ಮಾತಲ್ಲೆ ಉಳಿದ ಮಹದಾಯಿ : ಸರಕಾರದ ಇಚ್ಛಾಶಕ್ತಿ ಕೊರತೆಗೆ ಮಣ್ಣು ಪಾಲಾಗುತ್ತಿದೆ ಮಹದಾಯಿ ಮಡಿಲು

ಮಾತಲ್ಲೆ ಉಳಿದ ಮಹದಾಯಿ : ಸರಕಾರದ ಇಚ್ಛಾಶಕ್ತಿ ಕೊರತೆಗೆ ಮಣ್ಣು ಪಾಲಾಗುತ್ತಿದೆ ಮಹದಾಯಿ ಮಡಿಲು

ಪಾರೇಶ ಭೋಸಲೆ 

ಬೆಳಗಾವಿ : ಚುನಾವಣೆ ಸಮೀಸುತ್ತಿದ್ದಂತೆ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಮಹದಾಯಿ ಯೋಜನೆ ಪ್ರಾರಂಭಿಸುವದಾಗಿ ಹೇಳುವ ರಾಜಕೀಯ ನಾಯಕರು ಅಧಿಕಾರಕ್ಕೇರಿದಾಗ ಯಾವ ಮಹಾದಾಯಿ ಎಂದು ಕೇಳುವ ಪ್ರಸಂಗಗಳು ನಡೆದು ಚುನಾವಣೆಯ ವೇಳೆ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಮಹದಾಯಿ ಬಾಯಿಮಾತಲ್ಲೆ ಉಳಿದು ಕೊಂಡಿರುವದು ಈ ಭಾಗದ ಜನರಿಗೆ ನೋವಿನ ಸಂಗತಿಯಾಗಿದೆ.


   ಹೌದು ಓದುಗರೇ ಸರಕಾರಗಳ ಇಚ್ಛಾಶಕ್ತಿ ಕೊರೆತೆಯಿಂದ ಉತ್ತರ ಕರ್ನಾಟಕದ ಮಹತ್ವದ ಕುಡಿಯುವ ನೀರಿನ ಮಹದಾಯಿ ಯೋಜನೆಯು ಮಣ್ಣು ಪಾಲಾಗುತ್ತಿದ್ದು, ನ್ಯಾಯಾಧಿಕರಣ ನೀಡಿರುವ ಆದೇಶದಂತೆ 13.5 ಟಿಎಮ್ ಸಿ ನೀರನ್ನು ಕೂಡಾ ಬಳಕೆ ಮಾಡಲು ಸರಕಾರ ಕ್ರಮಕೈಗೊಳ್ಳದೆ ಇರುವದು ದುರ್ಧೈವದ ಸಂಗತಿಯಾಗಿದೆ. 

     ಚುನಾವಣೆ ಪ್ರಚಾರದ ಭರಾಟೆಯಲ್ಲಿ ನಾವು ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಮಹದಾಯಿ ಯೋಜನೆ ಪ್ರಾರಂಭಿಸುತ್ತೇನೆ ಎಂದು ಈ ಭಾಗದ ಜನರನ್ನು ಮೂರ್ಖರನ್ನಾಗಿ ಮಾಡುವ ರಾಜಕೀಯ ಮುಖಂಡರು ಚುನಾವಣೆ ಮುಗಿದು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಮಹದಾಯಿ ಕಡಿಗೆ ಹಿಂದಿರುಗಿ ನೋಡದೆ ಇರುವದು ದುಂಃಖದ ಸಂಗತಿಯಾಗಿದೆ.


      ಮಹದಾಯಿ ನದಿಯಿಂದ 13.5 ಟಿಎಮ್ ಸಿ ನೀರನ್ನು ಕರ್ನಾಟಕದವರು ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳಬಹುದು ಎಂದು ನ್ಯಾಯಾಧೀಕರಣ ಆದೇಶ ಮಾಡಿ ವರ್ಷಗಳೆ ಗತಿಸಿದರು ಯಾವ ಸರಕಾರಗಳು ಈ ನೀರನ್ನು ಬಳಸಿಕೊಳ್ಳಲು ಮುಂದೆ ಬಾರದೆ ಬಾಯಿಮಾತಲ್ಲೆ ಕಾಲಹರಣ ಮಾಡುತ್ತಿರುವದು ನೋಡಿದರೆ ರಾಜ್ಯವನ್ನೇ ಆಳುವ ಸರಕಾರಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಎಷ್ಟು ಮಲತಾಯಿ ಧೋರಣೆ ಇದೆ ಎನ್ನುವದು ಇಲ್ಲಿ ಎದ್ದು ಕಾಣುತ್ತದೆ. 


    ರಾಜ್ಯದ ಮಹದಾಯಿ ನೀರಿನ ಯೋಜನೆಗೆ ಈಗಾಗಲೇ ಗೋವಾ ಸರಕಾರ ಅಡ್ಡುಗಾಲಾಗಿ ನಿಂತು ತಾನೇ ತೋಡಿದ ಬಾವಿ ತಾನೇ ಬಿದ್ದು ಒದ್ದಾಡುವಂತಾಗಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ಮಾತ್ರ ತಮಗೆ ಸಿಕ್ಕಿರುವ ನೀರನ್ನು ಬಳಸಿಕೊಳ್ಳಲು ಮುಂದೆ ಬಾರದೆ ಇರುವದು ದುರಂತ ಎಂದು ಹೇಳಲಾಗುತ್ತಿದೆ.

   ಇನ್ನು ವರೆಗೆ ಕೇಂದ್ರದ ಅರಣ್ಯ ಪರಿಸರ ಇಲಾಖೆಯಿಂದ ಅನುಮತಿ ಇಲ್ಲ : ಚಂದರಗಿ

     ಈಗಾಗಲೆ ಮಹದಾಯಿಯ ಎರಡು ನಾಲೆಗಳಾದ ಕಳಸಾಗೆ 415 ಕೋಟಿ ಹಾಗೂ ಬಂಡೂರಾಗೆ 543 ಕೋಟಿ ಟೆಂಡರ್ ಓಪನ್ ಆಗಿದೆ ಎಂದು ಹೇಳಲಾಗುತ್ತಿದ್ದರೂ ಎಲ್ಲಿ ವರೆಗ ಬಂದಿದೆ ಗೊತ್ತಾಗತಾ ಇಲ್ಲ. ಆದರೆ ಇಲ್ಲಿಯ ವರೆಗೆ ಕೇಂದ್ರದ ಅರಣ್ಯ, ಪರಿಸರ ಇಲಾಖೆಯಿಂದ ಇದಕ್ಕೆ ಅನುಮತಿ ದೊರೆತಿಲ್ಲ ಎಂದು ಹೋರಾಟಗಾರ ಅಶೋಕ‌ ಚಂದರಗಿ ಹೇಳಿದ್ದಾರೆ.

ಸುದ್ದಿ ಓದಿ