ಬಳ್ಳಾರಿ

ಬಳ್ಳಾರಿಯಲ್ಲಿ ಮೊದಲ ಬಾರಿಗೆ ನ.4 ರಂದು ಶಿವನಿಗೆ ಮಹಾ ರುದ್ರಭೀಷೇಕ

ಬಳ್ಳಾರಿಯಲ್ಲಿ ಮೊದಲ ಬಾರಿಗೆ ನ.4 ರಂದು ಶಿವನಿಗೆ ಮಹಾ ರುದ್ರಭೀಷೇಕ

ಬಳ್ಳಾರಿ 09: ನಗರದಲ್ಲಿ ಮೊದಲ ಬಾರಿಗೆ, ನಗರದ ಕಪ್ಪಗಲ್ಲು ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ನ.4 ರಂದು ಕಾರ್ತಿಕ ಮಾಸದ ಮೊದಲ ಸೋಮವಾರ ಉಜ್ಜಯಿನಿ ಡಾ.ರಾಜೇಶ್ ನಾಥ್ ಜಿ.ಅಘೋರಿ ಅವರ ನೇತೃತ್ವದಲ್ಲಿ ಮಹಾ ರುದ್ರಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ  ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಅಶೋಕ್ ಅವರು ಹೇಳಿದರು. ನಗರದ ಪ್ರಸಿದ್ಧ ದೇಗುಲ ಕೋಟೆ ಮಲ್ಲೇಶ್ವರ ದೇವಾಲಯದಲ್ಲಿ ಮಂಗಳವಾರ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದೂಗಳ ಅತ್ಯಂತ ಪವಿತ್ರವಾದ, ಶಿವ ಭಕ್ತರಿಗೆ ಪ್ರೀತಿ ಪಾತ್ರವಾದ ಕಾರ್ತಿಕ ಮಾಸದ ಮೊದಲ ಸೋಮವಾರ ನ.4 ರಂದು ’ ಕರ್ನಾಟಕ ಹೈದವ ಡವಲಪ್ ಮೆಂಟ್ ಸೊಸೈಟಿ ಅವರ ಆಶ್ರಯದಲ್ಲಿ ಉಜ್ಜಯಿನಿ ಅಘೋರ ಅಖಾಡ ಉತ್ತರಾಧಿಕಾರಿ ಪರಮ ಡಾ.ರಾಜೇಶ್ ನಾಡ್ ಜಿ ಅಘೋರಿ ಅವರ ನೇತೃತ್ವದಲ್ಲಿ ಮಹಾರುದ್ರಭಿಷೇಕ ಕಾರ್ಯಕ್ರಮವನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು.  

ಪ್ರತಿಯೊಬ್ಬ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಮನವಿ ಮಾಡಿದರು. ಕರ್ನಾಟಕ ಹೈದವ ಡವಲಪ್ ಮೆಂಟ್ ಅಧ್ಯಕ್ಷ ಹರಿನಾಥ್ ಅವರು ಮಾತನಾಡಿ, ಬಳ್ಳಾರಿ ನಗರದಲ್ಲಿ ಮೊದಲ ಬಾರಿಗೆ, ಕಾರ್ತಿಕ ಮಾಸದ ಮೊದಲ ಸೋಮವಾರ ನ.4 ರಂದು ಮಹಾರುದ್ರಭಿಷೇಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ರುದ್ರಾಕ್ಷ ಟೋಕನ್ ಪ್ರವೇಶ ಪತ್ರ ಕಡ್ಡಾಯವಾಗಿದ್ದು, ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು. ಗಣ್ಯರಾದ ಅನಿಲ ಕುಮಾರ ಮೋಕ, ಗುರುಪ್ರಸಾದ್, ಶ್ರೀರಾಮ್, ಅರ್ಜುನ್ ಸಿಂಗ್, ಭರತ್ ಸೋನಿ, ಮಹಾವೀರ್, ಶ್ರೀನಿವಾಸ್, ಶರವಣ ಪಾಟೀಲ್, ಮುರಾರಿ, ಶರಣ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ಪ್ರತಿಯೊಬ್ಬ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಪ್ರವೇಶ ಪತ್ರ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗೆ 7676165625 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ಕೆ.ವಿ.ಎನ್‌.ಶಾಸ್ತ್ರೀ, ಅರ್ಚಕರಾದ ನರಸಿಂಹ ಆಚಾರ್ಯ, ಬಿಜೆಪಿ ಒಬಿಸಿ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ್, ಸಿಎ ಶರಣ್ ಪಾಟೀಲ್, ಅನ್ನಪೂರ್ಣ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ