ಮಹಾಲಿಂಗಪುರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶೇಖರ ಅಂಗಡಿ ಆಯ್ಕೆ
ಮಹಾಲಿಂಗಪುರ 29: ಮಹಾಲಿಂಗಪುರ ಅರ್ಬನ ಕೋ ಆಪ್ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಶೇಖರ ಅಂಗಡಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಗಿರಮಲ್ಲಪ್ಪ ಕಬಾಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ ಸಾರವಾಡ ಪತ್ರಿಕೆಗೆ ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಮಹಾಲಿಂಗಪುರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಇತೀಚಿಗೆ ನಡೆದ ಚುನಾವಣೆಯಲ್ಲಿ ಶೇಖರ ಅಂಗಡಿ ಫೇನಲ್ ಜಯಭೇರಿ ಬಾರಿಸಿತು. ಆದರೆ ಕಾರಣಾಂತರಗಳಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವಿಳಂಬಿವಾಗಿತ್ತು. ಇಂದು ಗುರುವಾರ ಮದ್ಯಾಹ್ನ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಮೊದಲ ಇಪ್ಪತ್ತು ತಿಂಗಳು ಅವಧಿಗೆ ಅಧ್ಯಕ್ಷರಾಗಿ ಶೇಖರ ಬಸಪ್ಪ ಅಂಗಡಿ ಉಪಾಧ್ಯಕ್ಷರಾಗಿ ಗಿರಮಲ್ಲಪ್ಪ ಕಬಾಡಿ ಅವಿರೋಧವಾಗಿ ಆಯ್ಕೆಯಾದರೆ, ಒಟ್ಟು 12 ಸದಸ್ಯರನ್ನು ಒಳಗೊಂಡ ಈ ಆಯ್ಕೆ ಪ್ರಕ್ರಿಯೇಯಲ್ಲಿ, ಮಹಾದೇವ ಮಾರಾಪುರ, ಫಕ್ರುದ್ದಿನ ಕುಂಟೋಜಿ, ಅಶೋಕ ಜ ಅಂಗಡಿ, ಶ್ರೀಶೈಲ ಹಿಪ್ಪರಗಿ, ಲಕ್ಷ್ಮೀ ಬಸವರಾಜ ದಿನ್ನಿಮನಿ ಮತ್ತು ಮಹಾಲಿಂಗಪ್ಪ ಕೋಳಿಗುಡ್ಡ, ಗುರುಪಾದ ಅಂಬಿ, ವಿರುಪಾಕ್ಷಯ್ಯ ಪಂಚಕಟ್ಟಿಮಠ, ಹೊಳೆಪ್ಪ ಬಾಡಗಿ, ಅಕ್ಷತಾ ಹಲಗತ್ತಿ ಇವರುಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಚಮಸಾಲಿ ಸಮಾಜದ ಹಿರಿಯರಾದ ದರೇಪ್ಪನ್ನ ಸಾಂಗ್ಲೀಕರ ಮಾತನಾಡಿ ಹಿಂದಿನ ದ್ವೇಷ ಅಸೂಯೆಗಳನ್ನು ಮರೆತು, ಬ್ಯಾಂಕಿನ ಅಭಿವೃದ್ಧಿಗಾಗಿ ಸರ್ವವರು ತಮ್ಮ ಶಕ್ತಿ ಮೀರಿ ಶ್ರಮಿಸಬೇಕು, ಬ್ಯಾಂಕಿನ ಸಿಬ್ಬಂದಿಗಳು ಸಹ ಸರ್ವ ಸದಸ್ಯರ ವಿಚಾರಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು, ಒಟ್ಟಿನಲ್ಲಿ ಎಲ್ಲರ ಶ್ರಮದಿಂದ ಈ ಬ್ಯಾಂಕು ಅಭಿವೃದ್ದಿ ಹೊಂದಿ ಪಟ್ಟಣದ ಎಲ್ಲ ಬ್ಯಾಂಕುಗಳಲ್ಲಿ ಇದು ಒಂದು ಎನ್ನುವ ಹೆಸರು ಬರುವ ಹಾಗೆ ನಿವೇಲ್ಲರು ಪ್ರಾಮಾಣಿಕತೆಯಿಂದ ಈ ಬ್ಯಾಂಕಿ ಅಭಿವೃದ್ದಿಗಾಗಿ ಕೆಲಸ ಮಾಡಬೇಕು ಎಂದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಶೇಖರ ಅಂಗಡಿ ನಾನು ಸರ್ವ ಸದಸ್ಯರನ್ನು ಗನನೆಗೆ ತೆಗೆದುಕೊಂಡು, ಅಷ್ಟೆ ಅಲ್ಲದೆ ಈ ಅಧ್ಯಕ್ಷ ಪಟ್ಟ ನೀಡುವಲ್ಲಿ ನನಗೆ ಸಹಕರಿಸಿದ ಎಲ್ಲ ಹಿರಿಯರ ಮಾರ್ಗದರ್ಶನದ ಮೇರೆಗೆ ಆಡಳಿತ ನಡೆಸುತ್ತೇನೆ. ಯಾವುದೆ ರೀತಿ ದುಂದು ವೆಚ್ಚವನ್ನು ಬ್ಯಾಂಕಿನಲ್ಲಿ ಮಾಡದೆ ಅತಿ ಕಡಿಮೆ ಅವದಿಯಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ನಾನು ಹಗಲಿರುಳು ದುಡಿಯಲು ಸಿದ್ದನಿದ್ದೇನೆ, ಅಲ್ಲದೆ ಇದು ಗ್ರಾಮದ ಎಲ್ಲರ ಅಚ್ಚು ಮೆಚ್ಚಿನ ಬ್ಯಾಂಕಾಗಿರುವುದರಿಂದ ನಿಮ್ಮೇಲ್ಲರ ಸಹಕಾರ ಅವಶ್ಯವಾಗಿ ಬೇಕು. ಇನ್ನು ಮುಂದೆ ಎಲ್ಲರೂ ಈ ಬ್ಯಾಂಕಿನೊಂದಿ ಉತ್ತಮ ರೀತಿಯಲ್ಲಿ ವ್ಯವಹರಿಸಲು ಮುಂದಾಗಿರಿ ಎಂದರು.
ಗಣ್ಯರಾದ ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ, ಮಹಾಲಿಂಗಪ್ಪ ತಟ್ಟಿಮನಿ, ಚಂದ್ರು ಗೊಂದಿ, ಅಶೋಕ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ರಾಯರ, ಸುನೀಲಗೌಡ ಪಾಟೀಲ, ಬಲವಂತಗೌಡ ಪಾಟೀಲ, ಮಲ್ಲಪ್ಪ ಕುಳ್ಳೋಳ್ಳಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸವರಾಜ ಘಟ್ನಟ್ಟಿ, ನಿಂಗಪ್ಪ ಬಾಳಿಕಾಯಿ, ಶಿವಾನಂದ ಅಂಗಡಿ, ಅಣ್ಣೇಶ ಉಳ್ಳಾಗಡ್ಡಿ, ಶ್ರೀಶೈಲಗೌಡ ಪಾಟೀಲ, ಮಹಾದೇವಪ್ಪ ಬಂಡಿ, ಮುಸ್ತಾಕ ಚಿಕ್ಕೋಡಿ, ಮಹೇಶ ಮುಕುಂದ, ಮಹಾದೇವ ಕಡಬಲ್ಲವರ, ನಾಗಲಿಂಗ ಬಡಿಗೇರ, ಶಿವು ಹೂಗಾರ, ಪರಸು ಅಮರಾವತಿ, ಮುಭಾರಕ ಹಳಿಂಗಳಿ,ಮುತ್ತು ಬಜಂತ್ರಿ, ಮ್ಯಾನೇಜರ ಎಸ್.ಎಂ ಗುಣದಾಳ, ಸಿಬ್ಬಂದಿಗಳಾದ ಎಂ.ಎಂ ಗುಜ್ಜರ, ಎಸ್.ಜಿ ಹುಬ್ಬಳ್ಳಿ, ಎಸ್.ಆರ್ ಹಿಕಟಿ, ಆಯ್.ಎಸ್ ಮಠದ, ರಾಜು ಕಾಗಿ, ಎಂ.ಎಸ್ ದಂಡಿನ ಸೇರಿದಂತೆ ಹಲವರು ಇದ್ದರು.