ಮಹಲಿಂಗಪುರ

ವಚನಗಳನ್ನು ರಕ್ಷಿಸಿ ಇಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದು ಮಡಿವಾಳ ಮಾಚಿದೇವ : ಜಯರಾಮ್ ಶೆಟ್ಟಿ

ವಚನಗಳನ್ನು ರಕ್ಷಿಸಿ ಇಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದು ಮಡಿವಾಳ ಮಾಚಿದೇವ : ಜಯರಾಮ್ ಶೆಟ್ಟಿ

ಮಹಾಲಿಂಗಪುರ 05: ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ಅರಸ ಮೇಲಲ್ಲ ಅಗಸ ಕೀಳಲ, ಎನ್ನುವ ಸಮ ದ್ರಷ್ಟಿಯಿಂದ ಎಲ್ಲರೂ ಒಂದೇ ಮನುಷ್ಯರೂ ಎನ್ನುವ ದೇಯ ಉದ್ದೇಶ ಹೊಂದಿದ ಮಡಿವಾಳ ಮಾಚಿದೇವ ಶರಣರ ಪರಂಪರೆಯಲ್ಲಿ ವೀರ ಶೂರ, ಪ್ರಕಾಶ ಮಾನವಾಗಿ ಕಂಡು ಬಂದವರು 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಆಗಿದ ಶರಣ ಮಾಚಿದೇವ,ವೀರಭದ್ರರ ದೈವಾಂಶ ಸಂಭೂತ ಅವತಾರಿ ಪುರುಷನೆಂದು ಸಾಮಾನ್ಯ ರೂಢಿಯಾಗಿದೆ.ಅವರು ವೀರರಾಗಿದ್ದು ವಚನಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗಿಗೆ ಕೊಡುಗೆಯಾಗಿ ನೀಡಿದರು ಎಂದು ಹಿರಿಯ ಪತ್ರಕರ್ತರಾದ ಜಯರಾಮ ಶೆಟ್ಟಿ ಹೇಳಿದರು. 

 ಸ್ಥಳೀಯ ದೋಬಿ ಘಾಟದಲ್ಲಿ ಜರುಗಿದ ದೋಬಿ ಘಾಟದ ದ್ವಾರ ಬಾಗಿಲು (ಕಮನಾ) ಉದ್ಘಾಟನೆ ಹಾಗೂ ಮಡಿವಾಳ ಮಾಚಿದೇವರ 904 ನೇ ಜಯಂತಿಯನ್ನು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಮಲ್ಲಿಕಾರ್ಜುನಯ್ಯಾ ಸ್ವಾಮಿಗಳ ಶಿಷ್ಯನಾಗಿ ಅಪಾರ ಜ್ಞಾನ, ಮತ್ತು ಶಿಕ್ಷಣ ಪಡೆದುಕೊಂಡಿದ್ದರು. ಬಿಜ್ಜಳನ ರಾಜ್ಯದಲ್ಲಿ ಕ್ರಾಂತಿ ಸಂಭವಿಸಿದಾಗ ಮಡಿವಾಳ ಮಾಚಿದೇವ ಬಸವಣ್ಣನವರ ವಚನಗಳನ್ನು ರಕ್ಷಣೆ ಮಾಡುವ ಸಂಪೂರ್ಣ ಹೊನೆಯನ್ನು ಇವರೇ ವಹಿಸಿಕೊಂಡು ಸಂಪೂರ್ಣವಾಗಿ ರಕ್ಷಿಸಿ ಇಂದಿನ ಪೀಳಿಗೆಗೆ ಕೊಡುಗೆ ಕೊಟ್ಟ ವೀರ ಶರಣ ಮಾಚಿದೇವ ಎಂದರು. 

ನಂತರ ಮಾತನಾಡಿದ ಕ ಸಾ ಪ ವಲಯ ಘಟಕದ ಅಧ್ಯಕ್ಷರು ಹಾಗೂ ಶಿಕ್ಷರಾದ ಬಸವರಾಜ ಮೇಟಿ ಇವರು ಶರಣರಾದ ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ, ಅವರನ್ನು ರಕ್ಷಿಸಿ ಕಲಚುರ್ಯರಾಯ ಮುರಾರಿಯನ್ನು ಭೀಮಾ ನದಿಯನ್ನು ದಾಟಿ ತಲ್ಲೂರ ಮುರಗೋಡ, ಕಡಕೋಳ, ತಡಕೋಡ, ಮುಗಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ಮಾಡಿ ತಮ್ಮ ಧೈರ್ಯ ಅನುಪಮ ಸಾಹಸ ಬಲದಿಂದ ಶರಣರನ್ನು ವಚನ ಸಾಹಿತ್ಯವನ್ನು ರಕ್ಷಿಸಿ ಉಳುವಿಗೆ ತಲುಪಿಸಿದ ಸಾಹಸೀ ಮಡಿವಾಳ ಮಾಚಿದೇವ ಎಂದರು. 

ಆಶೀರ್ವಚನ ನೀಡಿ ಮಾತನಾಡಿದ ಜಂಜರವಾಡದ ಶರಣರಾದ ಬಸವರಾಜೇಂದ್ರ ಅವರು ಮಾಚಿದೇವ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ 1120 ರಲ್ಲಿ ಪರುವತಯ್ಯ ಸುಜ್ಞಾನವ್ವಾ ಪವಿತ್ರ ಉದರದಲ್ಲಿ ಜನಿಸಿದರು, ಅನೇಕ ವಚನಗಳನ್ನು ರಚಿಸಿದರು, ಬಸವಣ್ಣನವರ ವಚನಗಳನ್ನು ರಕ್ಷಿಸಿದರು, ಉಳುವಿಯ ಚನ್ನಬಸವಣ್ಣವರನ್ನು ಸುರಕ್ಷಿತವಾಗಿ ತಲುಪಿಸಿದ ಕೀರ್ತಿ ಇವರದು ಇವರ ಜಯಂತಿಯನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ​‍್ರದೇಶ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ ಎಂದರು. 

ಸರ್ಕಲ ಉದ್ಘಾಟನೆ : ದೋಬಿ ಘಾಟ ಎದುರಗಡೆ ಇರುವ ಕೂಡು ರಸ್ತೆಯಲ್ಲಿ ಶ್ರೀ ಗುರು ಮಡಿವಾಳ ಮಾಚಿದೇವರ ಸರ್ಕಲ ಪೂಜೆ ಸಲ್ಲಿಸಿ ನೂತನ ಸರ್ಕಲ ಉದ್ಘಾಟೀಸಲಾಯಿತು. 

ಸನ್ಮಾನ : ಈ ಸಂಧರ್ಭದಲ್ಲಿ ಸಮಾಜದ ವಿವಿಧ ಸಾಧನೆ ಮಾಡಿದ, ಹಾಗೂ ಊರಿನ ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಸಮಾಜದ ಹಿರಿಯರಾದ ರಮೇಶ ಮಹಾಲಿಂಗಪ್ಪ ಮಡಿವಾಳ ಅಧ್ಯಕ್ಷತೆ ವಹಿಸಿದರು, ಸಂಗಮೇಶ ಮಡಿವಾಳ, ಮುತ್ತಪ್ಪ ವಿ ಮಡಿವಾಳ,ಪುರಸಭೆ ಸದಸ್ಯರಾದ ರಾಜು ಚಮಕೇರಿ, ರವಿ ಜವಳಗಿ ಮುಖಂಡರಾದ ಸುನೀಲಗೌಡ ಪಾಟೀಲ,ಅರ್ಜುನ ಮಡಿವಾಳ, ಶಿವನಗೌಡ ಪಾಟೀಲ, ಶಂಕರಗೌಡ ಪಾಟೀಲ, ರವಿಗೌಡ ಪಾಟೀಲ, ವಿಜಯಕುಮಾರ ಕುಳಲಿ, ಬಸವರಾಜ ಮಡಿವಾಳ, ಮಹಾಂತೇಶ ಮಡಿವಾಳ, ಗೋಪಿ ಮಡಿವಾಳ, ಬನಪ್ಪ ಮಡಿವಾಳ, ಪಾಂಡಪ್ಪ ಮಡಿವಾಳ, ಕಲ್ಲಪ್ಪ ಚಿಂಚಲಿ, ಮುತ್ತಪ್ಪ ದಲಾಲ, ಆರ್ ಎಸ್ ಪರೀಟ ವಿಜೂಗೌಡ ಪಾಟೀಲ, ಚಂದ್ರಶೇಖರ ಕಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಪುರಸಭೆ ಸದಸ್ಯರಾದ ಶೇಖರ ಅಂಗಡಿ ಸಮಾಜದ ಮುಖಂಡರಾದ ಸುರೇಶ ಮಡಿವಾಳ , ರಮೇಶ ಮಡಿವಾಳಪ್ಪ ಮಡಿವಾಳ,ಬಸವರಾಜ ಪರೀಟ, ಪ್ರಭು ಬೆಳಗಲಿ,ಸಿದ್ದಲಿಂಗ ಪರೀಟ, ದುಂಡಪ್ಪ ಮಡಿವಾಳ, ರಮೇಶ ಮಡಿವಾಳ, ಮಾರುತಿ ಮಡಿವಾಳ, ಶುಭಾಸ ಮಡಿವಾಳ, ಮಡಿವಾಳಪ್ಪ ಮಡಿವಾಳ. ಶ್ರೀನಿವಾಸ ಮಡಿವಾಳ, ಚನ್ನಪ್ಪ ಗು ಮಡಿವಾಳ, ವಿಜಯ ಮಡಿವಾಳ, ಮಲ್ಲು ಸಿ ಮಡಿವಾಳ,ಕಲ್ಲು ಪರೀಟ, ಪಾಂಡು ಪರೀಟ, ರವಿ ಪರೀಟ, ಸಂತೋಷ ಮಡಿವಾಳ, ಚನ್ನು ಮಡಿವಾಳ,ಭೀಮಶಿ ನೇಗಿನಾಳ ಶುಭಾಸ ಮಡಿವಾಳ, ಮಾನಿಂಗ ಸಂಗಪ್ಪ ಮಡಿವಾಳ ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ಈರಣ್ಣ ಶಿರೋಳ ನಿರೂಪಿಸಿದರು, ರಮೇಶ ಮಡಿವಾಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು ಸಂಗಪ್ಪ ಮಡಿವಾಳ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ