ಮಹಲಿಂಗಪುರ

ಮಹಾಲಿಂಗಪುರವು ತಾಲೂಕಾಗಲು ಸೂಕ್ತವಾಗಿದೆ: ಶಾಸಕ ನಿರಾಣಿ

ಮಹಾಲಿಂಗಪುರವು ತಾಲೂಕಾಗಲು ಸೂಕ್ತವಾಗಿದೆ: ಶಾಸಕ ನಿರಾಣಿ

ಮಹಾಲಿಂಗಪುರ26 : ಅಕ್ಕಪಕ್ಕದ ರಾಜ್ಯಗಳಿಗೂ ಬೆಲ್ಲವನ್ನು ಸರಬರಾಜು ಮಾಡಿ ರಾಷ್ಟ್ರಮಟ್ಟದ ಖ್ಯಾತಿ ಪಡೆದು ಸರಕಾರಕ್ಕೆ ಉತ್ತಮ ಕೆರೆ ತುಂಬುವ ಮತ್ತು ಸಕಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಮಹಾಲಿಂಗಪುರವು ತಾಲೂಕಾಗಲು ಸೂಕ್ತವಾಗಿದೆ ಎಂದು ಪದವಿಧರ ಕ್ಷೇತ್ರದ ಶಾಸಕ ಹಣ್ಮಂತ ನಿರಾಣಿ ಅಭಿಪ್ರಾಯಪಟ್ಟರು. 

ಸೋಮವಾರ ಸ್ಥಳೀಯ ವೀರರಾಣಿ ಚೆನ್ನಮ್ಮ ವೃತ್ತದ ಪಕ್ಕದಲ್ಲಿ ನಿರ್ಮಿಸಿರುವ ಪಟ್ಟಣ ತಾಲೂಕು ಹೋರಾಟ ವೇದಿಕೆಗೆ ಆಗಮಿಸಿ ಹೋರಾಟ ಸಮಿತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಉತ್ತಮ ಭೌಗೋಳಿಕ ಹಿನ್ನೆಲೆಯೊಂದಿಗೆ ಸಂಪೂರ್ಣ ನೀರಾವರಿ ಹೊಂದಿದ್ದಲ್ಲದೆ ವ್ಯಾಪಾರ ವಹಿವಾಟಿಗೂ ಪ್ರಶಸ್ತ ಕೇಂದ್ರ ಸ್ಥಳವಾಗಿ ಸುತ್ತಮುತ್ತಲಿನ ಹಳ್ಳಿಯ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ನಾನು ಈ ಭಾಗದ ಶಾಸಕ ಸಿದ್ದು ಸವದಿ ಹಾಗೂ ಸಂಸದ ಪಿ.ಸಿ ಗದ್ದಿಗೌಡರರಿಗೆ ಮಹಾಲಿಂಗಪುರ ತಾಲೂಕಿನ ಸಲುವಾಗಿ ಮತ್ತಷ್ಟು ಒತ್ತಡ ಹಾಕಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಾಲೂಕು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಮಾತನಾಡಿದರು.  

ಮತ್ತೋರ್ವ ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ ಯಾವತ್ತೋ ತಾಲೂಕಾಗಬೇಕಾದ ಮಹಾಲಿಂಗಪುರ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದಿ ಇವತ್ತು ಹೋರಾಟ ಮಾಡಿ ಪಡೆಯಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ. ವಿಶೇಷವಾಗಿ ಮಹಾಲಿಂಗಪುರ ತಾಲೂಕಿಗೆ ನಾವು ತನು-ಮನ ಧನದಿಂದ ಸಹಕರಿಸಲು ಸದಾ ಸಿದ್ದರಿದ್ದು ನಿಮ್ಮ ನಿರಂತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. 

12ನೇ ದಿವಸದ ಸರದಿ ಪ್ರತಿಭಟನೆಗೆ ಸಮೀಪದ ಕೆಸರಗೊಪ್ಪ ಗ್ರಾಮದ ಸಾರ್ವಜನಿಕರು ವಿಶಿಷ್ಟವಾಗಿ ಚಾಲನೆ ನೀಡಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲದಿಂದ ಸುಮಾರು 60ಕ್ಕೂ ಹೆಚ್ಚು, ತಳಿರು ತೋರಣಗಳಿಂದ ಶೃಂಗರಿಸಿದ, ಎತ್ತಿನ ಚಕ್ಕಡಿ ಬಂಡಿಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಿಂದ ಹೋರಾಟದ ವೇದಿಕೆಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. 

ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ ಹಾಗೂ ಅರುಣ ಶಹಾಪುರ ಅವರಿಗೆ ಸ್ಥಳೀಯ ಜಯರಾಮ ಶೆಟ್ಟಿ, ಸಂಗಪ್ಪ ಹಲ್ಲಿ, ಶೇಖರ ಅಂಗಡಿ, ರಾಜು ಚಮಕೇರಿ, ಅಶೋಕ ಅಂಗಡಿ, ಸಿದ್ದು ಶಿರೋಳ, ಹಣ್ಮಂತ ಜಮಾದಾರ ರಫೀಕ್ ಮಾಲದಾರ, ಶಂಕರಗೌಡ ಪಾಟೀಲ ಇನ್ನೀತರರು ಮನವಿ ನೀಡಿದರು.  

ಈ ಪ್ರತಿಭಟನೆಯಲ್ಲಿ ವಿಠ್ಠಲ ಢವಳೇಶ್ವರ, ಜಿಡ್ಡಿಮನಿ ಬಸವರಾಜ, ಬಸು, ಬ್ಯಾಕೋಡ ಭೀಮಪ್ಪ, ಗೀರೀಶ್, ಪರ​‍್ಪ, ಧರೆಪ್ಪ, ಸತ್ತಿಗೇರಿ ಪರ​‍್ಪ, ಶ್ರೀಶೈಲ, ಜ್ಯೋತೆಪ್ಪ ಕಪರಟ್ಟಿ, ಶಂಕರ ಮಡಿವಾಳರ, ದುಂಡಪ್ಪ ಜಾಧವ, ಮಲ್ಲಪ್ಪ ಬಾಡಗಿ, ಮಹೇಶ ತೇಲಿ, ಸಿದ್ದಪ್ಪ ಮಂಟೂರ, ಕರ್ಲಟ್ಟಿ ವಿಠ್ಠಲ, ಬಾಳಪ್ಪ, ಜಾಲಿಕಟ್ಟಿ ಬಸಪ್ಪ, ಚಿದಾನಂದ, ಲಕ್ಷ್ಮಣ, ತೇಜಪ್ಪಗೋಳ ಮಾರುತಿ, ಶೇಖರ, ಮಹಾದೇವ, ಶ್ರೀಶೈಲ ಪೂಜಾರಿ, ಶಿವಪುತ್ರ ದಡ್ಡಿಮನಿ, ಮಾರುತಿ ಕರೋಶಿ, ಶ್ರೀಶೈಲ ಬಡಿಗೇರ, ಚನ್ನು ದೇಸಾಯಿ, ಸಿದಗಿರೆಪ್ಪ ಉಳ್ಳಾಗಡ್ಡಿ, ಬಸಪ್ಪ ಜಿಡ್ಡಿಮನಿ, ಸಸಾಲಟ್ಟಿ ಮಲ್ಲಪ್ಪ, ಮಹಾದೇವ, ಮಹಾಲಿಂಗಪ್ಪ, ಭೀಮಪ್ಪ, ವಿಠ್ಠಲ, ಲಕ್ಷ್ಮಣ, ಅಲ್ಲಪ್ಪ ದೊಡಮನಿ, ವಿಠ್ಠಲ ಬನಾಜ, ಚಿನಗುಂಡಿ, ರುದ್ರ​‍್ಪ, ಶ್ರೀಶೈಲ, ಧರೆಪ್ಪ ಸತ್ತಿಗೇರಿ, ಅಲ್ಲಪ್ಪ ಶಿರೋಳ, ಸೀಮಂತ ಕಾರಜೋಳ, ಇತರರು ಇದ್ದರು. 


ಸುದ್ದಿ ಓದಿ