ಮುಧೋಳ

ಮಹಾಲಿಂಗಪೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಮಹಾಲಿಂಗಪೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಮುಧೋಳ 25: ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿ ನಾಗರಾಳದಲ್ಲಿ ನಡೆದವು ಇದರಲ್ಲಿ ಢವಳೇಶ್ವರದ ಢವಳನಾಥ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಲವು ವಿಭಾಗದಲ್ಲಿ ಸಾಧನೆ ಮಾಡಿ ತಾಲ್ಲೂಕಿಗೆ ಆಯ್ಕೆಯಾಗಿದ್ದಾರೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಆಕಾಶ ಮಾರುತಿ ಕುರಿ ಇಂಗ್ಲೀಷ ಕಂಠಪಾಠ ಪ್ರಥಮ, ಅಂಕಿತಾ ಚಂದ್ರಶೇಖರ ದಾದನಟ್ಟಿ ಧಾರ್ಮಿಕ ಪಠಣ-ಸಂಸ್ಕೃತ ಪ್ರಥಮ, ಶಶಾಂಕ ಪ್ರಕಾಶ ಸಂಗನ್ನವರ ಲಘುಸಂಗೀತ ಪ್ರಥಮ, ಪ್ರಿಯಾಂಕ ರಾಮಪ್ಪ ಮನ್ನಾಪೂರ ಆಶುಬಾಷಣ ಪ್ರಥಮ,ಜ್ಯೋತಿ ಪ್ರಹ್ಲಾದ. ಪಾಟೀಲ ಅಭಿನಯ ಗೀತೆ ದ್ವಿತೀಯ, ವಿನೋದ ಅಲ್ಲಪ್ಪ ಸಂಗನ್ನವರ ಭಕ್ತಿಗೀತೆ ದ್ವಿತೀಯ, ಸಭಾ ಇಕ್ಬಾಲ ಮೊಮಿನ ಧಾರ್ಮಿಕ ಪಠಣ ಅರೆಬಿಕ ತೃತೀಯ, ಹಿರಿಯ ಪ್ರಾಥಮಿಕ ವಿಭಾಗ ಸವಿತಾ ಪ್ರಕಾಶ ಪಾಶ್ಚಾಪೂರ ಅಭಿನಯ ಗೀತೆ ಪ್ರಥಮ, ಮತ್ತು ಧಾರ್ಮಿಕ ಪಠಣ-ಸಂಸ್ಕೃತ ದ್ವಿತೀಯ  ವಿನಾಯಕ ನಾಗಪ್ಪ ಲಕ್ಕನಗೋಳ ಲಘಸಂಗೀತ ದ್ವಿತೀಯ, ಶ್ರವಣಾ ಸಿದ್ದಪ್ಪ ಕೌಜಲಗಿ ಛದ್ಮವೇಷ ದ್ವಿತೀಯ ಮತ್ತು ಭಕ್ತಿಗೀತೆ ತೃತೀಯ, ಪೂಜಾ ಮಲ್ಲಪ್ಪ ಬಸಲಿಗುಂದಿ ಆಶುಬಾಷಣ ದ್ವಿತೀಯ, ಪ್ರೀತಮ ರಾಜಕುಮಾರ ಬಡಿಗೇರ ಚಿತ್ರಕಲೆ ದ್ವಿತೀಯ, ಮುಸ್ಕಾನ ಹಜರತ ಮುಲ್ಲಾ ಧಾರ್ಮಿಕ ಪಠಣ-ಅರೆಬಿಕ ತೃತೀಯ,ಸಂಗಮೇಶ ಚನ್ನಪ್ಪ ಕಮತಗಿ ಇಂಗ್ಲೀಷ ಕಂಠಪಾಠ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿತಂದಿರುವ ವಿಜೇತ ಎಲ್ಲ ವಿದ್ಯಾರ್ಥಿಗಳನ್ನು  ಶಾಲಾ ಮುಖ್ಯೋಪಾಧ್ಯಾಯರು .ಜಿ.ನೇಗಿನಹಾಳ, ದೈಹಿಕ ಶಿಕ್ಷಕ  ಸಿ.ವಿ.ದಾದನಟ್ಟಿ, ಶಿಕ್ಷಕರಾದ  ಅನೀಲ ಚೌರಡ್ಡಿ ,ದಾನೇಶ ಹುಚನಟ್ಟಿ, ಶಿಕ್ಷಕಿಯರಾದ  ಭಾಗ್ಯಶ್ರೀ ಕಲ್ಲಪ್ಪಗೌಡ್ರ,  ಲಕ್ಮೀಬಾಯಿ ಅರಕೇರಿ, ಹಾಗೂ ಶಿಕ್ಷಕಿಯರು,ಅಡುಗೆಯ ಸಿಬ್ಬಂದಿಯು ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ