ಬ್ಯಾಡ್ಗಿ

ಒಳ ಮೀಸಲಾತಿ ಜಾರಿ ಮಾಡದೆ ಡೇಟು ಹಾಕುತ್ತಿರುವ ಸರ್ಕಾರದ ನಡೆ ಮಾದಿಗರ ಆಕ್ರೋಶ

ಒಳ ಮೀಸಲಾತಿ ಜಾರಿ ಮಾಡದೆ ಡೇಟು ಹಾಕುತ್ತಿರುವ ಸರ್ಕಾರದ ನಡೆ ಮಾದಿಗರ ಆಕ್ರೋಶ

ಬ್ಯಾಡಗಿ 13 : . ಒಳ ಮೀಸಲಾತಿ ಜಾರಿ ಮಾಡದೆ ಡೇಟು ಹಾಕುತ್ತಿರುವ ಸರ್ಕಾರದ ನಡೆ ಮಾದಿಗರ ಆಕ್ರೋಶಕ್ಕೆ ಕಾರಣವಾಗಿದೆ ಕೂಡಲೇ ಸರ್ಕಾರವು ಮಾದಿಗರಿಗೆ ಒಳ ಮೀಸಲಾತಿ ಜಾರಿಗೆ ಮಾಡಬೇಕೆಂದು ಆದಿ ಜಾಂಬವ  ಮಾದಿಗ ಸಮುದಾಯದ ತಾಲೂಕ ಅಧ್ಯಕ್ಷ ಸೋಮಣ್ಣ ಮಾಳಗಿ ಆಗ್ರಹಿಸಿದರು.ಪಟ್ಟಣದ ಅಂಬೇಡ್ಕರ್ ಭವನದಿಂದ ಪ್ರತಿಭಟನೆ ಮಾಡುವ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾದು ಹಳೆ ಪುರಸಭೆಯ ಎದರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಮಾತನಾಡಿ ನಮ್ಮ ಸಮಾಜ ಕಳೆದೆ 35 ವರ್ಷಗಳಿಂದ ಒಳ ಮೀಸಲಾತಿಗೆ ಆಗ್ರಹಿಸಿ ಸುದೀರ್ಘ ಹೋರಾಟ ಮಾಡಿದೆ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯದಲ್ಲಿ ಒಳಮಿಸಲಾತಿ ಜಾರಿಯಾಗಿದೆ ಆದರೆ ಒಳ ಮೀಸಲಾತಿ ಅಳವಡಿಸದೆ 56 ಖಾಲಿ ಹುದ್ದೆಗಳನ್ನು ತುಂಬಲು ಸರ್ಕಾರ ನೋಟಿಫಿಕೇಶನ್ ಹೊರಡಿಸಿದೆ ಸರ್ಕಾರದ ಈ ಕ್ರಮ ಮಾದಿಗ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಅಧಿಸೂಚನೆಯನ್ನು ಹಿಂಪಡೆದು ಹೊಸ ಅಧಿ ಸೂಚನೆಯನ್ನು ಹೊರಡಿಸಬೇಕು ಒಳ ಮೀಸಲಾತಿ ಅಡಿ ಕಾಲಿ ಹುದ್ದೆಗಳು ಭರ್ತಿ ಮಾಡಬೇಕು ಶೇಕಡ 15ರ ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಕ್ರಮ ತೆಗೆದುಕೊಳ್ಳುಬೇಕು ಪರೀಕ್ಷೆ ಜಾರಿಗೆ ಗೊಳಿಸಬೇಕೆಂದು ಆಗ್ರಹಿಸಿದರು.

ಸಮಾಜದ ಮುಖಂಡ ಸುರೇಶ್ ಆಸಾದಿ ಮಾತನಾಡಿಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲೂ ಭರವಸೆ ನೀಡಲಾಗಿತ್ತು. ಇದನ್ನು ನಂಬಿ ದಲಿತರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಅಧಿಕಾರಕ್ಕೆ ಬಂತು. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದರು. ರವಿ ಹುಣಸಿಮರದ ಮಾತನಾಡಿ ಸ್ವಾತಂತ್ರ ನಂತರದ ಭಾರತದ ಇತಿಹಾಸದಲ್ಲಿ ಸುದೀರ್ಘವಾದ ಹೋರಾಟ ಇದ್ದರೆ ಅದು ಒಳ ಮೀಸಲಾತಿ ಹೋರಾಟ ಮಾತ್ರ 35 ವರ್ಷಗಳ ಹೋರಾಟದ ಇತಿಹಾಸ ಸೇರಲಿದೆ ಮೂರು ಪಕ್ಷಗಳು ಸರ್ಕಾರಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ಮಾಡಿ ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು

ಮಾರ್ಚ್‌ 12ರಂದು ಫ್ರೀಡಂ ಪಾರ್ಕ್‌ ನಲ್ಲಿ ಮೀಸಲಾತಿ ಹೋರಾಟ ಪ್ರಾರಂಭವಾಗಲಿದೆ ಒಳ ಮೀಸಲಾತಿ ಪಡೆಯುವರೆಗು ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ದುರ್ಗೇಶ್ ಗೋಣೆಮ್ಮನವರ್‌.  ಬಸವರಾಜ್ ತಡಸರ್‌. ನಾಗರಾಜ ದೊಡ್ಮನಿ. ಸುಭಾಷ್ ಮಾಳಗಿ. ನಾಗರಾಜ್ ಹಾವನೂರ. ಅರುಣ್ ಕೋಡಿಹಳ್ಳಿ. ಶಂಕರ ಕುಸುಗೂರ್ .ಹನುಮಂತಪ್ಪ ಕಾಟೇನಹಳ್ಳಿ. ಮಾರುತಿ ಹಂಜಗಿ. ಮಹದೇವ ಹುಬ್ಬಳ್ಳಿ, ಮಂಜುನಾಥ್ ಹಂಜಗಿ. ಎಂಎನ್ ನಾಯಕ್‌. ಅಪ್ಪು ಬಾಗಲಕೋಟೆ. ಬುದ್ದಿವಂತ ಹಂಜಗಿ. ವಿನಾಯಕ ಹುಬ್ಬಳ್ಳಿ ಹಾಗೂ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ