ಜಯತೀರ್ಥರ ಮಧ್ಯಾರಾಧನೆ, ವಿಶೇಷ ಪೂಜೆ
ಬಳ್ಳಾರಿ,25: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿ ಮಠದಲ್ಲಿ ಜಯತೀರ್ಥರ ಮಧ್ಯಾರಾಧನೆ ಮಹೋತ್ಸವವನ್ನು ಗುರುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಆರಾಧನಾ ಮಹೋತ್ಸವ ನಿಮಿತ್ತ ಶ್ರೀಮಠದ ಪ್ರಧಾನ ಅರ್ಚಕರು, ವ್ಯವಸ್ಥಾಪಕರಾದ ಪಠಶ್ರೀ ನವೀನ್ ಆಚಾರ, ಪಠ. ಪ್ರವೀಣ್ ಆಚಾರ ಅವರ ನೇತೃತ್ವದಲ್ಲಿ ಶ್ರೀಮಠದ ಪಂಚವೃಂದಾವನಗಳಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ನೈವೇದ್ಯ, ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು.
ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ವಿವಿಧ ಪಂಡಿತರಿಂದ ಉಪನ್ಯಾಸ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಜಯತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಹುಬ್ಬಳ್ಳಿ ನವನಗರದ ಪಠ.ಶ್ರೀನಿಧಿ ಆಚಾರ್ಯ ಅವರಿಂದ ಜು.22 ರಿಂದ 25ರ ವರೆಗೆ ನಿತ್ಯ ಸಂಜೆ 6.30 ಕ್ಕೆ ವಿಶೇಷ ಉಪನ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಇತರರಿದ್ದರು.