮ್‌.ಎಸ್‌.ಕನಶೆಟ್ಟಿ, ಎಸ್ ಡಿ ಬಾರಿಗಿಡದ, ಜಗದೇಶ ಪಾಟೀಲ್, ಮಲ್ಲು ಪವಾರ,ಸಾಗರ ಲಾವಟೆ,(ಸಾಂಗ್ಲಿ) ಶ್ರೀಶೈಲ ಕಲತಗಿ,(ನಿಪ್ಪಾಣಿ)ತಂಡ ಸ್ಥಳೀಯ ಮಾರುಕಟ್ಟೆ ಸರ್ಕಲ್ ಹತ್ತಿರ ದಸ್ತಗಿರಿ ಮಾಡಿ 84 ಸಾವಿರ ಬೆಲೆಯ ಬಂಗಾರದ ಆಭರಣಗಳು ಹಾಗೂ 60 ಸಾವಿರ ರೂ. ಕಿಮ್ಮತ್ತಿನ ಟಿವಿಎಸ್ ಅಪಾಚಿ ಮೋಟಾರ್ ಸೈಕಲ್ ವಶಪಡೆಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಗಲಕೋಟ ಜಿಲ್ಲಾ ಪೊಲೀಸ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದೆ.  


ಸುದ್ದಿ ಓದಿ